ನವದೆಹಲಿ: ಪ್ರಮುಖ ಮೊಬೈಲ್ ತಯಾರಕ ಸಂಸ್ಥೆ ನೋಕಿಯಾ ಭಾರತದಲ್ಲಿ 5G ಪ್ರಯೋಗದಲ್ಲಿ ಹೊಸ ದಾಖಲೆ ಬರೆದಿದೆ. ವೊಡಾಫೋನ್-ಐಡಿಯಾ ನೆಟ್‌ವರ್ಕ್‌ನಲ್ಲಿ ಬಳಸುವ 5ಜಿ ಪ್ರಯೋಗಗಳಲ್ಲಿ 9.85 ಜಿಬಿಪಿಎಸ್ ಅತ್ಯಧಿಕ ವೇಗ ದಾಖಲಿಸಿರುವುದಾಗಿ ಕಂಪನಿ ಹೇಳಿದೆ.
ETV Bharat / science-and-technology
ದೇಶದಲ್ಲಿ 5G 9.85 ಜಿಬಿಪಿಎಸ್ ವೇಗ ಪ್ರಯೋಗ: ನೋಕಿಯಾ ಹೊಸ ದಾಖಲೆ - ವೊಡಾಫೋನ್-ಐಡಿಯಾ ನೆಟ್‌ವರ್ಕ್
ದೇಶದಲ್ಲಿ 5G ಗಾಗಿ ಪ್ರಯೋಗಗಳು ವೇಗವಾಗಿ ನಡೆಯುತ್ತಿವೆ. ವೊಡಾಫೋನ್-ಐಡಿಯಾ 9.85 ಜಿಬಿಪಿಎಸ್ ವೇಗದ ಪ್ರಯೋಗದಲ್ಲಿ ಯಶಸ್ವಿಯಾಗಿವೆ ಎಂದು ಈ ಕಂಪನಿಗಳ ಪಾಲುದಾರಿಕೆ ಸಂಸ್ಥೆ ನೋಕಿಯಾ ಇಂಡಿಯಾ ಹೇಳಿದೆ.
ಗುಜರಾತ್‌ನ ಗಾಂಧಿನಗರದಲ್ಲಿ ನಡೆಸಿರುವ ಪ್ರಯೋಗದಲ್ಲಿ ತನ್ನ ತಂತ್ರಜ್ಞಾನದ ಬಳಕೆಯಿಂದಾಗಿ ನೋಕಿಯಾ ಅತಿ ವೇಗದ 5ಜಿ ಸಾಧನೆ ಮಾಡಿರುವುದಾಗಿ ಹೇಳಿಕೊಂಡಿದೆ. ವೊಡಾಫೋನ್ ಐಡಿಯಾ ಜೊತೆಗೂಡಿ ನಾವು 80 Hz ಸ್ಪೆಕ್ಟ್ರಮ್‌ನಲ್ಲಿ 'ಇ-ಬ್ಯಾಂಡ್' ಮೈಕ್ರೋವೇವ್ ಬಳಸಿಕೊಂಡು 9.85 Gbps ವೇಗ ಸಾಧಿಸಿದ್ದೇವೆ. ಈ ಮೂಲಕ 5G ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಈ ಪ್ರಯೋಗಗಳಲ್ಲಿ ವೊಡಾಫೋನ್ ಐಡಿಯಾದೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ ಎಂದು ನೋಕಿಯಾ ಇಂಡಿಯಾ ಟ್ವಿಟರ್‌ನಲ್ಲಿ ತಿಳಿಸಿದೆ.
ಬ್ಯಾಕ್ ಎಂಡ್‌ನಲ್ಲಿ ಮೊಬೈಲ್ ನೆಟ್‌ವರ್ಕ್‌ಗಳನ್ನು ಸಂಪರ್ಕಿಸಲು 'ಇ-ಬ್ಯಾಂಡ್' ಉಪಯುಕ್ತವಾಗಿದೆ. ಆಪ್ಟಿಕಲ್ ಫೈಬರ್ ಮಟ್ಟದಲ್ಲಿ ಡೇಟಾವನ್ನು ರವಾನಿಸಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ವೊಡಾಫೋನ್-ಐಡಿಯಾ 5G ಪ್ರಯೋಗಗಳಲ್ಲಿ 3.7 Gbps ಅನ್ನು ಪಡೆದುಕೊಂಡಿದೆ ಎಂದು ಹೇಳಿದೆ. ಡೌನ್‌ಲೋಡ್ ವೇಗ 1.5 ಜಿಬಿಪಿಎಸ್ ಎಂದು ಕಂಪನಿ ಹೇಳಿಕೊಂಡಿದೆ. 5G ಪ್ರಯೋಗಗಳಿಗಾಗಿ 26 GHz ಹೈ ಫ್ರೀಕ್ವೆನ್ಸಿ ಬ್ಯಾಂಡ್, 3.5 GHz ಸ್ಪೆಕ್ಟ್ರಮ್ ಬ್ಯಾಂಡ್ ಅನ್ನು ವೊಡಾಫೋನ್-ಐಡಿಯಾಗೆ ನಿಯೋಜಿಸಲಾಗಿದೆ.