ಕರ್ನಾಟಕ

karnataka

ETV Bharat / science-and-technology

ಐಫೋನ್‌ -13 ಬಿಡುಗಡೆ; ಸೆ.24ಕ್ಕೆ ಮಾರುಕಟ್ಟೆಗೆ ಲಗ್ಗೆ.. ಏನಿದರ ವಿಶೇಷತೆ? - iPhone 13 Mini

ಆ್ಯಪಲ್ ಸಂಸ್ಥೆಯು ಐಫೋನ್‌ 12ನ್ನು ಪರಿಚಯಿಸಿ ಯಶಸ್ವಿಯಾಗಿತ್ತು. ಈಗಲೂ ಈ ಮಾಡೆಲ್​ ಸದ್ದು ಮಾಡುತ್ತಿದ್ದರೂ ಇದರ ಮಧ್ಯೆ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿದೆ. ಐಫೋನ್‌ 13 ಸರಣಿಯು ಸೆಪ್ಟೆಂಬರ್​ 14ರಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸೆ.24 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

iPhone 13
ಐಫೋನ್‌-13

By

Published : Sep 15, 2021, 6:45 AM IST

ಸ್ಯಾನ್​ ರಾಮನ್( ಅಮೆರಿಕ)​:ಮೊಬೈಲ್​ ಯುಗದಲ್ಲಿ ಜನಪ್ರಿಯವಾಗಿರುವ ಆ್ಯಪಲ್​ ಸಂಸ್ಥೆ ಇದೀಗ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯು ಹಿಂದಿನ ಮಾಡೆಲ್​ಗಳ ಕನ್ನಡಿಯಂತಿದ್ದು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದೆ.

ಈ ಹಿಂದೆ ಆ್ಯಪಲ್ ಸಂಸ್ಥೆಯು ಐಫೋನ್‌ 12ನ್ನು ಪರಿಚಯಿಸಿ ಯಶಸ್ವಿಯಾಗಿತ್ತು. ಈಗಲೂ ಈ ಮಾಡೆಲ್​ ಸದ್ದು ಮಾಡುತ್ತಿದ್ದರೂ ಸಹ ಇದರ ಮಧ್ಯೆ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿದೆ. ಐಫೋನ್‌ 13 ಸರಣಿಯು ಸೆಪ್ಟೆಂಬರ್​ 14ರಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸೆ.24 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಇನ್ನು ಐಫೋನ್ 13 ಸರಣಿ ಜೊತೆಗೆ ಆ್ಯಪಲ್ ಸಂಸ್ಥೆಯು ವಾಚ್ ಸಿರೀಸ್ 7 ಮತ್ತು ಏರ್‌ಪಾಡ್ಸ್ 3ಯನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆ್ಯಪಲ್ ನೂತನ ಐಒಎಸ್ 15, ಮ್ಯಾಕ್‌ಒಎಸ್, ಐಪ್ಯಾಡ್ ಒಎಸ್, ವಾಚ್ ಒಎಸ್ ಕೂಡ ಬಳಕೆದಾರರಿಗೆ ಶೀಘ್ರದಲ್ಲೇ ದೊರೆಯಲಿದೆಯಂತೆ.

ಬಹುನಿರೀಕ್ಷಿತ ಆ್ಯಪಲ್‌ ಐಫೋನ್ 13 ಸರಣಿಯಲ್ಲಿ ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.

ಫೋನ್​ನ ಫೀಚರ್​ಗಳು:

ಐಫೋನ್ 13 ಮಿನಿ ಫೋನ್ 5.4 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಐಫೋನ್ 13 ಫೋನ್ 6.1 ಇಂಚಿನ ಗಾತ್ರ ಪಡೆದಿರಲಿದೆ. ಐಫೋನ್ 13 ಪ್ರೊ ಫೋನ್ ಮಾಡೆಲ್‌ ಸಹ 6.1 ಇಂಚಿನ ಸ್ಕ್ರೀನ್ ಹೊಂದಿರಲಿದೆ. ಇನ್ನು ಐಫೋನ್ 13 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿಯ ಐಫೋನ್‌ 13 ಸರಣಿಯು ವಿಶೇಷ ಕ್ಯಾಮೆರಾ ಫೀಚರ್‌ ಹೊಂದಿರಲಿದೆ. ಈ ಫೋನ್‌ಗಳು ಕಂಚು ಬಣ್ಣ ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳಲ್ಲಿ ಮಾರುಕಟ್ಟೆಗೆ ಆಗಮಿಸಿದೆ. ಬಿಡುಗಡೆ ಆಗಿರುವ ಹೊಸ ಐಫೋನ್ 13 ಫೋನ್​ಗಳು ಐಪ್ಯಾಡ್ ಪ್ರೊ ಮಾದರಿಯಂತೆ 120Hz ರೀಫ್ರೇಶ್ ರೇಟ್ ಹೊಂದಿದೆ.

ಸುಧಾರಿತ ಅಲ್ಟ್ರಾವೈಡ್ ಲೆನ್ಸ್, ಸಿನಿಮಾದಂತಹ ವಿಡಿಯೋ ಫೀಚರ್ ಮತ್ತು ಉತ್ತಮ ಚಿತ್ರಗಳ ವೀಕ್ಷಣೆಗೆಂದು ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಜೊತೆಗೆ ಇತ್ತೀಚಿನ ಐಫೋನ್‌ಗಳು ಹೆಚ್ಚು ಬಾಳಿಕೆ ಬರುವ ಬ್ಯಾಟರಿಗಳನ್ನು ಹೊಂದಿರುತ್ತವೆ.

ABOUT THE AUTHOR

...view details