ಇಂದೋರ್(ಮಧ್ಯಪ್ರದೇಶ) :ತಂತ್ರಜ್ಞಾನ ಮುಂದುವರೆದಂತೆ ಕಂಪ್ಯೂಟರ್ ಬಳಕೆ ಮತ್ತಷ್ಟು ಸುಲಭವಾಗುತ್ತಲೇ ಇದೆ. ಎಲ್ಲಾ ವಯಸ್ಸಿನವರಿಗಾಗಿ ಕಂಪ್ಯೂಟರ್ ಸ್ನೇಹಿಯಾಗಿರುವ ಅಲೆಕ್ಸಾ ಪ್ರಸ್ತುತ ಜಗತ್ತಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ.
ಧ್ವನಿ ಮೂಲಕ ಏನೇ ಕೇಳಿದರೂ ಅಲೆಕ್ಸಾ ಮಾಹಿತಿ ನೀಡುತ್ತದೆ. ಆದರೆ, ಮಧ್ಯಪ್ರದೇಶದ ಇಂದೋರ್ ಮೂಲದ 7ನೇ ತರಗತಿಯ ವಿದ್ಯಾರ್ಥಿ ಇಂತಹದ್ದೇ ತಂತ್ರಜ್ಞಾನವನ್ನು ಅವಿಷ್ಕಾರ ಮಾಡಿದ್ದಾರೆ. ತನ್ನ ಮಯಸ್ಸಿಗೂ ಮೀರಿದ ಈ ಸಾಧನೆಗಾಗಿ ಬಾಲಕನಿಗೆಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ವಂಡರ್ ಬಾಯ್ ಖ್ಯಾತಿಯ ಇಂದೋರ್‌ನ ಅವಿ ಶರ್ಮಾ ಧ್ವನಿ ಕಮಾಂಡ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಮಾಧವ್(MADHAV) (ಮೈ ಅಡ್ವಾನ್ಸ್ ಡೊಮೆಸ್ಟಿಕ್ ಹ್ಯಾಂಡ್ಲಿಂಗ್ ಐ ಆವೃತ್ತಿ) ಎಂದು ಹೆಸರಿಟ್ಟಿದ್ದಾರೆ.
7ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಅವಿ ಕಂಪ್ಯೂಟರ್ ಕೋಡಿಂಗ್‌ನ ಪೈಥಾನ್ ಭಾಷೆಯನ್ನು ಸ್ವತಃ ಕಲಿತು ಕಂಪ್ಯೂಟರ್ ಮೂಲಕ ಮಾಡುವ ಎಲ್ಲಾ ಕಾರ್ಯಗಳನ್ನು ಒಂದೇ ಧ್ವನಿಯಲ್ಲಿ ಮಾಡಬಹುದಾದ ಧ್ವನಿ ಆಜ್ಞೆಯ ಸಹಾಯ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.
ಮಾಧವ್ ಕ್ರಿಕೆಟ್ ಬಗ್ಗೆ ಹೇಳಿ, ಸಲ್ಮಾನ್ ಹುಟ್ಟು ಹಬ್ಬ ಯಾವಾಗ ಹೀಗೆ ಧ್ವನಿ ಮೂಲಕ ಏನೇ ಪ್ರಶ್ನೆ ಕೇಳಿದರೂ ವಿಕಿಪೀಡಿಯ ಮಾಹಿತಿ ಆಧರಿಸಿ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡುತ್ತದೆ. ಅವಿ ಶರ್ಮಾ ಅವರ ಈ ಆವಿಷ್ಕಾರ ಅಚ್ಚರಿ ಮೂಡಿಸುತ್ತಿದೆ.