ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್): ಗೂಗಲ್ ಪಿಕ್ಸೆಲ್ ಸರಣಿಯ ಬಹುನಿರೀಕ್ಷಿತ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ಸಂಸ್ಥೆ ಘೋಷಿಸಿತ್ತು. ಆದರೆ ಇದಕ್ಕೂ ಮೊದಲೇ ಈ ಎರಡೂ ಮೊಬೈಲ್ ಸಿರೀಸ್ಗಳ ಫೀಚರ್ಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ.
ತೈವಾನ್ ಮೂಲದ ಎನ್ಸಿಸಿ ಡೇಟಾಬೇಸ್ ವೆಬ್ಸೈಟ್ನಲ್ಲಿ ಈ ಎರಡೂ ಮೊಬೈಲ್ಗಳು ಲಿಸ್ಟಿಂಗ್ ಆಗಿದ್ದು, ಇವೆರಡರ ಎಕ್ಸ್ಕ್ಲೂಸಿವ್ ಫೀಚರ್ ಬಹಿರಂಗವಾಗಿದೆ. ಮುಖ್ಯವಾಗಿ ಇದೇ ಮೊದಲ ಬಾರಿಗೆ ಗೂಗಲ್ ತನ್ನ 6 ಪ್ರೊ ಮೊಬೈಲ್ನಲ್ಲಿ 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಪರಿಚಯಿಸುತ್ತಿದೆ ಎಂದು ವೆಬ್ಸೈಟ್ ತಿಳಿಸಿದೆ.
ಜೊತೆಗೆ ಈ ಮೊಬೈಲ್ನಲ್ಲಿ 5,000mAh ಬ್ಯಾಟರಿ ಇರಲಿದ್ದು, ಇದು ಈ ಹಿಂದೆ ಬಿಡುಗಡೆಯಾದ ಪಿಕ್ಸೆಲ್ ಮೊಬೈಲ್ಗೆ ಹೋಲಿಸಿದರೆ ಬಹುದೊಡ್ಡ ಅಪ್ಗ್ರೇಡ್ ಎಂದು ವರದಿಯಾಗಿದೆ. ಜೊತೆಗೆ ಫುಲ್ ಹೆಚ್ಡಿ ಡಿಸ್ಪ್ಲೇಗೆ 120Hzನ ರಿಫ್ರೆಶ್ ರೇಟ್ ಸಿಗಲಿದೆ. ಇದರ ಜೊತೆ ಡಿಜಿಟಲ್ ಕಾರ್ ಕಿ ಅಪ್ಲಿಕೇಶನ್ ಪ್ರಿ ಇನ್ಸ್ಸ್ಟಾಲ್ ಆಗಿರಲಿದೆ ಎಂದು ವೆಬ್ಸೈಟ್ ಉಲ್ಲೇಖಿಸಿದೆ.