ಕರ್ನಾಟಕ

karnataka

ಕೋವಿಡ್​-19 ಹೋರಾಟ; ಪಿಪಿಇ ಕಿಟ್​ ತಯಾರಿಸಿ ಉಚಿತವಾಗಿ ಹಂಚುತ್ತಿರುವ ಸಿಎಸ್​ಐಆರ್​

By

Published : Apr 10, 2020, 12:38 PM IST

Updated : Feb 16, 2021, 7:51 PM IST

ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಯಾನಿಟೈಜರ್​, ಆಸ್ಪತ್ರೆ ಸಲಕರಣೆಗಳು ಮತ್ತು ವೈಯಕ್ತಿಕ ಸುರಕ್ಷತಾ ಕವಚ ಅತಿ ತುರ್ತಾಗಿ ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಸಿಎಸ್​ಐಆರ್​-ಸಿಇಸಿಆರ್​ಐ ಪ್ರಯೋಗಾಲಯದಲ್ಲಿ ಹಲವಾರು ಪಿಪಿಇಗಳನ್ನು ತಯಾರಿಸಿ ಅಗತ್ಯವಿರುವ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.

CSIR-Central Electrochemical Research Institute Scale up Personal Protective Equipment
CSIR-Central Electrochemical Research Institute Scale up Personal Protective Equipment

ಕರೈಕುಡಿ (ತಮಿಳು ನಾಡು): ಕೋವಿಡ್​-19 ಚಿಕಿತ್ಸೆಗೆ ಅತ್ಯಗತ್ಯವಾದ ಪಿಪಿಇ (Personal Protective Equipment) ಗಳನ್ನು ಉತ್ಪಾದಿಸಲು ಸರಕಾರಿ ಸ್ವಾಮ್ಯದ ಸಿಎಸ್​ಐಆರ್ (The Council of Scientific and Industrial Research) (ವೈಜ್ಞಾನಿಕ ಮತ್ತು ಔದ್ಯೋಗಿಕ ಅನುಸಂಧಾನ ಪರಿಷತ್) ಮುಂದಾಗಿದೆ. ತಮಿಳುನಾಡಿನ ಕರೈಕುಡಿಯಲ್ಲಿರುವ ಸಿಎಸ್​ಐಆರ್​ ನ ಸಿಇಸಿಆರ್​ಐ (Central Electrochemical Research Institute) ಪ್ರಯೋಗಾಲಯದಲ್ಲಿ ಕೋವಿಡ್​ ಚಿಕಿತ್ಸೆಗೆ ಬೇಕಾದ ಪಿಪಿಇ ಗಳ ಸಂಶೋಧನೆ ಹಾಗೂ ಉತ್ಪಾದನೆಯ ಕೆಲಸ ನಡೆಯುತ್ತಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಯಾನಿಟೈಜರ್​, ಆಸ್ಪತ್ರೆ ಸಲಕರಣೆಗಳು ಮತ್ತು ವೈಯಕ್ತಿಕ ಸುರಕ್ಷತಾ ಕವಚ ಅತಿ ತುರ್ತಾಗಿ ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಸಿಎಸ್​ಐಆರ್​-ಸಿಇಸಿಆರ್​ಐ ಪ್ರಯೋಗಾಲಯದಲ್ಲಿ ಹಲವಾರು ಪಿಪಿಇಗಳನ್ನು ತಯಾರಿಸುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ-

- ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಹ್ಯಾಂಡ್​ ಸ್ಯಾನಿಟೈಸರ್ ತಯಾರಿಕೆ

- ತೆಂಗಿನ ಎಣ್ಣೆ ಹಾಗೂ ಸೋಡಿಯಂ ಹೈಪೊಕ್ಲೋರೈಟ್​ ಆಧರಿತ ಕೈತೊಳೆಯುವ ದ್ರಾವಣ ತಯಾರಿಸಲಾಗುತ್ತಿದೆ. ಇವನ್ನು ಕಂಟೇನರ್​ಗಳಲ್ಲಿ ಪ್ಯಾಕ್​ ಮಾಡಿ ಅವುಗಳ ಮೇಲೆ ಬಳಕೆಯ ನಿರ್ದೇಶನಗಳ ಲೇಬಲ್​ ಅಂಟಿಸಿ ಅಗತ್ಯ ಸಂಸ್ಥೆಗಳಿಗೆ ಉಚಿತವಾಗಿ ಪೂರೈಸಲಾಗುತ್ತಿದೆ.

ಇಲ್ಲಿಯವರೆಗೆ 350 ಲೀಟರ್ ಹ್ಯಾಂಡ್​ ಸ್ಯಾನಿಟೈಜರ್, 250 ಲೀಟರ್ ಕೈ ತೊಳೆಯುವ ದ್ರಾವಣಗಳನ್ನು ಕರೈಕುಡಿ ಮಹಾನಗರ ಪಾಲಿಕೆ, ದೇವಕೊಟ್ಟೈ ಪಾಲಿಕೆ, ಸಿವಗಂಗಾ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕರೈಕುಡಿಯ ಸರ್ಕಾರಿ ಆಸ್ಪತ್ರೆ, ಕರೈಕುಡಿಯ ಎಸ್ಪಿ ಕಚೇರಿ ಹಾಗೂ ಸುತ್ತಮುತ್ತಲಿನ ಪೊಲೀಸ್​ ಠಾಣೆಗಳು, ತಾಲೂಕಾಫೀಸು, ಹತ್ತಿರದ ಪಂಚಾಯತ್ ಕಚೇರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕೆಲ ಸರ್ಕಾರಿ ಬ್ಯಾಂಕುಗಳಿಗೆ ಪೂರೈಕೆ ಮಾಡಲಾಗಿದೆ.

ಗ್ರಾಮೀಣ ಮಹಿಳೆಯರಿಗೆ ಮಾಸ್ಕ್​ ತಯಾರಿಕೆ ಕುರಿತು ಡಿಜಿಟಲ್ ತರಬೇತಿಯನ್ನು ಸಹ ಸಿಎಸ್​ಐಆರ್​-ಸಿಇಸಿಆರ್​ಐ ನೀಡುತ್ತಿದೆ. ಇದರ ಜೊತೆಗೆ 3ಡಿ ಪ್ರಿಂಟೆಡ್ ಮರುಬಳಕೆ ಮಾಡಬಹುದಾದ ಫೇಸ್​ ಶೀಲ್ಡ್​ಗಳನ್ನು ತಯಾರಿಸಿ ಸಿಎಸ್​ಐಆರ್​-ಸಿಇಸಿಆರ್​ಐ ಆಸ್ಪತ್ರೆ ಸಿಬ್ಬಂದಿಗೆ ನೀಡಲಾಗಿದೆ.

Last Updated : Feb 16, 2021, 7:51 PM IST

ABOUT THE AUTHOR

...view details