ಕರ್ನಾಟಕ

karnataka

ETV Bharat / science-and-technology

ಪಿಕ್ಸೆಲ್‌ ಫೋನ್‌ಗಳಿಗೂ ಆಂಡ್ರಾಯ್ಡ್‌ 12 ಲಭ್ಯ - Google - ಆಂಡ್ರಾಯ್ಡ್ 12

ಆಂಡ್ರಾಯ್ಡ್ 12 ಆವೃತ್ತಿಯು ಈ ವರ್ಷದ ಕೊನೆಯ ವೇಳೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ, ಒನ್‌ಪ್ಲಸ್, ಒಪ್ಪೋ, ರಿಯಲ್‌ಮಿ, ಟೆಕ್ನೋ, ವಿವೋ ಮತ್ತು ಶಿಯೋಮಿ ಫೋನ್‌ಗಳಿಗೆ ಬರಲಿದೆ ಎಂದು ಟೆಕ್‌ ದೈತ್ಯ ಸಂಸ್ಥೆ ಗೂಗಲ್‌(Google) ಹೇಳಿದೆ.

Android 12 now available for Pixel phones
ಪಿಕ್ಸೆಲ್‌ ಫೋನ್‌ಗಳಿಗೂ ಆಂಡ್ರಾಯ್ಡ್‌ 12 ಲಭ್ಯ - ಗೂಗಲ್‌

By

Published : Oct 20, 2021, 3:53 PM IST

ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್): ಟೆಕ್ ದೈತ್ಯ ಸಂಸ್ಥೆ ಗೂಗಲ್(Google) ಈಗ ಆಂಡ್ರಾಯ್ಡ್ 12 ರ ಅಂತಿಮ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಪಿಕ್ಸೆಲ್ 3 ರವರೆಗಿನ ಸ್ಮಾರ್ಟ್ ಫೋನ್ ಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ.

ದಿ ವರ್ಜ್ ಪ್ರಕಾರ, ಆಂಡ್ರಾಯ್ಡ್ 12 ಅನ್ನು ಈಗ ಪಿಕ್ಸೆಲ್ 3, ಪಿಕ್ಸೆಲ್ 3ಎ, ಪಿಕ್ಸೆಲ್ 4, ಪಿಕ್ಸೆಲ್ 4ಎ, ಪಿಕ್ಸೆಲ್ 4ಎ 5 ಜಿ, ಪಿಕ್ಸೆಲ್ 5 ಮತ್ತು ಪಿಕ್ಸೆಲ್ 5ಎ ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದು ಪಿಕ್ಸೆಲ್‌ 6 ಮತ್ತು ಪಿಕ್ಸೆಲ್‌ 6 Pro ಗಳಲ್ಲೂ ಬಿಡುಗಡೆಯಾಗಲಿದೆ. ಆಂಡ್ರಾಯ್ಡ್ 12 ಈ ವರ್ಷದ ಕೊನೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ, ಒನ್‌ಪ್ಲಸ್, ಒಪ್ಪೋ, ರಿಯಲ್‌ಮಿ, ಟೆಕ್ನೋ, ವಿವೋ ಮತ್ತು ಶಿಯೋಮಿ ಫೋನ್‌ಗಳಿಗೆ ಬರಲಿದೆ ಎಂದು ವರದಿ ಹೇಳಿದೆ.

ಆಂಡ್ರಾಯ್ಡ್ 12 ರಲ್ಲಿ ಅತ್ಯಂತ ಗಮನಾರ್ಹವಾದ ವೈಶಿಷ್ಟ್ಯವೆಂದರೆ ಹೊಸ 'ಮೆಟೀರಿಯಲ್ ಯು' ವಿನ್ಯಾಸವಾಗಿದ್ದು, ಬಳಕೆದಾರರು ನಿಮ್ಮ ಇಚ್ಛೆಯಂತೆ ಹೋಮ್ ಸ್ಕ್ರೀನ್‌ನ ನೋಟವನ್ನು ಸ್ವಲ್ಪ ಆಳಕ್ಕೆ ತಿರುಗಿಸಲು ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್‌ನ ಹಿಂದಿನ ಆವೃತ್ತಿಗಳಿಗಿಂತ ಇದು ಹೆಚ್ಚು ಅಭಿವ್ಯಕ್ತವಾಗಿದೆ. ಆ್ಯಪ್ ಐಕಾನ್‌ಗಳು, ಪುಲ್-ಡೌನ್ ಮೆನುಗಳು, ವಿಜೆಟ್‌ಗಳಲ್ಲಿ ಇದನ್ನು ವಿಸ್ತರಿಸಬಹುದಾಗಿದೆ.

ಬಳಕೆದಾರರು ಅನುಭವಿಸಬಹುದಾದ ವೈಶಿಷ್ಟ್ಯಗಳ ಬಗ್ಗೆ ಆಳವಾದ ಬ್ಲಾಗ್ ಅನ್ನು ಗೂಗಲ್ ಪ್ರಕಟಿಸಿದೆ. ಆದರೆ ಮಟೀರಿಯಲ್ ಯುನಲ್ಲಿ ಆಸಕ್ತಿ ಹೊಂದಿದ್ದರೆ, ಬಳಕೆದಾರರು ಇದನ್ನು ತಿಳಿಯಬಹುದು. ಇದು "ಪಿಕ್ಸೆಲ್-ಫಸ್ಟ್" ಫೀಚರ್ ಎಂದು ಗೂಗಲ್ ಹೇಳಿದೆ. ಆದರೂ ಇದು ಹೆಚ್ಚಿನ ಡಿವೈಸ್ ಮೇಕರ್‌ಗಳು ಮತ್ತು ಫೋನ್‌ಗಳಿಗೆ ಬರಲಿದೆ.

ನವೀಕರಣವನ್ನು ಪಡೆಯಲು ನಿಮ್ಮ ಪಿಕ್ಸೆಲ್ ಫೋನ್‌ನ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ "ಸಿಸ್ಟಮ್" ಕ್ಲಿಕ್ ಮಾಡಿ, ನಂತರ "ಸಿಸ್ಟಮ್ ಅಪ್‌ಡೇಟ್" ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಎಐ ಕಾರ್ಯಕ್ಷಮತೆಯನ್ನು ಸುಧಾರಿಸಲು ಟೆಕ್ ದೈತ್ಯವು ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಅನ್ನು ಟೆನ್ಸರ್ ಚಿಪ್‌ಸೆಟ್‌ನೊಂದಿಗೆ ಮಂಗಳವಾರ ಬಿಡುಗಡೆ ಮಾಡಿದೆ.

ABOUT THE AUTHOR

...view details