ನವದೆಹಲಿ:ಜನಪ್ರಿಯ ಸಾಫ್ಟ್‌ವೇರ್ ಉತ್ಪನ್ನಗಳಿಗಾಗಿ ಹುಡುಕುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಹ್ಯಾಕರ್‌ಗಳು ಗೂಗಲ್ ಆ್ಯಡ್ ಪ್ಲಾಟ್‌ಫಾರ್ಮ್‌ನ ದುರುಪಯೋಗವನ್ನುಪಡಿಸಿಕೊಳ್ಳುವ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮರ್ಲಿ, ಸ್ಲಾಕ್, ಡ್ಯಾಶ್‌ಲೇನ್, ಆಡಾಸಿಟಿ, ಐಟೊರೆಂಟ್, ಎನಿಡೆಸ್ಕ್, ಲಿಬ್ರೆ ಆಫೀಸ್, ಟೀಮ್‌ವ್ಯೂವರ್, ಥಂಡರ್‌ಬರ್ಡ್ ಸೇರಿದಂತೆ ಹಲವು ಸಾಫ್ಟ್ವೇರ್ಗಳನ್ನು ಒಳಗೊಂಡಿದೆ ಎಂದು ಬ್ಲಿಪಿಂಗ್ ಕಂಪ್ಯೂಟರ್ ವರದಿ ಮಾಡಿದೆ.
ಬೆದರಿಕೆವೊಡ್ಡವ ಹ್ಯಾಕರ್‌ಗಳು ಅಧಿಕೃತ ವೆಬ್ಸೈಟ್ ಕ್ಲೋನ್ ಮಾಡುತ್ತಾರೆ. ಬಳಕೆದಾರರು ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿದಾಗ ಸಾಫ್ಟ್‌ವೇರ್‌ನ ಟ್ರೋಜನೈಸ್ಡ್ ಆವೃತ್ತಿಗಳನ್ನು ವಿತರಿಸುತ್ತಾರೆ. ಗೂಗಲ್ ಆ್ಯಡ್ ಫ್ಲಾಟ್ಫಾರ್ಮ್ಗಳು ಗೂಗಲ್ ಸರ್ಚ್ ಮೂಲಕ ತಮ್ಮ ಫ್ಲಾಟ್ಫಾರ್ಮ್ ಸರ್ಚ್ ಮಾಡಲು ಸಹಾಯ ಮಾಡುತ್ತದೆ. ಬಳಕೆದಾರರು ಒರಿಜಿನಲ್ ಸಾಫ್ಟ್‌ವೇರ್ ಉತ್ಪನ್ನವನ್ನು ಬ್ರೌಸರ್ನಲ್ಲಿ ನೋಡಿದಾಗ ವ್ಯತ್ಯಾಸ ಅರಿಯದಂತೆ ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡಲಾಗುತ್ತದೆ. ಕಾರಣ ಇದು ನಿರ್ದಿಷ್ಟ ಸರ್ಚ್ ಫಲಿತಾಂಶದಂತೆಯೇ ಇರುತ್ತದೆ.