ಇಟಾನಗರ (ಅರುಣಾಚಲ ಪ್ರದೇಶ) : ಭಾರತದ ಜೀವ ವಿವೈಧ್ಯತೆ ಅಗಾಧವಾಗಿದೆ. ಇಲ್ಲಿನ ಪರಿಸರ ಮತ್ತು ಸಸ್ಯ ಸಂಕುಲಗಳು ಸಂಪತ್ಬರಿತವಾಗಿದ್ದು, ಸಮೃದ್ಧಿಯಾಗಿದೆ. ಪಶ್ಚಿಮ ಘಟ್ಟಗಳು, ಹಿಮಾಲಯನ್ ಶ್ರೇಣಿಗಳಲ್ಲಿನ ಅರಣ್ಯ ಸಂಪತ್ತುಗಳು ಅಗಾಧವಾಗಿದ್ದು, ಹಲವು ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. ಔಷಧಿ ಸಸ್ಯದಿಂದ ಹಿಡಿದು, ಕೋಟ್ಯಂತರ ರೂಪಾಯಿ ಬೆಲೆಬಾಳುವ ವನ ಸಂಪತ್ತು ಭಾರತದ ವಿವಿಧ ಮೂಲೆಗಳಲ್ಲಿ ಹರಡಿದೆ. ಇಂತಹ ಜೀವ ವೈವಿಧ್ಯತೆಯ ತಾಣವಾಗಿರುವ ನಮ್ಮ ದೇಶದಲ್ಲಿ ಹೊಸ ಜಾತಿ ಮರವೊಂದು ಪತ್ತೆಯಾಗಿದೆ. ಅರುಣಾಚಲ ಪ್ರದೇಶದ ಅರಣ್ಯ ಸಂಪತ್ತಿನಲ್ಲಿ ಈ ಹೊಸ ತಳಿಯ ಮರ ಪತ್ತೆಯಾಗಿದ್ದು, ಈ ಕುರಿತು ಎಡಿನ್ ಬರ್ಗ್ ಜರ್ನಲ್ ಆಫ್ ಬೊಟ್ನಿಯ ಮೇ 19ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಅರಣಾಚಲ ಕಾಡಿನಲ್ಲಿ ಪತ್ತೆ: ಮಿಯೋಜಿನ್ ಅರುಣಾಚಲನೆಸಿಸ್ (Meiogyne Arunachalensis) ಎಂಬ ಹೊಸ ಜಾತಿಯ ಮರ ಇದಾಗಿದೆ. ಆದಿ ಹಿಲ್ಸ್ ಆಫ್ ಅರುಣಾಚಲ ಪ್ರದೇಶದ ಜೀವ ವೈವಿಧ್ಯತೆಯ ಅನ್ವೇಷಣೆ ವೇಳೆ ಈ ಮರ ಪತ್ತೆಯಾಗಿದೆ ಎಂದು ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಭಾರತದ ವನ್ಯಜೀವಿ ಸಂಸ್ಥೆಯಾದ ಹೇಮ್ ಚಂದ್ ಮಹೀಂದ್ರ ಫೌಂಡೇಷನ್ ಮತ್ತು ಅರುಣಾಚಲ ಪ್ರದೇಶ ಅರಣ್ಯ ಇಲಾಖೆ ಬೆಂಬಲದೊಂದಿಗೆ ಈ ಕಾರ್ಯ ನಡೆಸಲಾಗಿದೆ.
ಇನ್ನು, ಈ ಮರದ ಕುರಿತು ವಿವರಣೆ ನೀಡಿರುವ ಸಂಶೋಧಕರ ಗುಂಪಿನಲ್ಲಿ ಒಬ್ಬರಾಗಿರುವ ನವೆಂಡು ಪೇಜ್, ಭಾರತದಲ್ಲಿ ಪತ್ತೆಯಾಗುತ್ತಿರುವ ಮೂರನೇ ಮತ್ತು ಪೂರ್ವ ಹಿಮಾಲಯ ಮತ್ತು ಈಶಾನ್ಯ ಭಾರತದ ಮೊದಲ ಜಾತಿ ಮರ ಇದಾಗಿದೆ ಎಂದಿದ್ದಾರೆ. ಮಿಯೋಜಿನ್ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹರಡಿದೆ ಎಂದಿದ್ದಾರೆ.