ಕರ್ನಾಟಕ

karnataka

ETV Bharat / science-and-technology

ಸಾಮಾಜಿಕ ಜಾಲತಾಣ ದಿಗ್ಗಜರ ನಡುವೆ ಆರಂಭವಾಯ್ತು ಯುದ್ಧ; ಜುಕರ್​ಬರ್ಗ್​​ ಗೆ​​ ಪಂಥಾಹ್ವಾನ ನೀಡಿದ ಮಸ್ಕ್​

ಮೆಟಾ ಸಂಸ್ಥೆಯ ಮಾಲೀಕ ಸಿಇಒ ಜುಕರ್​ಬರ್ಗ್​, ಫೇಸ್​ಬುಕ್​ ಮತ್ತು ಇನ್ಸ್​ಟಾಗ್ರಾಂ ಮೂಲಕ ಈಗಾಗಲೇ ಅಧಿಪತ್ಯ ಸಾಧಿಸಿದ್ದು, ಇದೀಗ ಟ್ವಿಟರ್​ ರೀತಿ ಮತ್ತೊಂದು ಅಪ್ಲಿಕೇಷನ್​ ಹುಟ್ಟು ಹಾಕುವ ಚಿಂತನೆಯಲ್ಲಿರುವುದು ಇವರ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ.

A battle has begun between social media giants Zuckerberg and elon Musk
A battle has begun between social media giants Zuckerberg and elon Musk

By

Published : Jun 22, 2023, 12:35 PM IST

ಸ್ಯಾನ್​ಫ್ರಾನ್ಸಿಸ್ಕೊ: ಜಗತ್ತನ್ನು ಆಳುತ್ತಿರುವ ಎರಡು ಪ್ರಮುಖ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ನಡುವೆ ಇದೀಗ ಯುದ್ಧ ಆರಂಭವಾಗಿದೆ. ಈ ಯುದ್ಧದ ಬೆನ್ನಲ್ಲೇ ಇಬ್ಬರು ಪಂಥಾಹ್ವಾನವನ್ನು ಕೂಡ ನೀಡಿದ್ದಾರೆ. ಇದೆಲ್ಲಾ ಆರಂಭವಾಗಿದ್ದು, ವಿಶ್ವದ ಅಗ್ರ ಶ್ರೀಮಂತ ಮಸ್ಕ್​, ಫೇಸ್​ಬುಕ್​ ಸಂಸ್ಥಾಪಕನನ್ನು ಕೆಣಕಿದ್ದಕ್ಕೆ. ಫೇಸ್ಬುಕ್​​ ಪಾರುಪತ್ಯದ ಕುರಿತು ಬಳಕೆದಾರರ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಮಸ್ಕ್​, "ಕೇಜ್​ ಮ್ಯಾಚ್​"ಗೆ ಮಾರ್ಕ್​ ಜುಗರ್​ ಬರ್ಗ್​ ಅನ್ನು ಆಹ್ವಾನಿಸಿದರು. ಇದರ ಬೆನ್ನಲ್ಲೇ ಸುಮ್ಮನಿರದ ಮೆಟಾ ಸಿಇಒ, ಮಸ್ಕ್​​ಗೆ ನಿಮ್ಮ ವಿಳಾಸವನ್ನು ಕಳುಹಿಸಿ ಎಂದು ಪೋಸ್ಟ್​​​ ಮಾಡಿದ್ದಾರೆ.

ಮೆಟಾ ಶೀಘ್ರದಲ್ಲೇ ಟ್ವಿಟರ್​​ಗೆ ಪ್ರತಿಸ್ಪರ್ಧಿ ನೀಡಲಿದೆ ಎಂಬ ವಿಷಯದಿಂದ ಟೆಕ್​ ದಿಗ್ಗಜರ ನಡುವೆ ಈ ಸಮರ ಆರಂಭವಾಗಿದೆ. ಮಾರ್ಕ್​ ಜುಕರ್​ಬರ್ಗ್​​ ಟ್ವಿಟರ್​​ಗೆ ಪರ್ಯಾಯವಾಗಿ ಹೊಸ ತಾಣ ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿದೊಡನೆಯೇ, ಕಡೆ ಪಕ್ಷ ಇದು ವಿವೇಕಯುತವಾಗಿದೆ. ಕೆಲವು ಕ್ಷಣಗಳು ಚಿಂತೆಯಾಯಿತು ಎಂದು ಮಸ್ಕ್​ ತಿಳಿಸಿದ್ದರು.

ಜುಗರ್​ಬರ್ಗ್​​ ಪಂಥಾಹ್ವಾನ ನೀಡಿದ ಟೆಸ್ಲಾ ಸಿಇಒ

ಇದಕ್ಕೆ ಬಳಕೆದಾರರು ಒಬ್ಬರು ಪ್ರತಿಕ್ರಿಯಿಸಿ, "ಎಲೋನ್​ ಮಸ್ಕ್​ ಎಚ್ಚರವಾಗಿರಿ. ಅವರು ಇದೀಗ ಜು ಜಿಟ್ಸು ಮಾಡುತ್ತಿದ್ದಾರೆ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್​, "ನಾನು ಕೇಜ್​ ಮ್ಯಾಚ್​ಗೆ ಸಿದ್ಧ" ಎಂದಿದ್ದಾರೆ. ಗುರುವಾರ ಮಸ್ಕ್​ ಅವರ ಈ ಸಂಭಾಷಣೆಯ ಸ್ಕ್ರೀನ್​ಶಾಟ್​ ಪೋಸ್ಟ್​ ಅನ್ನು ಇನ್ಸ್​ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಜುಕರ್​ಬರ್ಗ್​​​, "ನಿಮ್ಮ ವಿಳಾಸ ಕಳುಹಿಸಿ" ಎಂದು ಅಡಿಬರಹ ಬರೆದಿದ್ದಾರೆ.

ಈ ಘಟನೆ ಬೆನ್ನಲ್ಲೇ ಬಳಕೆದಾರರೊಬ್ಬರು ಜುಕರ್​ಬರ್ಗ್​​ ಇನ್ಸ್ಟಾ ಸ್ಟೇಟಸ್​​ ಸ್ಕ್ರೀನ್​ಶಾಟ್​ ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ, ಟೆಸ್ಲಾ ಸಿಇಒ, ಇದು ಸತ್ಯವಾದರೆ, ನಾನು ಮಾಡುತ್ತೇನೆ ಎಂದು ಹಾಸ್ಯಾಸ್ಪದವಾಗಿ ತಿಳಿಸಿದ್ದಾರೆ.

ದೈತ್ಯ ಸಾಮಾಜಿಕ ಜಾಲತಾಣ ಕಂಪನಿಗಳ ಇಬ್ಬರು ಸಿಇಒ ನಡುವೆ ಈ ಯುದ್ಧ ತಿಂಗಳುಗಳ ಹಿಂದೆಯೇ ಆರಂಭವಾಗಿದ್ದರೂ, ಇದು ಈಗ ಸ್ಫೋಟಗೊಂಡಿದೆ. ಕಾರಣ, ಈ ತಿಂಗಳ ಆರಂಭದಲ್ಲಿ ಮಾರ್ಕ್​ ಜುಕರ್​ಬರ್ಗ್,​​ ಟ್ವಿಟರ್​​ ರೀತಿಯಲ್ಲೇ ಸಾಮಾಜಿಕ ಮಾಧ್ಯಮದ ಅಪ್ಲಿಕೇಷನ್​ ಅನ್ನು ಮಾಡುವ ಯೋಜನೆ ಕುರಿತು ತಿಳಿಸಿದ್ದರು. ಈ ಕುರಿತು ಆಲೋಚನೆ ಬಗ್ಗೆ ಮೆಟಾ ಸಂಸ್ಥೆಯ ಆಂತರಿಕ ಸಭೆಯಲ್ಲೂ ಕೂಡ ಚರ್ಚೆಯಾಗಿತ್ತು. ಈ ವಿಚಾರ ತಿಳಿದು ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ ಮಸ್ಕ್,​ 'ಜುಗ್​ ಎಂದು ಬರೆದು​ ನಾಲಿಗೆ ಎಮೋಜಿ' ಹಾಕಿ ಕಿಂಡಲ್​ ಮಾಡಿದ್ದರು.

2017ರಲ್ಲೂ ಮಾರ್ಕ್​ ಜುಕರ್​ಬರ್ಗ್​ಗೆ ತಿರುಗೇಟು ನೀಡಿದ್ದ ಮಸ್ಕ್​, ಮೆಟಾ ಸಿಇಒ ಕೃತಕ ಬುದ್ಧಿಮತ್ತೆ ಎಂಬುದು ಸೀಮಿತ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕೆಣಕಿದ್ದರು.

ಅಧಿಪತ್ಯ ಸಾಧಿಸಿರುವ ದಿಗ್ಗಜರು:ಮೆಟಾ ಸಂಸ್ಥೆಯ ಮಾಲೀಕ ಸಿಇಒ ಮಾರ್ಕ್​ ಜುಕರ್​ಬರ್ಗ್,​​ ಫೇಸ್​ಬುಕ್​ ಮತ್ತು ಇನ್ಸ್​ಟಾಗ್ರಾಂ ಮೂಲಕ ಈಗಾಗಲೇ ಅಧಿಪತ್ಯ ಸಾಧಿಸಿದ್ದು, ಇದೀಗ ಟ್ವಿಟರ್​ ರೀತಿ ಮತ್ತೊಂದು ಅಪ್ಲಿಕೇಷನ್​ ಹುಟ್ಟು ಹಾಕುವ ಚಿಂತನೆಯಲ್ಲಿರುವುದು ಇವರ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ. ಟ್ವಿಟರ್​ ಜನಪ್ರಿಯತೆ ಬೆನ್ನಲ್ಲೇ ಕಳೆದ ವರ್ಷ ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಮಸ್ಕ್​ ಟ್ವಿಟರ್​ ಖರೀದಿಸಿದ್ದರು. ಇದರ ಬೆನ್ನಲ್ಲೇ ಹಲವು ಮಾರ್ಪಡುಗಳನ್ನು ಮಾಡಿ ಟೀಕೆಗೆ ಕೂಡ ಮಸ್ಕ್​ ಗುರಿಯಾಗಿದ್ದರು.

ಇದನ್ನೂ ಓದಿ: ಟೆಸ್ಲಾ ಕಾರ್​​​​ನಲ್ಲಿ ಹ್ಯಾಂಡ್ಸ್ ಫ್ರೀ ಡ್ರೈವಿಂಗ್‌ಗಾಗಿ ಎಲೋನ್​​ ಮೋಡ್​... ಏನಿದು ಹೊಸ ವೈಶಿಷ್ಟ್ಯ

ABOUT THE AUTHOR

...view details