ಕರ್ನಾಟಕ

karnataka

ETV Bharat / science-and-technology

ಏನೂ ಮಾಡದೆಯೇ 8 ಸಾವಿರ ಕೋಟಿ ರೂ. ಪಡೆಯಲಿದ್ದಾರೆ ಮೈಕ್ರೋಸಾಫ್ಟ್ ಮಾಜಿ ಸಿಇಒ ಬಾಲ್ಮರ್!

ಮಾಜಿ ಮೈಕ್ರೋಸಾಫ್ಟ್​ ಸಿಇಒ ಸ್ಟೀವ್ ಬಾಲ್ಮರ್ ಈ ವರ್ಷ ಕಂಪನಿಯಿಂದ 8 ಸಾವಿರ ಕೋಟಿ ರೂಪಾಯಿ ಪಡೆಯಲಿದ್ದಾರೆ.

Ex-Microsoft CEO to receive $1 bn annually for doing nothing
Ex-Microsoft CEO to receive $1 bn annually for doing nothing

By ETV Bharat Karnataka Team

Published : Dec 29, 2023, 12:23 PM IST

ಸ್ಯಾನ್ ಫ್ರಾನ್ಸಿಸ್ಕೋ: ಮೈಕ್ರೋಸಾಫ್ಟ್ ನ ಮಾಜಿ ಸಿಇಒ ಸ್ಟೀವ್ ಬಾಲ್ಮರ್ 2024ರಲ್ಲಿ ಏನೂ ಮಾಡದೆಯೇ ಕಂಪನಿಯಿಂದ 1 ಬಿಲಿಯನ್ ಡಾಲರ್ (ಸುಮಾರು 8,323 ಕೋಟಿ ರೂ.) ಆದಾಯ ಪಡೆಯಲಿದ್ದಾರೆ. ಮೈಕ್ರೋಸಾಫ್ಟ್​ ಕಂಪನಿ ಅವರಿಗೆ ವಾರ್ಷಿಕ ಲಾಭಾಂಶವಾಗಿ 2024ರಲ್ಲಿ 8323 ಕೋಟಿ ರೂ. ನೀಡಲಿದೆ. ಮೈಕ್ರೋಸಾಫ್ಟ್ ತನ್ನ ತ್ರೈಮಾಸಿಕ ಲಾಭಾಂಶವನ್ನು ಪ್ರತಿ ಷೇರಿಗೆ 75 ಸೆಂಟ್​ಗಳಿಗೆ ಹೆಚ್ಚಿಸಿದ ನಂತರ ಬಾಲ್ಮರ್ ಈ ವರ್ಷ ಇಷ್ಟು ಮೊತ್ತ ಪಡೆಯಲಿದ್ದಾರೆ.

ಬಾಲ್ಮರ್ ಕಂಪನಿಯ ಸುಮಾರು 4 ಪ್ರತಿಶತದಷ್ಟು ಷೇರುಗಳನ್ನು ಹೊಂದಿದ್ದಾರೆ. ಇದು 333.2 ಮಿಲಿಯನ್ ಷೇರುಗಳಿಗೆ ಸಮಾನವಾಗಿದೆ. ಮೈಕ್ರೋಸಾಫ್ಟ್​ನ ಷೇರು ಬೆಲೆಯಲ್ಲಿ ಶೇಕಡಾ 56 ರಷ್ಟು ಅಗಾಧ ಹೆಚ್ಚಳದಿಂದಾಗಿ ಬಾಲ್ಮರ್ ಅವರ ಬಳಿಯಿರುವ ಷೇರುಗಳ ಮೌಲ್ಯ ಸರಿಸುಮಾರು 130 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಇದೊಂದೇ ವರ್ಷದಲ್ಲಿ ಅವರ ಸಂಪತ್ತು 44 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಅಕ್ಟೋಬರ್​ನಲ್ಲಿ ಬಿಡುಗಡೆಯಾಗಿದ್ದ ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಬಾಲ್ಮರ್ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದಿದ್ದರು.

ಬಾಲ್ಮರ್ 1980 ರಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರ ಸಹಾಯಕರಾಗಿ ಮೈಕ್ರೋಸಾಫ್ಟ್​ ಸೇರಿದ್ದರು. ಆದಾಗ್ಯೂ ಅವರು ಪರ್ಸನಲ್ ಅಸಿಸ್ಟಂಟ್​ಗಿಂತ ಹೆಚ್ಚಾಗಿ ಬಿಸಿನೆಸ್ ಮ್ಯಾನೇಜರ್ ಆಗಿದ್ದರು. 1980 ರಲ್ಲಿ ಕಂಪನಿಯ 30 ನೇ ಉದ್ಯೋಗಿಯಾಗಿ ಸೇರಿದ ಸ್ಟೀವ್ ಬಾಲ್ಮರ್ ಗಣನೀಯ ಷೇರುಗಳನ್ನು ಪಡೆದುಕೊಂಡರು. 2000 ರಲ್ಲಿ ಇವರು ಮೈಕ್ರೋಸಾಫ್ಟ್​ನ ಸಿಇಒ ಆಗಿದ್ದರು ಮತ್ತು 2014 ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಮೈಕ್ರೋಸಾಫ್ಟ್​ ಈ ವರ್ಷ ಪ್ರತಿ ಷೇರಿಗೆ $ 2.79 ಲಾಭಾಂಶ ಘೋಷಿಸಿದೆ. ಇದರನ್ವಯ ಬಾಲ್ಮರ್​ಗೆ ಅವರು ಹೊಂದಿರುವ ಷೇರುಗಳನ್ನು ಆಧರಿಸಿ ವಾರ್ಷಿಕ ಸುಮಾರು $ 930 ಮಿಲಿಯನ್ ಪಾವತಿಸಲಾಗಿದೆ.

ಮೈಕ್ರೋಸಾಫ್ಟ್ 18 ವರ್ಷಗಳಿಂದ ನಿರಂತರವಾಗಿ ತನ್ನ ಲಾಭಾಂಶವನ್ನು ಹೆಚ್ಚಿಸುತ್ತಿರುವುದರಿಂದ, ಬಾಲ್ಮರ್ ಅವರ ವಾರ್ಷಿಕ ಆದಾಯ 2024 ರಲ್ಲಿ 1 ಬಿಲಿಯನ್ ಡಾಲರ್ ಮೀರಬಹುದು ಮತ್ತು ಇನ್ನಷ್ಟು ಬೆಳೆಯುತ್ತಲೇ ಇರಲಿದೆ. ಆದಾಗ್ಯೂ, ವಾರ್ಷಿಕವಾಗಿ 5,00,000 ಡಾಲರ್ ಗಿಂತ ಹೆಚ್ಚಿನ ಆದಾಯ ಗಳಿಸುವ ವ್ಯಕ್ತಿಗಳಿಗೆ ಲಾಭಾಂಶದ ಮೇಲೆ 20% ತೆರಿಗೆ ವ್ಯಾಪ್ತಿಗೆ ಬಾಲ್ಮರ್ ಒಳಪಡುವ ಸಾಧ್ಯತೆಯಿದೆ. ಇದರರ್ಥ ಅವರು ಮೈಕ್ರೋಸಾಫ್ಟ್​ನಿಂದ ಪಡೆದ ಲಾಭಾಂಶದ ಮೇಲೆ ಸುಮಾರು $ 200 ಮಿಲಿಯನ್ ತೆರಿಗೆ ಪಾವತಿಸಬೇಕಾಗಬಹುದು.

ಇದನ್ನೂ ಓದಿ : ಮಕ್ಕಳಿಂದ ಸೋಶಿಯಲ್ ಮೀಡಿಯಾಗೆ $11 ಬಿಲಿಯನ್ ಆದಾಯ

ABOUT THE AUTHOR

...view details