ಕರ್ನಾಟಕ

karnataka

ETV Bharat / science-and-technology

80 ವರ್ಷ ವಯಸ್ಸಾದರೂ ನೆನಪು ಮಾಸದಿರುವುದು ಹೇಗೆ? - 80 ವರ್ಷ ವಯಸ್ಸಾದರೂ ನೆನಪು ಮಾಸದಿರುವುದು ಹೇಗೆ

ಮೆಮೊರಿಗೆ ಸಂಬಂಧಿಸಿದಂತೆ ಇತರರಿಗೆ ಹೋಲಿಸಿದರೆ ಸೂಪರ್ ಏಜರ್ಸ್​ ವಯೋವೃದ್ಧರ ಮೆದುಳಿನ ಎಂಟೋರ್ಹಿನಲ್ ಕಾರ್ಟೆಕ್ಸ್ ಪ್ರದೇಶದಲ್ಲಿನ ನರ ಕೋಶಗಳು ದೊಡ್ಡದಾಗಿ ಬೆಳೆಯುತ್ತವೆ ಎಂದು ತಿಳಿದು ಬಂದಿದೆ. ಇನ್ನು ಕೆಲವರಲ್ಲಿ ಎಂಟೋರ್ಹಿನಲ್ ಕಾರ್ಟೆಕ್ಸ್ ಪ್ರದೇಶದಲ್ಲಿನ ನರ ಕೋಶಗಳು ಕುಗ್ಗುವುದೂ ಉಂಟು.

80 ವರ್ಷ ವಯಸ್ಸಾದರೂ ನೆನಪು ಉಳಿಯುವುದು ಹೇಗೆ?
80-years-old-but-how-to-remember

By

Published : Oct 10, 2022, 5:21 PM IST

Updated : Oct 10, 2022, 5:27 PM IST

ವಾಷಿಂಗ್ಟನ್​: ಎಂಭತ್ತು ವರ್ಷ ವಯಸ್ಸಾದರೂ ಕೆಲವರು ಇನ್ನೂ ಉತ್ತಮ ನೆನಪಿನ ಸಾಮರ್ಥ್ಯ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಅವರು 50 ವರ್ಷ ವಯಸ್ಸಿನವರನ್ನು ಮೀರಿಸುತ್ತಾರೆ. ಇಂಥವರನ್ನು ಸೂಪರ್ ಏಜರ್ಸ್​ ಎಂದು ಕರೆಯಲಾಗುತ್ತದೆ. ಇಂಥವರ ನೆನಪಿನ ಸಾಮರ್ಥ್ಯ ವಯಸ್ಸಾದರೂ ಯಾಕೆ ಕುಗ್ಗುವುದಿಲ್ಲ ಎಂಬ ಬಗ್ಗೆ ಅಮೆರಿಕದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಮೆಮೊರಿಗೆ ಸಂಬಂಧಿಸಿದಂತೆ ಇತರರಿಗೆ ಹೋಲಿಸಿದರೆ ಸೂಪರ್ ಏಜರ್ಸ್​ ವಯೋವೃದ್ಧರ ಮೆದುಳಿನ ಎಂಟೋರ್ಹಿನಲ್ ಕಾರ್ಟೆಕ್ಸ್ ಪ್ರದೇಶದಲ್ಲಿನ ನರ ಕೋಶಗಳು ದೊಡ್ಡದಾಗಿ ಬೆಳೆಯುತ್ತವೆ ಎಂದು ತಿಳಿದು ಬಂದಿದೆ. ಇನ್ನು ಕೆಲವರಲ್ಲಿ ಎಂಟೋರ್ಹಿನಲ್ ಕಾರ್ಟೆಕ್ಸ್ ಪ್ರದೇಶದಲ್ಲಿನ ನರ ಕೋಶಗಳು ಕುಗ್ಗುವುದೂ ಉಂಟು. ಸೂಪರ್ ಏಜರ್ಸ್ ಇವರಲ್ಲಿ ಟ್ಯಾಂಗಲ್ಸ್ ಎಂಬ ಪ್ರೋಟೀನ್‌ನ ಅಸಹಜ ಶೇಖರಣೆಯ ಅಪಾಯವು ಕಡಿಮೆ ಎಂದು ಕಂಡುಬಂದಿದೆ. ಆಲ್ಝೈಮರ್ ರೋಗಿಗಳ ಮೆದುಳಿನಲ್ಲಿ ಇದು ಹೆಚ್ಚು ಸಂಗ್ರಹವಾಗುತ್ತದೆ.

ಈ ಸಂಶೋಧನೆಯನ್ನು ಮುಂದುವರೆಸಿದರೆ, ತೀವ್ರವಾದ ಮರೆವಿನ ವಿರುದ್ಧ ಹೋರಾಡಲು ಹೊಸ ಆವಿಷ್ಕಾರಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದನ್ನೂ ಓದಿ:INTERESTING FACTS: 'ನೆನಪು' ಉಳಿಯುವುದು ಹೇಗೆ? ನೆನಪಿಗೂ ನಿದ್ರೆಗೂ ಸಂಬಂಧವಿದೆಯಾ?

Last Updated : Oct 10, 2022, 5:27 PM IST

ABOUT THE AUTHOR

...view details