ನವದೆಹಲಿ: 10ರಲ್ಲಿ 6 ಅಂದರೆ ಶೇ 63ರಷ್ಟು ಭಾರತೀಯರು ತಮ್ಮ ವೈಯಕ್ತಿಕ ದತ್ತಾಂಶವೂ ತಮ್ಮ ಗಮನಕ್ಕೆ ಬಾರದಂತೆ ಮೂರನೇ ವ್ಯಕ್ತಿಗೆ ಸೋರಿಕೆಯಾಗುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಹೊಸ ವರದಿ ತಿಳಿದಿದೆ. ತಮ್ಮ ವಾಹನ ದತ್ತಾಂಶ, ಡ್ರೈವಿಂಗ್ ಮತ್ತು ಸ್ಥಳದ ಕುರಿತು ಮಾಹಿತಿ ಸೋರಿಕೆ ಬಗ್ಗೆ ಅವರು ತಿಳಿಸಿದ್ದಾರೆ.
ಇನ್ನು ಶೇ 55ರಷ್ಟು ಭಾರತೀಯರು ಸಂಪರ್ಕಿತ ಉತ್ಪನ್ನಗಳ ಮೂಲಕ ಸಂಸ್ಥೆಗಳು ಸಂಗ್ರಹಿಸಿದ ತಮ್ಮ ವೈಯಕ್ತಿಕ ದತ್ತಾಂಶಗಳು ದುರ್ಬಳಕೆಯಾಗುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಶೇ 56ರಷ್ಟು ಭಾರತೀಯರು ಸಂಪರ್ಕಿತ ಉತ್ಪನ್ನಗಳ ಜೊತೆಗಿನ ಆರೋಗ್ಯ ದತ್ತಾಂಶಗಳ ಲಭ್ಯತೆಗಳು ದುರ್ಬಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಕೇಪ್ಜೆಮಿನಿ ರಿಸರ್ಚ್ ಇನ್ಸುಟಿಟ್ಯುಟ್ ತಿಳಿಸಿದೆ.
ಶೇ 64ರಷ್ಟು ಭಾರತೀಯರು ಎಲ್ಲಾ ಸಂಪರ್ಕಿತ ಉತ್ಪನ್ನಗಳು ಒಂದೇ ಇಂಟರ್ಫೇಸ್ ಅನ್ನು ಹೊಂದಲು ಹೆಚ್ಚು ಅನುಕೂಲಕರವಾಗಿದೆ ಎಂದಿದ್ದಾರೆ. ಹೆಚ್ಚುವರಿಯಾಗಿ ಶೇ 50ರಷ್ಟು ಭಾರತೀಯರು ಇತರೆ ಸಾಧನದೊಂದಿಗೆ ಸಂಪರ್ಕಿತ ಉತ್ಪನ್ನಗಳು ಸಂಯೋಜನೆ ಸವಾಲನ್ನು ಹೊಂದಿರುವುದಾಗಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದಕ್ಕಿಂತ ಹೆಚ್ಚಿನದಾಗಿ ಶೇ 47ರಷ್ಟು ಭಾರತೀಯರು ದೈನಂದಿನ ಸೇವೆಗಳು ಮತ್ತು ಸಂಪರ್ಕಿತ ಉತ್ಪನ್ನಗಳೊಂದಿಗೆ ನಂಬರ್ ಸಂಪರ್ಕ ಹೊಂದಿರುವ ಬಗ್ಗೆ ಹೆಚ್ಚು ಒತ್ತಡ ಅನುಭವಿಸುವುದಾಗಿ ತಿಳಿಸಿದ್ದಾರೆ. ಜೆನೆರೇಟಿವ್ ಎಐನಂತಹ ತಂತ್ರಜ್ಞಾನಗಳು ಸಂಪರ್ಕಿತ ಅನುಭವ ಮತ್ತು ಗ್ರಾಹಕರ ತೃಪ್ತಿಯ ಹೊಸ ಹಂತ ಸಾಧಿಸಲು ಸಹಾಯ ಮಾಡುತ್ತದೆ.