ಸದ್ಯ ಕೃತಕ ಬುದ್ಧಿಮತ್ತೆ (Artificial intelligence - AI) ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು, ಪ್ರತಿ ಕ್ಷೇತ್ರದಲ್ಲೂ ಅಧಿಪತ್ಯ ಸಾಧಿಸಲು ಮುಂದಾಗುತ್ತಿದೆ. ಸದ್ಯ ವರವಾಗಿರುವ ಈ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಆತಂಕ ತಂದೊಡ್ಡುವುದರಲ್ಲಿ ಸಂದೇಹವಿಲ್ಲ. ಬಲು ಬೇಗ ಬೆಳವಣಿಗೆ ಆಗುತ್ತಿರುವ ಈ ಎಐ ತಂತ್ರಜ್ಞಾನದಿಂದ ಜಗತ್ತು ಎಚ್ಚೆತ್ತುಗೊಳ್ಳಬೇಕಿದೆ ಎಂದು ಗೂಗಲ್ನಿಂದ ಹೊರನಡೆದ ಎಐ ಗಾಡ್ ಫಾದರ್ ಜೆಫ್ರಿ ಹಿಂಟನ್ ಕೂಡ ಎಚ್ಚರಿಸಿದ್ದರು.
ಇದೀಗ ಈ ಎಐನಿಂದಾಗಿ ಮೇ ಒಂದೇ ತಿಂಗಳಲ್ಲಿ ಅಮೆರಿಕದ 4 ಸಾವಿರ ಮಂದಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಹೊಸ ವರದಿ ತಿಳಿಸಿದೆ. ಅಮೆರಿಕ ಮೂಲದ ಕನ್ಸಲ್ಟಿಂಗ್ ಘಟಕ, ಗ್ರೇ ಅಂಡ್ ಕ್ರಿಸ್ಮಸ್ ತಿಂಗಳ ವರದಿಯಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಅಮೆರಿಕದಲ್ಲಿ ಎಐ ಕಾರಣದಿಂದ ಮೇ ಒಂದೇ ತಿಂಗಳಲ್ಲಿ 3,900 ಮಂದಿ ಅಂದರೆ, 4.9ರಷ್ಟು ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಅಮೆರಿಕ ಮೂಲದ ಉದ್ಯೋಗದಾತರು 80,089 ಉದ್ಯೋಗ ಕಡಿತವಾಗಿದೆ. ಶೇ 20ರಷ್ಟು ಉದ್ಯೋಗ ಕಡಿತಗೊಂಡಿದೆ. ಗ್ರಾಹಕರ ಆತ್ಮವಿಶ್ವಾಸ ಕಳೆದ ಆರು ತಿಂಗಳಿನಿಂದ ಕಡಿಮೆಯಾಗಿದೆ. ನಿಧಾನಗತಿಯ ನಿರೀಕ್ಷೆಗಳು ನೇಮಕಾತಿಯನ್ನು ಕಡಿಮೆ ಮಾಡಿದೆ ಎಂದು ಆ್ಯಂಡ್ರೊ ಚಾಲೆಂಜರ್ ತಿಳಿಸಿದೆ.
ಇದಕ್ಕೂ ಹೆಚ್ಚಾಗಿ, ಕಂಪನಿಗಳು ಈ ವರ್ಷ 4,17,500 ರೂ ಕೆಲಸ ಕಡಿತಕ್ಕೆ ಯೋಜಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ 315 ಪ್ರತಿಶತ ಉದ್ಯೋಗ ಕಡಿತವಾಗಿದೆ. ತಾಂತ್ರಿಕ ವಲಯದಲ್ಲಿ ಹೆಚ್ಚಿನ ಉದ್ಯೋಗ ಕಡಿತವಾಗಿದೆ. ಮೇ ಅಲ್ಲಿ 22,887 ರಲ್ಲಿ ಉದ್ಯೋಗ ಕಡಿತವಾಗುವ ಮೂಲಕ ಈ ವರ್ಷ 1,36,831 ಮಂದಿ ಕೆಲಸದಿಂದ ವಜಾಗೊಂಡಿದ್ದಾರೆ.