ಕರ್ನಾಟಕ

karnataka

ETV Bharat / science-and-technology

RH200 ಸೌಂಡಿಂಗ್ ರಾಕೆಟ್ ಸತತ 200ನೇ ಬಾರಿ ಇಸ್ರೋದಿಂದ ಯಶಸ್ವಿ ಉಡಾವಣೆ - ತುಂಬಾ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರ

ರೋಹಿಣಿ ಸೌಂಡಿಂಗ್ ರಾಕೆಟ್ (ಆರ್‌ಎಸ್‌ಆರ್) ಸರಣಿಯು ಇಸ್ರೋದ ಭಾರವಾದ ಮತ್ತು ಹೆಚ್ಚು ಸಂಕೀರ್ಣವಾದ ಉಡಾವಣಾ ವಾಹನಗಳ ಸರಣಿಯಲ್ಲಿ ಮುಂಚೂಣಿಯಲ್ಲಿದೆ. ವಾತಾವರಣ ಮತ್ತು ಹವಾಮಾನ ಅಧ್ಯಯನಗಳಿಗೆ ಇದು ನಿರಂತರವಾಗಿ ಬಳಕೆಯಾಗಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

RH200 ಸೌಂಡಿಂಗ್ ರಾಕೆಟ್ ಸತತ 200ನೇ ಬಾರಿ ಇಸ್ರೋದಿಂದ ಯಶಸ್ವಿ ಉಡಾವಣೆ
RH200 Sounding Rocket 200th consecutive successful launch by ISRO

By

Published : Nov 24, 2022, 11:30 AM IST

ಬೆಂಗಳೂರು: ಬಹುಉದ್ದೇಶದ ಸೌಂಡಿಂಗ್ ರಾಕೆಟ್​ RH200 ಅನ್ನು ಸತತವಾಗಿ 200ನೇ ಬಾರಿಗೆ ಯಶಸ್ವಿಯಾಗಿ ಇಸ್ರೊ ಉಡಾವಣೆ ಮಾಡಿದೆ. ತಿರುವನಂತಪುರದ ತುಂಬಾ ಸಮುದ್ರ ತೀರದ ಬಳಿಯಿಂದ 200ನೇ ಉಡಾವಣೆ ಮಾಡಲಾಯಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಇತರರು ಈ ಕ್ಷಣಕ್ಕೆ ಸಾಕ್ಷಿಯಾದರು. ತುಂಬಾ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರ (TERLS) ದಿಂದ RH200 ರ ಯಶಸ್ವಿ ಹಾರಾಟ ನಡೆಯಿತು.

ಭಾರತೀಯ ಸೌಂಡಿಂಗ್ ರಾಕೆಟ್‌ಗಳನ್ನು ಪವನಶಾಸ್ತ್ರ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಅಂತಹುದೇ ಶಾಖೆಗಳ ಮೇಲೆ ಪ್ರಯೋಗಗಳನ್ನು ನಡೆಸಲು ವೈಜ್ಞಾನಿಕ ಸಮುದಾಯಕ್ಕೆ ವಿಶೇಷ ಸಾಧನಗಳಾಗಿ ಬಳಸಲಾಗುತ್ತದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ.

ಭೂಮಿಯ ವಾತಾವರಣದ ವೈಜ್ಞಾನಿಕ ಪರಿಶೋಧನೆಗಾಗಿ ಈಕ್ವಟೋರಿಯಲ್ ಎಲೆಕ್ಟ್ರೋಜೆಟ್ (EEJ), ಲಿಯೊನಿಡ್ ಉಲ್ಕಾಪಾತ (LMS), ಭಾರತೀಯ ಮಧ್ಯಮ ವಾತಾವರಣ ಕಾರ್ಯಕ್ರಮ (IMAP), ಮಾನ್ಸೂನ್ ಪ್ರಯೋಗ (MONEX), ಮಧ್ಯಮ ವಾತಾವರಣದ ಡೈನಾಮಿಕ್ಸ್ (MIDAS), ಮತ್ತು ಸೂರ್ಯಗ್ರಹಣ್-2010 ರಂಥ ಅಭಿಯಾನಗಳನ್ನು ರಾಕೆಟ್ ವೇದಿಕೆಯನ್ನು ಬಳಸಿಕೊಂಡು ನಡೆಸಲಾಗಿದೆ ಎಂದು ಇಸ್ರೊ ಹೇಳಿದೆ.

ರೋಹಿಣಿ ಸೌಂಡಿಂಗ್ ರಾಕೆಟ್ (ಆರ್‌ಎಸ್‌ಆರ್) ಸರಣಿಯು ಇಸ್ರೋದ ಭಾರವಾದ ಮತ್ತು ಹೆಚ್ಚು ಸಂಕೀರ್ಣವಾದ ಉಡಾವಣಾ ವಾಹನಗಳ ಸರಣಿಯಲ್ಲಿ ಮುಂಚೂಣಿಯಲ್ಲಿದೆ. ವಾತಾವರಣ ಮತ್ತು ಹವಾಮಾನ ಅಧ್ಯಯನಗಳಿಗೆ ಇದು ನಿರಂತರವಾಗಿ ಬಳಕೆಯಾಗಿದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಸತತ 200 ನೇ ಯಶಸ್ವಿ ಹಾರಾಟವು ಕಳೆದ ಹಲವಾರು ವರ್ಷಗಳಿಂದ ನಡೆದು ಬರುತ್ತಿರುವ ಸಾಟಿಯಿಲ್ಲದ ವಿಶ್ವಾಸಾರ್ಹತೆಯ ಕಡೆಗೆ ಭಾರತೀಯ ರಾಕೆಟ್ ವಿಜ್ಞಾನಿಗಳ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಬ್ರಹ್ಮಾಂಡದ ಮಿತಿಯಾಚೆಗೆ… ಬಾಹ್ಯಾಕಾಶದ ವಾಣಿಜ್ಯ ಅಖಾಡಕ್ಕಿಳಿದ ಇಸ್ರೋ

ABOUT THE AUTHOR

...view details