ವಾಷಿಂಗ್ಟನ್:ಚೀನಾದ ವಿರೋಧದ ನಡುವೆಯೂ ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅತ್ಯುನ್ನತ ಶ್ರೇಣಿಯ ಅಮೆರಿಕದ ಪ್ರತಿನಿಧಿ ಇವರಾಗಿದ್ದಾರೆ. ಅತ್ತ ತೈವಾನ್‌ಗೆ ಪೆಲೋಸಿ ಭೇಟಿ ನೀಡುತ್ತಿದ್ದಂತೆ ಇತ್ತ ಚೀನಾ ಮಿಲಿಟರಿ ಸನ್ನದ್ಧತೆಯನ್ನು ಘೋಷಿಸಿದೆ.
ಸ್ಪೀಕರ್ ನ್ಯಾನ್ಸಿ ಪೆಲೋಸಿ ಅಮೆರಿಕ ಭೇಟಿ ಚೀನಾ- ಅಮೆರಿಕ ನಡುವಣ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಚೀನಾ ತೈವಾನ್ ತನ್ನ ರಾಷ್ಟ್ರದ ಭಾಗವೆಂದು ಪ್ರತಿಪಾದಿಸುತ್ತಾ ಬಂದಿದೆ. ವಿದೇಶಗಳ ನಾಯಕರು ಮತ್ತು ಪ್ರತ್ಯೇಕ ರಾಜತಾಂತ್ರಿಕತೆಯನ್ನು ಚೀನಾ ವಿರೋಧಿಸುತ್ತದೆ. ಡ್ರ್ಯಾಗನ್ನ ಈ ಪ್ರತಿರೋಧದ ನಡುವೆ ಪೆಲೋಸಿ ತೈವಾನ್ ಭೇಟಿ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದ್ದರೆ, ಮತ್ತೊಂದು ಕಡೆ ಎರಡೂ ರಾಷ್ಟ್ರಗಳ ನಡುವಣ ಉದ್ವಿಗ್ನತೆಗೂ ಕಾರಣವಾಗಿದೆ.
ಅಧ್ಯಕ್ಷ ಜೋ ಬೈಡನ್ ಚೀನಾದ ಈ ಆರೋಪಗಳನ್ನು ತಳ್ಳಿಹಾಕಿದ್ದು, ಚೀನಾ - ಅಮೆರಿಕ ನಡುವಣ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ನಾವು ಚೀನಾದ ಒಂದು ರಾಷ್ಟ್ರ ನೀತಿಯನ್ನು ಒಪ್ಪುತ್ತೇವೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ತೈಪೆಯೊಂದಿಗೆ ಅಮೆರಿಕ ದೀರ್ಘ ಕಾಲಿಕ ಸಂಬಂಧಗಳನ್ನು ಹೊಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದೇಕೆ?: ಪೆಲೋಸಿ ಅವರ ಈ ಭೇಟಿಯ ಉದ್ದೇಶ ಪ್ರಜಾಪ್ತಭುತ್ವದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಟಿಯಾನ್ಮೆನ್ ಸ್ಮೇರ್ ದುರ್ಘಟನೆಗೆ ತಿರುಗೇಟು ನೀಡುವ ಉದ್ದೇಶ ಪೆಲೋಸಿ ಅವರದ್ದು, ತೈವಾನ್ನಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಉದ್ದೇಶ ಅವರದ್ದು. ಏಕೆಂದರೆ ಚೀನಾ ಪ್ರಜಾಪ್ರಭುತ್ವದ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇನ್ನು ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಸ್ವದೇಶಿ ಪ್ರಜಾಪ್ರಭುತ್ವ ಚಳವಳಿ ಹತ್ತಿಕ್ಕಿದ್ದವು.
ಜಗತ್ತು ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವಿನ ಆಯ್ಕೆಯನ್ನು ಗುರುತಿಸುವ ಮತ್ತು ಹೊಂದುವ ಕಾಲಘಟ್ಟದಲ್ಲಿವೆ. ಹೀಗಾಗಿ ಸ್ವೀಕರ್ ಪೆಲೋಸಿ ಅವರ ಈ ಭೇಟಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳ್ಳುವ ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಗಷ್ಟೇ ಅವರು ಉಕ್ರೇನ್ಗೆ ಕಾಂಗ್ರೆಸ್ ನಿಯೋಗದೊಂದಿಗೆ ಭೇಟಿ ನೀಡಿದ್ದರು. ಈ ಮೂಲಕ ಪ್ರಜಾಪ್ರಭುತ್ವ ನೆಲೆಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ನಿರುಂಕುಶಾಧಿಕಾರಕ್ಕೆ ಮಣಿಯಲ್ಲ:ತೈವಾನ್ ಭೇಟಿ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಜತೆ ಮಾತನಾಡಿರುವ ನ್ಯಾನ್ಸಿ ಪೆಲೋಸಿ, "ನಾವು ಎಂದಿಗೂ ನಿರಂಕುಶಾಧಿಕಾರಿಗಳಿಗೆ ಮಣಿಯುವುದಿಲ್ಲ. ಅಮೆರಿಕ ಮತ್ತು ನಮ್ಮ ಮಿತ್ರರಾಷ್ಟ್ರಗಳು ಈ ಬಗ್ಗೆ ಸ್ಪಷ್ಟಪಡಿಸುವುದು ಇಂದಿನ ಅತ್ಯಗತ್ಯ ಎಂದು ಹೇಳಿದ್ದಾರೆ.
ತೈವಾನ್ ಬಗ್ಗೆ ಅಮೆರಿಕದ ನಿಲುವೇನು? : ಅಮೆರಿಕ ಅಧ್ಯಕ್ಷ ಮತ್ತು ಸ್ಪೀಕರ್ ನ್ಯಾನ್ಸಿ ಪೆಲೋಸಿ ಒಂದು ಚೀನಾ ನೀತಿಗೆ ಅಮೆರಿಕ ಬದ್ಧ ಎಂದು ಸ್ಪಷ್ಟ ಪಡಿಸಿದ್ದಾರೆ. 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆದರೆ, ಚೀನಾ ತೈವಾನ್ ದ್ವೀಪವನ್ನು ತನ್ನ ಸ್ವಂತ ಪ್ರದೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ ತೈವಾನ್ ವಶಕ್ಕೆ ಪಡೆಯಲು ಮಿಲಿಟರಿ ಕಾರ್ಯಾಚರಣೆ ಮಾಡಲು ಹಿಂಜರಿಯಲ್ಲ ಎಂದೂ ಘೋಷಿಸಿದೆ.
ಇದರ ಭಾಗವಾಗಿಯೇ ನ್ಯಾನ್ಸಿ ಪೆಲೋಸಿ ತೈವಾನ್ ತಲುಪುತ್ತಿದ್ದಂತೆ ಚೀನಾ ಮಿಲಟರಿ ಕಾರ್ಯಾಚರಣೆ ಘೋಷಿಸಿದೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡ ಎರಡನ್ನೂ ಹೆಚ್ಚಿಸುತ್ತಿದೆ. 2016 ರಲ್ಲಿ ಅಧ್ಯಕ್ಷ ತ್ಸೈ ಇಂಗ್-ವೆನ್ ದ್ವೀಪ ಮತ್ತು ಮುಖ್ಯ ಭೂಭಾಗವು ಒಂದೇ ಚೀನೀ ರಾಷ್ಟ್ರದ ಪ್ರತಿಪಾದನೆ ಮಾಡುತ್ತಿದೆ.