ಕರ್ನಾಟಕ

karnataka

ETV Bharat / opinion

ವಿಶೇಷ ಅಂಕಣ: ಭಾರತೀಯ ಔಷಧಿ ಕಂಪನಿಗಳಿಗೆ ಸ್ವಾವಲಂಬನೆ ಅಗತ್ಯ - Pharma

ಲಡಾಖ್‌ ಬಳಿ ಗಡಿ ಅತಿಕ್ರಮಣಗಳನ್ನು ಪರಿಣಾಮಕಾರಿಯಾಗಿ ತಡೆಯೊಡ್ಡಿದ ನಂತರ, ಭಾರತವು ಚೀನಾದ ಉತ್ಪನ್ನಗಳ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಆದರೆ ಜೀವ ಉಳಿಸುವ ಔಷಧಿಗಳ ಮೇಲಿನ ನಿಷೇಧವು ಆಟಿಕೆಗಳ ಹಾಗೂ ಆ್ಯಪ್​ಗಳ ಮೇಲಿನ ನಿಷೇಧದಷ್ಟು ಸುಲಭವಲ್ಲ.

Self reliance vital for Indian Pharma
ಔಷಧಿ ಕಂಪನಿ

By

Published : Jul 30, 2020, 1:09 PM IST

ಸ್ವಾವಲಂಬಿ ಭಾರತವನ್ನು ನಿರ್ಮಿಸುವ ದೂರದೃಷ್ಟಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ 'ಆತ್ಮ ನಿರ್ಭರ ಭಾರತ' ಅಭಿಯಾನವನ್ನು ಪ್ರಾರಂಭಿಸಿದರು. ಭಾರತವು 'ಫಾರ್ಮಸಿ ಆಫ್‌ ದಿ ವರ್ಲ್ಡ್‌' ಆಗುವ ಮಹತ್ವಾಕಾಂಕ್ಷಿ ಉದ್ದೇಶ ಮತ್ತು ಗುರಿ ಹೊಂದಿದ್ದರೂ ಸಹ ನಾವು ಈಗಲೂ ಶೇಕಡಾ 78 ರಷ್ಟು ಆಕ್ಟಿವ್‌ ಫಾರ್ಮಾಸಿಟಿಕಲ್‌ ಇನ್​​ಗ್ರೀಡಿಯಂಟ್ಸ್‌ (API) ಮತ್ತು ಸಂಬಂಧಿತ ವಸ್ತುಗಳನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಅವಶ್ಯಕತೆಗಳಲ್ಲಿ 60 ಪ್ರತಿಶತಕ್ಕಿಂತಲೂ ಹೆಚ್ಚು ಚೀನಾದಿಂದ ಮಾತ್ರ ಆಮದಾಗುತ್ತದೆ.

ಎರಡು ದಶಕಗಳ ಹಿಂದಿನವರೆಗೂ ಭಾರತ ದೇಶೀಯವಾಗಿ ಎಪಿಐಗಳನ್ನು ತಯಾರಿಸುತ್ತಿತ್ತು. ಚೀನಾ ಔಷಧಿಗೆ ಸಂಬಂಧಿಸಿದ ಉತ್ಪನ್ನಗಳ ಆಕ್ರಮಣಕಾರಿ ಉತ್ಪಾದನೆಗೆ ಮುಂದಾದಾಗಿನಿಂದ, ಸ್ಥಳೀಯ ತಯಾರಕರು ಚೀನಾದ ಅಗ್ಗದ ಆಮದಿಗೆ ತಿರುಗಿದರು. ಆಸ್ಪಿರಿನ್ ಮತ್ತು ಕ್ರೋಸಿನ್ ನಂತಹ ಕೌಂಟರ್ ಮಡಿಸಿನ್​​​ಗಳಿಗೂ ಸಹ, ದೇಶೀಯ ಔಷಧ ಕಂಪನಿಗಳು ಚೀನಾವನ್ನು ಅವಲಂಬಿಸಿವೆ. ಸಂಸತ್ತಿನ ವರದಿಯ ಪ್ರಕಾರ, ಚೀನಾದ ಔಷಧೀಯ ವಲಯದ ಮೇಲೆ ಭಾರತದ ಅವಲಂಬನೆಯು ಶೇಕಡಾ 23 ರಷ್ಟು ಹೆಚ್ಚಾಗಿದೆ. ಔಷಧಿಗಳು ಮತ್ತು ಔಷಧಿ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳಿಗಾಗಿ ಚೀನಾವನ್ನು ಅತಿಯಾಗಿ ಅವಲಂಬಿಸಿರುವ ಕುರಿತಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಲಡಾಖ್‌ ಬಳಿ ಗಡಿ ಅತಿಕ್ರಮಣಗಳನ್ನು ಪರಿಣಾಮಕಾರಿಯಾಗಿ ತಡೆಯೊಡ್ಡಿದ ನಂತರ, ಭಾರತವು ಚೀನಾದ ಉತ್ಪನ್ನಗಳ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಆದರೆ ಜೀವ ಉಳಿಸುವ API ಮೇಲಿನ ನಿಷೇಧವು ಆಟಿಕೆಗಳ ಮೇಲಿನ ನಿಷೇಧದಂತೆ ಅಷ್ಟು ಸುಲಭವಲ್ಲ. ಸಂಸದೀಯ ಸಮಿತಿಯು ಸವಾಲನ್ನು ಕೂಲಂಕಷವಾಗಿ ಪರಿಶೀಲಿಸಿದೆ ಮತ್ತು ಸಮಗ್ರ ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಿದೆ. ಎಪಿಐ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಮಹತ್ವವನ್ನು ವರದಿಯು ಒತ್ತಿ ಹೇಳಿದೆ. ಇದಲ್ಲದೆ, ಜೆನೆರಿಕ್ ಔಷಧಿಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಲು ಮತ್ತು ಔಷಧಿಗಳ ಮೇಲಿನ ನಿಜವಾದ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲು ಬಲವಾಗಿ ಸಲಹೆ ನೀಡಿದೆ. ಸರ್ಕಾರವು ದೇಶೀಯ ವೈದ್ಯಕೀಯ ಉತ್ಪಾದನೆಯನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಬೃಹತ್ ಔಷಧ ಘಟಕಗಳನ್ನು ಸ್ಥಾಪಿಸಬೇಕು ಎಂದು ಒತ್ತಿ ಹೇಳಿದೆ.

ಎರಡು ವರ್ಷಗಳ ಹಿಂದೆ, ಬೀಜಿಂಗ್‌ನಲ್ಲಿನ ಮಾಲಿನ್ಯಕಾರಕ ಸಂಸ್ಥೆಗಳ ಮೇಲಿನ ದೌರ್ಜನ್ಯವು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದೆ, ಅಷ್ಟರ ಮಟ್ಟಿಗೆ ವಿಟಮಿನ್ ಸಿ ಕ್ಯಾಪ್ಸುಲ್‌ಗಳ ಕೊರತೆ ಇತ್ತು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು 2015 ಅನ್ನು ಎಪಿಐ ವರ್ಷವೆಂದು ಘೋಷಿಸಿತು. ಎಪಿಐ ವಲಯಕ್ಕಾಗಿ ಮೇಕ್ ಇನ್ ಇಂಡಿಯಾದ ಉದ್ದೇಶವನ್ನು ಸಾಧಿಸಲು ಉತ್ತಮ ಮತ್ತು ಹೆಚ್ಚು ಸಂಘಟಿತ ಪ್ರಯತ್ನಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು. 2013 ರಲ್ಲಿ ಅಂದಿನ ಯುಪಿಎ ಸರ್ಕಾರ ವಿಎಂ ಕಟೋಚ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಬೃಹತ್ ಔಷಧಿಗಳ ಪ್ರಾಮುಖ್ಯತೆ ಮತ್ತು ಚೀನಾದ ಮೇಲೆ ಭಾರತೀಯ ಔಷಧ ಮಾರುಕಟ್ಟೆಯ ಅತಿಯಾದ ಅವಲಂಬನೆಯ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವುದು ಇದರ ಉದ್ದೇಶವಾಗಿತ್ತು. ಸಮಿತಿಯು ಬೃಹತ್ ಡ್ರಗ್ಸ್‌ ಪಾರ್ಕ್ ಸ್ಥಾಪಿಸಲು ಪ್ರಸ್ತಾಪಿಸಿತು ಮತ್ತು ಈ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಲು ಅಗತ್ಯವಾದ ರಿಯಾಯಿತಿಗಳ ಪ್ಯಾಕೇಜ್ ಅನ್ನು ವಿವರಿಸಿದೆ.

ಇದಲ್ಲದೆ, ಮಾಲಿನ್ಯ ಮುಕ್ತ ಸಮೂಹಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸರ್ಕಾರ ಸಹಕರಿಸಬೇಕು. ಹೆಚ್ಚಿನ ಸಂಶೋಧನೆಗೆ ಉತ್ತೇಜನ ನೀಡಬೇಕು ಎಂದು ಅದು ಶಿಫಾರಸು ಮಾಡಿದೆ. ದುರದೃಷ್ಟವಶಾತ್, ಸಂಶೋಧನೆಗೆ ಅಧಿಕೃತ ಅನುಮೋದನೆ ಅಗತ್ಯವಿರುವ ಏಕೈಕ ದೇಶ ಭಾರತ. ಉದ್ಯಮದ ಮೂಲಗಳ ಪ್ರಕಾರ, ಈ ಹಿಂದೆ ಆರು ಪೆನಿಸಿಲಿನ್ ಜಿ ಉತ್ಪಾದನಾ ಘಟಕಗಳು ಇದ್ದವು. ಸರ್ಕಾರದ ಬೆಂಬಲ ಕೊರತೆಯಿಂದಾಗಿ ಅವರೆಲ್ಲರೂ ಚೀನಾಕ್ಕೆ ಸ್ಥಳಾಂತರಗೊಂಡರು. ಅಷ್ಟು ಉತ್ತಮವಾಗಿಲ್ಲದ ಭೂತಕಾಲವನ್ನು ದಾಟಿ, ಕೇಂದ್ರ ಸರ್ಕಾರವು ಬೃಹತ್ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ದೇಶೀಐ ಉತ್ಪಾದನೆ ಮತ್ತು ರಫ್ತುಗಳ ಉತ್ತೇಜಿಸಲು ಮಾರ್ಚ್‌ ತಿಂಗಳಲ್ಲಿ 13,760 ಕೋಟಿ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಚೀನಾದ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸುವುದು ಭಾರತಕ್ಕೆ ಅತ್ಯಂತ ನ್ಯಾಯಯುತ ಕ್ರಮವಾಗಿದೆ.

ABOUT THE AUTHOR

...view details