ಕರ್ನಾಟಕ

karnataka

ETV Bharat / opinion

ವಿಶ್ಲೇಷಣೆ: ಅಮೆರಿಕದ ಕ್ರಮ ಗೊಡ್ಡು ಬೆದರಿಕೆಗಳಿಗೆ ಸೀಮಿತವೇ? - America Fight Against Global Terrorism

ಜಾಗತಿಕ ಭಯೋತ್ಪಾದನೆಯ ವಿರುದ್ಧ ಅಮೆರಿಕದ ಹೋರಾಟವು ಈಗ ಆ ದೇಶದ ನಿಲುವಿನ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆಯಾಗಿ ನಿಂತಿದೆ. ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವು ತನ್ನ ದಾರಿಯಲ್ಲಿ ದಿಕ್ಕು ತಪ್ಪಿರುವಂತೆ ತೋರುತ್ತಿದೆ. ಅದರ ಇತಿಹಾಸವನ್ನು ಅವಲೋಕಿಸಿದರೆ ಅದು ಸ್ಪಷ್ಟವಾಗುತ್ತದೆ.

ಅಮೆರಿಕದ ಕ್ರಮ ಗೊಡ್ಡು ಬೆದರಿಕೆಗಳಿಗೆ ಸೀಮಿತವೇ?
ಅಮೆರಿಕದ ಕ್ರಮ ಗೊಡ್ಡು ಬೆದರಿಕೆಗಳಿಗೆ ಸೀಮಿತವೇ?

By

Published : Mar 7, 2022, 10:22 PM IST

ರಷ್ಯಾ ದೇಶವು ಉಕ್ರೇನ್ ಮೇಲೆ ದಾಳಿ ಮಾಡಿದಲ್ಲಿಂದ ಈ 12 ದಿನಗಳಲ್ಲಿ ಯುರೋಪ್ ಖಂಡವು ಬಿಕ್ಕಟ್ಟಿನ ಸ್ಥಿತಿಯಲ್ಲಿರುವಾಗ ಅಮೆರಿಕವು ರಷ್ಯಾಕ್ಕೆ ಗೊಡ್ಡು ಬೆದರಿಕೆಗಳನ್ನು ಹಾಕುವುದಕ್ಕೆ ಸೀಮಿತವಾಗಿದೆ. ಜಾಗತಿಕ ಘಟನೆಗಳಿಗೆ ತೀವ್ರ ಸ್ವರೂಪದ ಪ್ರತಿಕ್ರಿಯೆ ನೀಡಿ ಸೇನೆಯೊಂದಿಗೆ ಧಾವಿಸುತ್ತಿದ್ದ ಆ ದೇಶದ ಶೌರ್ಯದ ದಿನಗಳು ಕಳೆದು ಹೋಗಿವೆಯೇ ಎಂದು ಭಾವಿಸುವಂತೆ ಮಾಡಿದೆ. ರಷ್ಯಾದ ಮೇಲೆ ವಿಧಿಸಿರುವ ನಿರ್ಬಂಧಗಳಿಂದಲೇ ಜೋ ಬಿಡೆನ್ ಸರ್ಕಾರವು ತೃಪ್ತವಾಗಿರುವಂತೆ ತೋರುತ್ತಿದೆ ಮತ್ತು, ಹೆಚ್ಚೆಂದರೆ, ರಷ್ಯಾದ ವಿರುದ್ಧ ತಟಸ್ಥವಾಗಿರುವುದಕ್ಕಾಗಿ ಮುಂಬರುವ ವಾರಗಳಲ್ಲಿ ಭಾರತದ ವಿರುದ್ಧವೂ ಅದು ನಿರ್ಬಂಧಗಳನ್ನು ವಿಧಿಸಬಹುದು.

ಜಾಗತಿಕ ಭಯೋತ್ಪಾದನೆಯ ವಿರುದ್ಧ ಅಮೆರಿಕದ ಹೋರಾಟವು ಈಗ ಆ ದೇಶದ ನಿಲುವಿನ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆಯಾಗಿ ನಿಂತಿದೆ. ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವು ತನ್ನ ದಾರಿಯಲ್ಲಿ ದಿಕ್ಕು ತಪ್ಪಿರುವಂತೆ ತೋರುತ್ತಿದೆ. ಅದರ ಇತಿಹಾಸವನ್ನು ಅವಲೋಕಿಸಿದರೆ ಅದು ಸ್ಪಷ್ಟವಾಗುತ್ತದೆ.

2001ರ ಸೆಪ್ಟೆಂಬರ್ 11ರ ಸಂಜೆ ತಾಲಿಬಾನ್ ಉಗ್ರರು ಅಪಹೃತ ಎರಡು ವಿಮಾನಗಳು ವಿಶ್ವ ವ್ಯಾಪಾರ ಕೇಂದ್ರದ (ವರ್ಲ್ಡ್ ಟ್ರೇಡ್ ಸೆಂಟರ್) ಟವರ್‌ಗಳನ್ನು ನಾಶಪಡಿಸಿದರೆ, ಮೂರನೆಯದನ್ನು ಪೆಂಟಗನ್ ಕಟ್ಟಡಕ್ಕೆ ಢಿಕ್ಕಿ ಹೊಡೆಸಲಾಯಿತು. ಈ ಘಟನೆಯಿಂದ ಜಗತ್ತೇ ಆಘಾತವನ್ನು ಅನುಭವಿಸಿತ್ತು. ಭಯೋತ್ಪಾದನೆಯನ್ನು ವಿರೋಧಿಸಿ ತಮ್ಮ ದೇಶವು ಹೊಸ ಬಗೆಯ ಯುದ್ಧವನ್ನು ಪ್ರಾರಂಭಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಗುಡುಗಿದ್ದರು.

ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ದೂರದರ್ಶನದ ಭಾಷಣದಲ್ಲಿ, ಅಮೆರಿಕ ಮತ್ತು ನಮ್ಮ ಸ್ನೇಹಿತರು ಮತ್ತು ಮಿತ್ರರಾಷ್ಟ್ರಗಳು "ಜಗತ್ತಿನಲ್ಲಿ ಶಾಂತಿ ಮತ್ತು ಭದ್ರತೆಯನ್ನು ಬಯಸುವ ದೇಶಗಳೊಂದಿಗೆ ಸೇರಿಕೊಳ್ಳುತ್ತೇವೆ. ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು ಗೆಲ್ಲಲು ನಾವು ಒಟ್ಟಾಗಿ ನಿಲ್ಲುತ್ತೇವೆ" ಎಂದು ಜಾರ್ಜ್ ಬುಷ್ ಘೋಷಿಸಿದ್ದರು.

ಬುಷ್ ಅವರು ಮೊದಲಿಗೆ ಬಳಸಿರುವ ಈ ಪದಗಳು ಅವರ ಅಧ್ಯಕ್ಷ ಸ್ಥಾನವನ್ನು ಮತ್ತು ಆಮೇಲೆ ಬಂದ ಮೂವರು ಉತ್ತರಾಧಿಕಾರಿಗಳನ್ನು ಆಳವಾಗಿ ವ್ಯಾಖ್ಯಾನಿಸಲು ಮತ್ತು ರೂಪಿಸಲು ಬಳಕೆಯಾಗುತ್ತವೆ. ಭಯೋತ್ಪಾದನೆಯ ಮೇಲಿನ ಜಾಗತಿಕ ಯುದ್ಧವು ಆಧುನಿಕ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವಿಸ್ತಾರವಾದ ಮತ್ತು ದೂರಗಾಮಿ ನೀತಿಯ ಉಪಕ್ರಮಗಳಲ್ಲಿ ಒಂದಾಗಿದೆ ಮತ್ತು 2000ರ ದಶಕದಲ್ಲಿ ಖಂಡಿತವಾಗಿಯೂ ಮಹತ್ವದ್ದಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: 10 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಈ ನೀತಿಯ ಫಲವಾಗಿ ಅಮೆರಿಕವು ಎರಡು ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸರ್ಕಾರಗಳನ್ನು ಪದಚ್ಯುತಗೊಳಿಸುವುದನ್ನು ಕಾಣುವಂತಾಯಿತು. ಪ್ರತಿಯೊಂದು ದೇಶದಲ್ಲಿಯೂ ಅದು ಒಂದು ವರ್ಷದಷ್ಟು ಸುದೀರ್ಘವಾದ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತು. ಹೇಳಿಕೊಂಡಂತೆ, ಪಾಕಿಸ್ತಾನದಿಂದ ಸೊಮಾಲಿಯಾ ಮತ್ತು ಫಿಲಿಪೈನ್ಸ್‌ವರೆಗೆ ಸಾವಿರಾರು ಮೈಲುಗಳಷ್ಟು ಭೂಪ್ರದೇಶವನ್ನು ವ್ಯಾಪಿಸಿರುವ ಡ್ರೋನ್‌ಗಳ ಮೂಲಕ ಹೊಸ ರೀತಿಯ ಯುದ್ಧವನ್ನು ಪ್ರಾರಂಭಿಸಿತು; ಆರೋಪವಿಲ್ಲದೆ ಬಂಧನದ ವ್ಯವಸ್ಥೆಯನ್ನು ಔಪಚಾರಿಕಗೊಳಿಸಿತು. ಉಗ್ರಗಾಮಿಗಳೆಂಬ ಆರೋಪ ಹೊತ್ತವರಿಗೆ ವ್ಯಾಪಕವಾಗಿ ಚಿತ್ರಹಿಂಸೆ ಕೊಡಲಾಯಿತು; ಪ್ರಪಂಚದಾದ್ಯಂತ ವಿಶೇಷ ಪಡೆಗಳ ತಂಡಗಳಿಂದ ಹಲವಾರು ಸಣ್ಣ ದಾಳಿಗಳನ್ನು ನಡೆಸಿತು; ಮತ್ತು ಅಮೆರಿಕದಲ್ಲಿ ವಿಮಾನ ಪ್ರಯಾಣ ಮತ್ತು ಗಡಿ ಭದ್ರತೆಗೆ ಗಮನಾರ್ಹ ಬದಲಾವಣೆಗಳನ್ನು ತಂದಿತು.

ಆದರೆ 9/11ರ ದಾಳಿಯು ಆವರೆಗೆ ಅಸ್ತಿತ್ವದಲ್ಲಿದ್ದ ನೀತಿಗೆ ಬದಲಾಗಿ ಒಂದು ವಿಭಿನ್ನ ನೀತಿಯ ಆಡಳಿತದ ಆರಂಭವನ್ನು ಸಂಕೇತಿಸಿತು. ಆ ಆಡಳಿತವು ಹಲವು ರೂಪಗಳಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ. ಅಪಘಾನಿಸ್ತಾನದಿಂದ ಅಮೆರಿಕದ ಸೇನೆಯು ನಿರ್ಗಮಿಸಿದ್ದರೂ ಇದಕ್ಕೇನೂ ಬಾಧಕವಾಗಿಲ್ಲ.

ಕಳೆದ 20 ವರ್ಷಗಳಲ್ಲಿ, ಈ ಹೊಸ ನೀತಿಯ ಆಡಳಿತದ ವೆಚ್ಚಗಳು- ವೆಚ್ಚಗಳೆಂದರೆ ಕಳೆದುಹೋದ ಜೀವಗಳು, ಖರ್ಚು ಮಾಡಿದ ಹಣ, ಸ್ಥಳಾಂತರಗೊಂಡ ಜನರು ಮತ್ತು ಇಡೀ ಸಮುದಾಯಗಳು, ಹಿಂಸೆ ಅನುಭವಿಸಿದ ದೇಹಗಳು - ಎಲ್ಲವೂ ಸ್ಪಷ್ಟವಾಗಿವೆ. ಆದ್ದರಿಂದ, ಸರಳವಾದ ಮತ್ತು ವಿಶಾಲವಾದ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವುದು ನಮಗೆ ಸೂಕ್ತವಾಗಿದೆ: ಅದು ಯೋಗ್ಯವಾಗಿದೆಯೇ?

ಈ ಪ್ರಶ್ನೆಗೆ ಉತ್ತರಿಸಲು ಪ್ರಾಮಾಣಿಕವಾದ ಪ್ರಯತ್ನ - ನಮ್ಮ ಸೈದ್ಧಾಂತಿಕ ಹಿನ್ನೆಲೆಗಳು ಮತ್ತು ಆದ್ಯತೆಗಳನ್ನು ಮಾತ್ರ ಆಶ್ರಯಿಸದೆ, ಲೆಡ್ಜರ್‌ನಲ್ಲಿ ಬರೆದಿರುವ ವೆಚ್ಚಗಳು ಮತ್ತು ಪ್ರಯೋಜನಗಳನ್ನು ಹೋಲಿಸಿ ಲೆಕ್ಕ ಹಾಕುವುದು - ನೀವು ಯೋಚಿಸುವುದಕ್ಕಿಂತ ಹೆಚ್ಚು ಸವಾಲಿನದಾಗಿದೆ. ಸವಾಲಿನದು ಏಕೆಂದರೆ, ಇದು ಅಂತರ್ಗತವಾಗಿ ಪ್ರಮಾಣೀಕರಿಸಲಾಗದ ಪರಿಮಾಣವನ್ನು ಒಳಗೊಂಡಿರುತ್ತದೆ. ಪ್ರತಿಪಾದಕರು ವಾದಿಸಿದಂತೆ, ಭಯೋತ್ಪಾದನೆಯ ಮೇಲಿನ ಯುದ್ಧವು ಅಮೆರಿಕವನ್ನು ಸುರಕ್ಷಿತವಾಗಿ ಇರಿಸಿದ್ದರೆ, ಮುಂದಿನ ದಾಳಿಯ ನಿರಂತರ ಭಯದ ಸ್ಥಿತಿಯಲ್ಲಿ ಇಲ್ಲದಿರುವ ಮಾನಸಿಕ ಮೌಲ್ಯವನ್ನು ನೀವು ಹೇಗೆ ಲೆಕ್ಕ ಹಾಕುತ್ತೀರಿ? ಅಥವಾ ಎಷ್ಟೇ ಖರ್ಚು ಮಾಡಿ ದಾಳಿಗಳನ್ನು ಮಾಡಿದ್ದರೂ ಭಯೋತ್ಪಾದನೆಯ ಆತಂಕವನ್ನು ನಿವಾರಿಸಲು ಸಾಧ್ಯವಿಲ್ಲದಿದ್ದರೆ ಏನು ಪ್ರಯೋಜನ? ಈ ರೀತಿ ಅಳೆಯಲಾಗದ ಉದ್ದೇಶಿತ ವೆಚ್ಚಗಳು ಮತ್ತು ಪ್ರಯೋಜನಗಳು ಡಜನ್‌ಗಟ್ಟಲೆ ಇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ದಾಳಿಯನ್ನು ಎದುರಿಸಲಾಗದೆ ಅಮೆರಿಕದ ಸೇನೆಯು ಹಠಾತ್ತಾಗಿ ನಿರ್ಗಮಿಸಿದಲ್ಲಿಂದ ಅದರ 'ಸುರಕ್ಷಿತ ಆಟ'ವು ಬಹಿರಂಗವಾಗಿದೆ. ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿ ಸುಮ್ಮನಾಗಿರುವುದು ಮತ್ತು ಅದನ್ನು ಮೀರಿದ ಕ್ರಮಗಳಿಗೆ ಮುಂದಾಗದೇ ಇರುವುದು ಅಮೆರಿಕವನ್ನು ಜಗತ್ತಿನ ಮುಂದೆ ಇನ್ನಷ್ಟು ಕನಿಷ್ಠ ಮಟ್ಟಕ್ಕಿಳಿಸಲಿದೆ. ಗೋಡೆಯ ಮೇಲಿನ ಬರಹವು ಸರಳವಾಗಿದೆ, ಜೋರಾಗಿದೆ ಮತ್ತು ಸ್ಪಷ್ಟವಾಗಿದೆ: "ಜೋ ಬಿಡೆನ್ ಅವರ ಅಮೆರಿಕ ಈಗ ಸೂಪರ್ ಪವರ್ ಆಗಿ ಉಳಿದಿಲ್ಲ."

ABOUT THE AUTHOR

...view details