ಹೈದರಾಬಾದ್:ಸದಸ್ಯ ದೇಶಗಳಲ್ಲಿ ತನ್ನ ಆರ್ಥಿಕತೆಯ ಗುರುತುಗಳನ್ನು ಹರಡುವ ಉದ್ದೇಶದಿಂದ ಚೀನಾ ಪ್ರಮುಖ ಆರ್ಥಿಕ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾರಂಭಿಸಿತು. ಅದಕ್ಕಾಗಿ ಅದು 2013ರಲ್ಲಿ ಬಾರ್ಡರ್ ರೋಡ್ ಇನಿಶಿಯೇಟಿವ್ BRI ಅನ್ನು ಶುರು ಮಾಡಿತ್ತು. ವಿಶೇಷ ಎಂದರೆ ಭಾರತವು ಬಾರ್ಡರ್ ರೋಡ್ ಇನಿಶೀಯೇಟಿವ್ BRIನ ಭಾಗವಲ್ಲ. ಚೀನಾ 10 ನೇ ವಾರ್ಷಿಕೋತ್ಸವ ಆಚರಿಸುವ ಮೊದಲೇ ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ (IMEEEC) ಗೆ ಒಪ್ಪಿಗೆ ಸಿಕ್ಕಿದೆ. 18ನೇ ಜಿ-20 ಶೃಂಗಸಭೆ ವೇಳೆ ಅಮೆರಿಕ, ಸೌದಿ ಅರೇಬಿಯಾ ಹಾಗೂ ಯುರೋಪಿಯನ್ ಒಕ್ಕೂಟದ ಒಮ್ಮತದ ತೀರ್ಮಾನದ ಮೇಲೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತವನ್ನು ಪಶ್ಚಿಮ ಏಷ್ಯಾ ಮತ್ತು ಯುರೋಪ್‌ನೊಂದಿಗೆ ಹಡಗು ಮತ್ತು ರೈಲು ಸಂಪರ್ಕಗಳ ಮೂಲಕ ಸಂಪರ್ಕಿಸುವ ಬಹು ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ದೆಹಲಿಯಲ್ಲಿ ನಡೆದ ಶೃಂಗಸಭೆ ವೇಳೆ ಅಮರಿಕ, ಪಶ್ಚಿಮ ಏಷ್ಯಾ ಮತ್ತು ಯುರೋಪಿಯನ್ ಯೂನಿಯನ್ ದೇಶಗಳು ಈ ಕಾರಿಡಾರ್ ಕುರಿತು ಒಮ್ಮತಕ್ಕೆ ಬಂದವು. ಈ ಯೋಜನೆ ಭಾರತವನ್ನು ಸೌದಿ ಅರೇಬಿಯಾ ಮೂಲಕ ಯುರೋಪ್‌ನೊಂದಿಗೆ ತ್ವರಿತ ಮತ್ತು ಮುಕ್ತ ವ್ಯಾಪಾರಕ್ಕಾಗಿ ಸಂಪರ್ಕಿಸುವ ಸುಗಮವಾದ ಮಾರ್ಗ ಇದಾಗಿದೆ. ಈ ಒಪ್ಪಂದವು ಚೀನಾದ BRIಗೆ ಪರ್ಯಾಯವಾಗಿ ರೂಪಿಸಲಾಗಿದೆ. ಈ ಮೂಲಕ ಈ ಪ್ರದೇಶದಲ್ಲಿ ಪಾಕಿಸ್ತಾನದ ಭೌಗೋಳಿಕ ರಾಜಕೀಯ ಮತ್ತು ಕಾರ್ಯತಂತ್ರದ ಮಹತ್ವವನ್ನು ದುರ್ಬಲಗೊಳಿಸಲಿದೆ ಎಂಬ ವಿಶ್ಲೇಷಣೆಗಳಿವೆ. ಮಧ್ಯ ಏಷ್ಯಾಕ್ಕೆ ಸಂಪರ್ಕ ಸಾಧಿಸಲು ಭಾರತಕ್ಕೆ ನೈಸರ್ಗಿಕ ಮತ್ತು ಐತಿಹಾಸಿಕವಾಗಿ ನಿರ್ಣಾಯಕ ಭೂಮಾರ್ಗವು ಪಾಕಿಸ್ತಾನದ ಮೂಲಕವೇ ಹಾದುಹೋಗುವ ಮಾರ್ಗವಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಘರ್ಷ ಈ ಮಾರ್ಗದಿಂದ ದೂರ ಇರುವಂತೆ ಮಾಡಿದೆ. ಹೀಗಾಗಿ ಈ ಹಿಂದೆ ಪ್ರಾಚೀನ ಕಾಲದಲ್ಲಿ ಇದ್ದ ಮಸಾಲೆ ಮಾರ್ಗವನ್ನು ಐಎಂಇಇಇಸಿ ಯೋಜನೆ ಭಾಗವಾಗಿ ಒಪ್ಪಿಕೊಳ್ಳಲಾಗಿದೆ.
ಈಗ IMEEEC ಮೂಲಕ ಏಷ್ಯಾ ಮತ್ತು ಯುರೋಪ್ ಆರ್ಥಿಕವಾಗಿ ಸಂಪರ್ಕ ಸಾಧಿಸಲು ಹೊರಟಿರುವುದರಿಂದ, ಕಾಶ್ಮೀರ ಸೇರಿದಂತೆ ಕೆಲವು ವಿವಾದಾತ್ಮಕ ವಿಷಯಗಳನ್ನು ಹೊರತುಪಡಿಸಿ ಪಾಕಿಸ್ತಾನ ಈಗ ಭಾರತಕ್ಕೆ ಸಂಪೂರ್ಣವಾಗಿ ಅಪ್ರಸ್ತುತವನ್ನಾಗಿ ಮಾಡಲು ಸಿಕ್ಕ ದೊಡ್ಡ ಅಸ್ತ್ರವಾಗಿದೆ. ಪಾಕಿಸ್ತಾನದಲ್ಲಿ ಚೀನಾದ BRI ಯೋಜನೆ ಆಗಿರುವ ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ CPEC ಗಿಲ್ಗಿಟ್ - ಬಾಲ್ಟಿಸ್ತಾನ್ ಮತ್ತು ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಂದ ಬಲವಾದ ವಿರೋಧ ಎದುರಿಸುತ್ತಿದೆ. ಹೀಗಾಗಿ ಈ ಯೋಜನೆ ಭವಿಷ್ಯದಲ್ಲಿ ಚೀನಾ-ಪಾಕ್ಗೆ ತೊಂದರೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೀಗ ಪರ್ಯಾಯ ಮಾರ್ಗ:ಪಾಕಿಸ್ತಾನ, ಚೀನಾ ಮತ್ತು ಅವರ ಇತರ ಸಣ್ಣ ಸಣ್ಣ ಮಿತ್ರ ರಾಷ್ಟ್ರಗಳು ಸಿಪಿಇಸಿ ಕಾರಿಡಾರ್ ಯೋಜನೆಯಿಂದ ಹಿಂದೆ ಸರಿಯುವ ಯೋಚನೆ ಮಾಡುವ ಸಾಧ್ಯತೆಗಳಿವೆ. ಸೌದಿ ಅರೇಬಿಯಾವು ಭಾರತ - ಮಧ್ಯಪ್ರಾಚ್ಯ ಕಾರಿಡಾರ್‌ನಲ್ಲಿ ಮಹತ್ವದ ಮಧ್ಯಸ್ಥಗಾರನಾಗಿದ್ದು, ಬಹಳ ಹಿಂದಿನಿಂದಲೂ ಪಾಕಿಸ್ತಾನದ ಸ್ನೇಹಿತನಾಗಿದೆ. ರಿಯಾದ್‌ನಲ್ಲಿ ಭೇಟಿಯಾದಾಗ ಭಾರತದ ಭದ್ರತಾ ಸಲಹೆಗಾರರ, NSA ಮಟ್ಟದ ಮಾತುಕತೆಯ ಸಮಯದಲ್ಲಿ ಅಮೆರಿಕ, ಸೌದಿ, ಯುಎಇ ಜತೆ ವ್ಯಾಪಾರ ಮಾರ್ಗದ ಪ್ರಸ್ತಾಪ ಇಟ್ಟಿದ್ದರು.