ಟೊಮೆಟೊ, ಈರುಳ್ಳಿ ಮತ್ತು ಅಕ್ಕಿಯಂತಹ ವಸ್ತುಗಳು ಸೇರಿದಂತೆ ಆಹಾರ ಹಣದುಬ್ಬರ ಎದುರಿಸಿದ್ದ ಭಾರತಕ್ಕೆ ಇದೀಗ ಮತ್ತೊಂದು ಆಹಾರ ಬಿಕ್ಕಟ್ಟು ಎದುರಾಗಲಿದೆ. ಅದುವೇ ಸಕ್ಕರೆ. ಆಗಸ್ಟ್ನಲ್ಲಿ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಆದ ಕಡಿಮೆ ಮಳೆ ಹಿನ್ನೆಲೆ ದೇಶದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಸರ್ಕಾರ ಏಳು ವರ್ಷಗಳ ಬಳಿಕ ಮತ್ತೊಮ್ಮೆ ಸಕ್ಕರೆ ರಫ್ತಿಗೆ ನಿಷೇದ ಹೇರಿದೆ. ಇನ್ನು ಸಕ್ಕರೆ ಉತ್ಪಾದನೆಯ ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲೇ ಕಡಿಮೆ ಅಂದರೆ ಶೇ 14ರಷ್ಟು ಉತ್ಪಾದನೆ ಕುಸಿದಿದೆ ಎಂದು ವರದಿಯಾಗಿದೆ.
ಸಕ್ಕರೆ ರಫ್ತುದಾರರು ಭಾರತದ ಮಾನ್ಸೂನ್ ಮತ್ತು ಬಿಜ್ರೋಯಿ ಚಂಡಮಾರುತವನ್ನು ಮೇಲ್ವಿಚಾರಣೆ ನಡೆಸುತ್ತಿದ್ದು, ಇದು ಭಾರತದ ಖಾರಿಫ್ ಬೆಳೆ ಬಿತ್ತನೆಗೆ ಅಡ್ಡಿ ಮಾಡಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸಕ್ಕರೆ ದರ ಹೆಚ್ಚಾಗುವ ಸಾಧ್ಯತೆ ಇದೆ. ಭಾರತ ಸಕ್ಕರೆ ನಿಷೇಧ ಹೇರಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಈಗಾಗಲೇ ಕಳೆದ ವರ್ಷವೇ ಸಕ್ಕರೆ ದರ ಶೇ 30ರಷ್ಟು ಹೆಚ್ಚಾಗಿದೆ.
ಬ್ರೆಜಿಲ್ಗೆ ಲಾಭ: ಜಾಗತಿಕ ಮಾರುಕಟ್ಟೆಯನ್ನು ಉತ್ತಮವಾಗಿ ಅರ್ಥೈಸಿಕೊಂಡಾಗ ಸಕ್ಕರೆ ಉತ್ಪಾದಿಸುವ ಮತ್ತೊಂದು ದೇಶವಾದ ಬ್ರೆಜಿಲ್ ಇದರಿಂದ ಲಾಭ ಪಡೆಯಲಿದೆ. ಯುಎಸ್ಡಿಎ ಇತ್ತೀಚಿಗೆ ಅಂದಾಜಿಸಿದಂತೆ ಬ್ರೆಜಿಲ್ನಲ್ಲಿ ಅನುಕೂಲಕರ ವಾತಾವರಣ ಇರುವ ಹಿನ್ನೆಲೆ ಸಕ್ಕರೆ ಉತ್ಪಾದನೆ ಶೇ 6.5ರಷ್ಟು ಹೆಚ್ಚಾಗಿದೆ. ಹಾಗೇ ಸಕ್ಕರೆ ದರ ಕೂಡ ಹೆಚ್ಚಿದೆ. ಆದಾಗ್ಯೂ ಮಾರುಕಟ್ಟೆಯ ಹಣದುಬ್ಬರವನ್ನು ಮುಟ್ಟಲಿದೆಯಾ ಎಂಬ ಅನಿಶ್ಚಿತತೆ ಎದುರಾಗಲಿದೆ. ಇದಕ್ಕೆ ಕಾರಣ ಬ್ರೆಜಿಲ್ ತಮ್ಮ ಸಕ್ಕರೆಯನ್ನು ಜೈವಿಕ ಇಂಧನ ಮತ್ತು ಎಥೆನಾಲ್ ಉತ್ಪಾದನೆಗೆ ತಿರುಗಿಸಲಿದೆ. ಜಿ20 ಶೃಂಗಸಭೆಯಲ್ಲೂ ಜೈವಿಕ ಇಂಧನದ ಉದ್ಯಮದ ಮೇಲೆ ಬ್ರೆಜಿಲ್ ಹೆಚ್ಚಿನ ಗಮನ ಹೊಂದಿರುವುದನ್ನು ತೋರಿಸಿದೆ.
ಸಕ್ಕರೆಗೆ ಬೇಡಿಕೆ: ತನ್ನ ಸಾಂಪ್ರದಾಯಿಕ ಅಂತಾರಾಷ್ಟ್ರೀಯ ಗ್ರಾಹಕರಿಗೆ ಹೊರತಾಗಿ ಬ್ರೆಜಿಲ್ ರಷ್ಯಾ, ಇರಾನ್ ಮತ್ತು ಆಫ್ರಿನ್ ದೇಶಗಳಿಗೆ ಕಚ್ಚಾ ಸಕ್ಕರೆಯನ್ನು ರವಾನಿಸುತ್ತದೆ. ಭಾರತ ಸದ್ಯ ಸಕ್ಕರೆ ಮೇಲೆ ನಿಷೇಧ ಹೇರಿರುವದರಿಂದ ಬ್ರೆಜಿಲ್ ಗಮನಾರ್ಹ ಅವಕಾಶವನ್ನು ಪಡೆಯಲಿದ್ದು, ತಮ್ಮ ಕೃಷಿಕರನ್ನು ಗಮನದಲ್ಲಿರಿಸಿಕೊಂಡು ಇದರ ಬೇಡಿಕೆಯನ್ನು ತೂಗಿಸಲಿದೆ. ಥೈಲ್ಯಾಂಡ್ನಲ್ಲೂ ಕೂಡ ಈ ವರ್ಷ ಸವಾಲಿನಿಂದ ಕೂಡಿರಲಿದೆ. ಇಲ್ಲಿ ಕೂಡ ಬ್ರೆಜಿಲ್ ಸಕ್ಕರೆಗೆ ಭಾರತೀಯ ಖರೀದಿದಾರರಿಂದ ಬೇಡಿಕೆ ಹೆಚ್ಚಲಿದೆ.
ಭಾರತದ ಸಕ್ಕರೆಗೆ ನಿಷೇಧ: ಸಕ್ಕರೆ ಕೊರತೆ ಮತ್ತು ದರ ಹೆಚ್ಚಳದಿಂದ ಭವಿಷ್ಯದಲ್ಲಿ ಎದುರಾಗುವ ಹಣದುಬ್ಬರಕ್ಕೆ ಕಡಿವಾಣ ಹಾಕಿ ಅಧಿಕಾರಿಗಳು ಸಕ್ಕರೆ ರಫ್ತಿಗೆ ನಿಷೇಧ ಹೇರಿದ್ದಾರೆ. ಈ ನಿರ್ಧಾರವೂ ಆಹಾರ ಬಿಕ್ಕಟ್ಟಿನ ಸಂದರ್ಭವನ್ನು ಎದುರಿಸಲು ನಡೆಸಿರುವ ಸರ್ಕಾರದ ಕ್ರಮವಾಗಿದೆ. ಇದು ಈ ಹಿಂದೆ ಟೊಮೆಟೊ ಬಿಕ್ಕಟ್ಟಿನ ಸಂದರ್ಭವನ್ನು ನೆನಪಿಸಿದೆ. ಇದು ಕೃಷಿ ನೀತಿ ಮತ್ತು ರಾಜ್ಯದ ದಕ್ಷತೆಯ ನ್ಯೂನತೆಯನ್ನು ಬಹಿರಂಗಪಡಿಸಿದೆ. ವಿದೇಶಿ ವಿನಿಮಯ ಮೀಸಲು ನಷ್ಟವನ್ನು ಹೆಚ್ಚುವರಿ ಹೊರೆಯನ್ನು ಸೇರಿಸಲಿದೆ. ಟೊಮೆಟೊ ಬೇಡಿಕೆ ಹೆಚ್ಚಿದ ಬಳಿಕ ಹೊಸ ಟೊಮೆಟೊ ಕೊಯ್ಲು ಆದಾಗ ಅದರ ಬೆಲೆಯೂ ಹಠಾತ್ ಕುಸಿತಗೊಂಡಿತು. ಅಲ್ಲದೇ ಇದೀಗ ಕೆಜಿಗೆ 4-5 ರೂ. ಆಗಿದೆ.