ಹೆಸರಾಂತ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮೇಡಮ್ ಕ್ಯೂರಿಯವರ ಜನ್ಮ ವಾರ್ಷಿಕೋತ್ಸವದ ನಿಮಿತ್ತ ನವೆಂಬರ್ 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಅವರು ಅಪಾರ ಕೊಡುಗೆ ನೀಡಿದ್ದು, ರೋಗದ ಹೊರೆ ಮತ್ತು ಅದರ ಪ್ರಭಾವದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ಜೊತೆಗೆ ಪ್ರಾಣ ಉಳಿಸಲು ಅವಶ್ಯಕವಾಗಿರುವ ಆರಂಭಿಕ ಪತ್ತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ಸತ್ಯ ಮತ್ತು ವಾಸ್ತವತೆಗಳು: ಭಾರತದಲ್ಲಿ ಕ್ಯಾನ್ಸರ್ 'ಸುನಾಮಿ' ಆಗಿ ಮಾರ್ಪಟ್ಟಿದೆ. ಪ್ರತಿ ವರ್ಷ 14 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ ಮತ್ತು 8.50 ಲಕ್ಷಕ್ಕೂ ಅಧಿಕ ಸಾವುಗಳು ಸಂಭವಿಸುತ್ತಿವೆ. ಇದು ಸಾರ್ವಜನಿಕ ಆರೋಗ್ಯ ಕಳವಳಕ್ಕೆ ಕಾರಣವಾಗಿದೆ. ಕ್ಯಾನ್ಸರ್‌ನ ನೈಜ ಪ್ರಕರಣಗಳು ವರದಿಯಾದ ಪ್ರಕರಣಗಳಿಂತ 1.5ರಿಂದ 3 ಪಟ್ಟು ಹೆಚ್ಚಾಗಿವೆ. 2040ರ ವೇಳೆಗೆ ಈ ಅಂಕಿ-ಅಂಶಗಳು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿ (GLOBOCAN) ಎಂಬ ವೇದಿಕೆ ಅಂದಾಜಿಸಿದೆ.
2020ರ ಡಬ್ಲ್ಯುಎಚ್‌ಒ ಕ್ಯಾನ್ಸರ್ ಹೊರೆಯ ಶ್ರೇಯಾಂಕದ ಪ್ರಕಾರ, ಹೊಸ ವಾರ್ಷಿಕ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿರುವ ವಿಷಯದಲ್ಲಿ ಕ್ರಮವಾಗಿ ಚೀನಾ ಮತ್ತು ಅಮೆರಿಕದ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ. 9 ಭಾರತೀಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಹೊಂದುತ್ತಿದ್ದಾರೆ. 15 ಜನರಲ್ಲಿ ಒಬ್ಬರು ಸಾಯುತ್ತಾರೆ ಎಂದು ಡಬ್ಲ್ಯುಎಚ್‌ಒ ಅಂಕಿ - ಅಂಶಗಳು ಬಹಿರಂಗಪಡಿವೆ. ಇನ್ನೂ ಹೆಚ್ಚಿನ ಆತಂಕಕಾರಿ ಸಂಗತಿಯೆಂದರೆ, ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಕ್ಯಾನ್ಸರ್‌ನ ಪ್ರಮಾಣವು ಗಣನೀಯವಾಗಿ ವೇಗವಾಗಿ ಹೆಚ್ಚುತ್ತಿದೆ.
ಭಾರತದ ಕ್ಯಾನ್ಸರ್ ಪ್ರಮಾಣವು ಶೇ.6.8ರಷ್ಟು (2015ರಿಂದ 2020ರವರೆಗೆ) (ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (Compound Annual Growth Rate -CAGR) ಬೆಳದಿದೆ ಎಂದು ಅಂದಾಜಿಸಲಾಗಿದೆ. ಇದು ಚೀನಾ (ಶೇ.1.3ರಷ್ಟು), ಬ್ರೆಜಿಲ್ (ಶೇ.4.5) ಮತ್ತು ಇಂಡೋನೇಷ್ಯಾ (ಶೇ.4.8), ಬ್ರಿಟನ್ (ಶೇ.4.4)ನಂತಹ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಭಾರತದಲ್ಲಿ ವರದಿಯಾದ ಶೇ.50 ಪ್ರಕರಣಗಳು, ಪ್ರಮುಖ ಮೂರು ಅಂಗಗಳೆಂದರೆ ತಲೆ ಮತ್ತು ಕುತ್ತಿಗೆ, ಸ್ತನ ಮತ್ತು ಜಠರ ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿವೆ. ಭಾರತದಲ್ಲಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದ್ದರೆ, ಸ್ತನ ಕ್ಯಾನ್ಸರ್ ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಕ್ಯಾನ್ಸರ್ ಆಗಿದೆ. ರೋಗದ ಅರಿವಿನ ಕೊರತೆ, ರಾಷ್ಟ್ರವ್ಯಾಪಿ ದೃಢವಾದ ತಾಪಸಣೆ ಕಾರ್ಯಕ್ರಮದ ಇರದೇ ಇರುವುದು, ಅಸಮರ್ಪಕ ಆರೋಗ್ಯ ಸಿಬ್ಬಂದಿ, ಮೂಲಸೌಕರ್ಯ ಸೀಮಿತ ಕೈಗೆಟುಕುವಿಕೆ ಮತ್ತು ಅತ್ಯಂತ ಮುಖ್ಯವಾಗಿ ಅಸಮಾನತೆ ಮತ್ತು ಆರೈಕೆ ಸಾಧವಾಗದೇ ಇರುವುದು. ಭಾರತದಲ್ಲಿ ಶೇ.70ಕ್ಕಿಂತ ಹೆಚ್ಚು ಕ್ಯಾನ್ಸರ್ ರೋಗಿಗಳು ಉಲ್ಭಣದ ಹಂತಗಳಲ್ಲಿದ್ದಾರೆ. ಹೆಚ್ಚಿನ ಆದಾಯದ ದೇಶಗಳೊಂದಿಗೆ ಹೋಲಿಸಿದರೆ ಗಣನೀಯವಾಗಿ ಮರಣ ಪ್ರಮಾಣ ಅಧಿಕವಾಗಿದೆ. ರೋಗ ಪತ್ತೆಯಾದ ಒಂದು ವರ್ಷದೊಳಗೆ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ.
ಪರಿಹಾರಗಳು:ಕ್ಯಾನ್ಸರ್ ತೀವ್ರವಾದ ಸಾಮಾಜಿಕ, ಆರ್ಥಿಕ, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯಾತನೆಯನ್ನು ಉಂಟುಮಾಡುತ್ತದೆ. ಇದು ವ್ಯಕ್ತಿಯ ಮೇಲೆ ಮಾತ್ರವಲ್ಲದೇ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕ್ಯಾನ್ಸರ್ ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸುವುದು, ಆರಂಭಿಕ ಪತ್ತೆಯನ್ನು ಖಚಿತಪಡಿಸುವುದು ಹಾಗೂ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುವುದು ಬಹಳ ಮುಖ್ಯ. ವಾಸ್ತವವಾಗಿ, ಕ್ಯಾನ್ಸರ್ ತಡೆಗಟ್ಟುವಿಕೆ, ಸ್ಕ್ರೀನಿಂಗ್ ಮತ್ತು ಆರಂಭಿಕ ರೋಗನಿರ್ಣಯವು ಭಾರತದಲ್ಲಿ ಕ್ಯಾನ್ಸರ್ ಹೊರೆ ತಡೆಗಟ್ಟಲು ಮತ್ತು ನಿಯಂತ್ರಿಸಲು ಅತ್ಯಂತ ವೆಚ್ಚದಾಯಕ ಮತ್ತು ಪರಿಣಾಮಕಾರಿ ಕ್ರಮಗಳಾಗಿವೆ.
ತಡೆಗಟ್ಟುವಿಕೆ: ಇತ್ತೀಚಿನ ಡಬ್ಲ್ಯುಎಚ್‌ಒ ವರದಿಯ ಪ್ರಕಾರ, ಕ್ಯಾನ್ಸರ್‌ನಲ್ಲಿ ಸುಮಾರು ಮೂರನೇ ಒಂದರಿಂದ ಒಂದೂವರೆ ಭಾಗದಷ್ಟು ಕ್ಯಾನ್ಸರ್‌ಗಳನ್ನು ತಡೆಗಟ್ಟಬಹುದಾಗಿದೆ. ಪ್ರಾಥಮಿಕ ಆರೋಗ್ಯ ಸೇವೆಗಳು ಮತ್ತು ಸೌಲಭ್ಯಗಳ ಸಕ್ರಿಯ ಒಳಗೊಳ್ಳುವಿಕೆಯೊಂದಿಗೆ ಕ್ಯಾನ್ಸರ್ ತಡೆಗಟ್ಟುವಿಕೆಯನ್ನು ಕ್ಯಾನ್ಸರ್ ಆರೈಕೆಯ ಅವಿಭಾಜ್ಯ ಅಂಗವಾಗಿ ಮಾಡಬೇಕು. ತಂಬಾಕು ಸೇವನೆ ನಿಲ್ಲಿಸುವುದು, ಆಲ್ಕೋಹಾಲ್ ಸೇವನೆ ಸೀಮಿತಗೊಳಿಸುವುದು, ಆರೋಗ್ಯಕರ ಆಹಾರಕ್ರಮವನ್ನು ನಿರ್ವಹಿಸುವುದು, ಹೆಚ್ಚಿನ ದೈಹಿಕ ಚಟುವಟಿಕೆ, ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬಹುದು ಮತ್ತು ಎಚ್ಪಿವಿ ಲಸಿಕೆಯು ರೋಗ ತಡೆಯುವ ಪ್ರಾಥಮಿಕ ಕ್ರಮಗಳಿವೆ. 2018ರಲ್ಲಿ ಭಾರತ ಸರ್ಕಾರವು ಪ್ರಾರಂಭಿಸಿದ ಆಯುಷ್ಮಾನ್ ಭಾರತ್ ಕಾರ್ಯಕ್ರಮವನ್ನು ಈ ಪ್ರಯತ್ನಕ್ಕೆ ಬಳಸಿಕೊಳ್ಳಬೇಕು.
ಅರಿವು: ಹೆಚ್ಚಿನ ಪ್ರಾಣಗಳ ಉಳಿಸಲು ಪ್ರಮುಖವಾದ ಆರಂಭಿಕ ಪತ್ತೆಯನ್ನು ಖಚಿತಪಡಿಸಿಕೊಳ್ಳಲು ಜಾಗೃತಿ ಮೂಡಿಸುವುದು ಮತ್ತು ಜನರನ್ನು ಸಬಲೀಕರಣಗೊಳಿಸುವುದು ಅವಶ್ಯ. ಉದಾಹರಣೆಗೆ, 2007ರಲ್ಲಿ ಉಷಾಲಕ್ಷ್ಮೀ ಸ್ತನ ಕ್ಯಾನ್ಸರ್ ಫೌಂಡೇಶನ್‌ನಿಂದ ಪ್ರಾರಂಭವಾದ ಪಿಂಕ್ ರಿಬ್ಬನ್ ಅಭಿಯಾನವು ತೆಲುಗು ರಾಜ್ಯಗಳಲ್ಲಿ ಆರಂಭಿಕ ಪತ್ತೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಅಗತ್ಯವಿರುವ ಜಾಗೃತಿ ಮೂಡಿಸಿತು. ಹಲವಾರು ನವೀನ ಉಪಕ್ರಮಗಳ ಸ್ತನ ಕ್ಯಾನ್ಸರ್ ಅನ್ನು ಯಶಸ್ವಿಯಾಗಿ ಪರಿಹರಿಸಿದೆ. ಈ ಪ್ರದೇಶದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಸಂಖ್ಯೆಯು ವಾರ್ಷಿಕ ಸ್ತನದ ಎಕ್ಸ್-ರೇಗೆ ತಮ್ಮನ್ನು ತಾವು ಒಳಗೊಳ್ಳುವ ಮೂಲಕ ಮನಸ್ಥಿತಿಗೆ ಪರಿವರ್ತನೆಗೆ ಕಾರಣವಾಗಿದೆ.
ಸರ್ಕಾರವು ಸಿಗರೇಟ್ ಮತ್ತು ತಂಬಾಕು ಆಧಾರಿತ ಉತ್ಪನ್ನಗಳಿಗೆ ನೇರ ಜಾಹೀರಾತುಗಳನ್ನು ನಿಷೇಧಿಸಿದ್ದರೂ, ಪರ್ಯಾಯ ಜಾಹೀರಾತುಗಳು ಇನ್ನೂ ವ್ಯಾಪಕವಾಗಿ ಪ್ರಚಲಿತದಲ್ಲಿವೆ. ಹಲವಾರು ಸೆಲೆಬ್ರಿಟಿಗಳು ಮೌತ್ ಫ್ರೆಶನರ್‌ಗಳು, ಏಲಕ್ಕಿ ಮತ್ತು ಪಾನ್ ಮಸಾಲಾ ಬ್ರಾಂಡ್‌ಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಗಟ್ಟಿಯಾಗಿ ಅನುಷ್ಠಾನಗೊಳಿಸಬಹುದಾದ ಶಾಸನದ ಮೂಲಕ ಈ ಪರ್ಯಾಯ ಜಾಹೀರಾತುಗಳನ್ನೂ ನಿಗ್ರಹಿಸುವ ತುರ್ತು ಅಗತ್ಯವಿದೆ.