ಕರ್ನಾಟಕ

karnataka

ETV Bharat / lifestyle

ಡೇಟಿಂಗ್​ ಮಾಡೋರಿಗಿಂತ ಮಾಡ್ದೇ ಇರೋರೇ ಕಮ್ಮಿ ಖಿನ್ನತೆ ಹೊಂದಿರ್ತಾರಂತೆ - ಹದಿಹರೆಯ

ಡೇಟಿಂಗ್ ಮಾಡದ ಹದಿಹರೆಯದವರು ಕಡಿಮೆ ಖಿನ್ನತೆ ಹೊಂದಿರುತ್ತಾರೆ ಮತ್ತು ಅವರ ಡೇಟಿಂಗ್ ಗೆಳೆಯರಿಗಿಂತ ವಿಭಿನ್ನ ಮತ್ತು ಆರೋಗ್ಯಕರ ಬೆಳವಣಿಗೆಯ ಪಥವನ್ನು ಅನುಸರಿಸುತ್ತಿದ್ದಾರೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಇದಲ್ಲದೆ ಅವರೂ ಕೂಡಾ ಸಮಾಜಮುಖಿಯಾಗಿ ಮಾನಸಿಕವಾಗಿ ಆರೋಗ್ಯವಾಗಿರುತ್ತಾರಂತೆ.

Non-dating teens are less depressed

By

Published : Sep 9, 2019, 12:50 PM IST

ವಾಷಿಂಗ್ಟನ್​ ​​(ಯುಎಸ್​ಎ):ಡೇಟಿಂಗ್,​ ಹದಿಹರೆಯರ ಮತ್ತು ಯುವಕರ ಸಾಮಾನ್ಯ ಹವ್ಯಾಸ. ಜಾಸ್ತಿ ಡೇಟಿಂಗ್​ ಮಾಡ್ತಾ ಇದ್ರೆ ಜನರೊಡನೆ ಹೆಚ್ಚು ಬೆರೆಯುತ್ತೇವೆ ಅನ್ನೋದು ಸಾಮಾನ್ಯ ಅಭಿಪ್ರಾಯ. ಆದ್ರೆ ಡೇಟಿಂಗ್​ ಮಾಡದ ಹದಿಹರೆಯದವರು ಕೂಡಾ ಡೇಟಿಂಗ್​ ಮಾಡೋರಿಗಿಂತ ಹೆಚ್ಚು ಆರೋಗ್ಯವಂತರಾಗಿ, ಸಾಮಾನ್ಯವಾಗಿಯೇ ಇರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

ಜರ್ನಲ್​ ಆಫ್​ ಸ್ಕೂಲ್​ ಹೆಲ್ತ್​ನಲ್ಲಿ ಈ ಅಧ್ಯಯನದ ಮಾಹಿತಿ ಪ್ರಕಟಗೊಂಡಿದೆ. 15 ರಿಂದ 17ರೊಳಗಿನ ಮಧ್ಯಮ ವಯಸ್ಸಿನ ಹದಿಹರೆಯರು ಸಾಮಾನ್ಯವಾಗಿ ಕೆಲ ರೊಮ್ಯಾಂಟಿಕ್​ ಅನುಭವಗಳನ್ನು ಪಡೆದಿರುತ್ತಾರೆ ಎಂದು ಪ್ರಮುಖ ಲೇಖಕ ಹಾಗೂ ಜಾರ್ಜಿಯಾ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಕಾಲೇಜಿನಲ್ಲಿ ಆರೋಗ್ಯ ಪ್ರಚಾರದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಬ್ರೂಕ್ ಡೌಗ್ಲಾಸ್ ಹೇಳಿದ್ದಾರೆ.

ಹದಿಹರೆಯದ ವಯಸ್ಸಿನಲ್ಲಿ ಡೇಟಿಂಗ್​ ಮಾಡೋದು ಸಾಮಾನ್ಯ ನಡವಳಿಕೆ. ಬ್ರೂಕ್ ಡೌಗ್ಲಾಸ್ ಹೇಳುವ ಪ್ರಕಾರ, ರೊಮ್ಯಾಂಟಿಕ್​ ರಿಲೇಷನ್​ಶಿಪ್​ ಹೊಂದಿರುವ ಹದಿಹರೆಯರು ಅವರ ಮಾನಸಿಕ ಬೆಳವಣಿಗೆಯಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರಂತೆ.

ಈ ಸಮಯದಲ್ಲಿ ರೊಮ್ಯಾಂಟಿಕ್​ ರಿಲೇಶನ್​ಶಿಪ್​ನಲ್ಲಿ ಇಲ್ಲದ ಅಥವಾ ಡೇಟಿಂಗ್​ ಮಾಡದ ಹದಿಹರೆಯದವರು ಉತ್ತಮ ಸಾಮಾಜಿಕ ಕೌಶಲ್ಯ ಮತ್ತು ಕಡಿಮೆ ಖಿನ್ನತೆಯನ್ನು ಹೊಂದಿರುತ್ತಾರೆ. ಅಂತೆಯೇ ಡೇಟಿಂಗ್​ ಮಾಡಿದ ಹದಿಹರೆಯರಿಗೆ ಸಮಾನರಾಗಿರುತ್ತಾರೆ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ.

ಡೇಟಿಂಗ್ ಮಾಡದ ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರ ಡೇಟಿಂಗ್ ಗೆಳೆಯರಿಗಿಂತ ವಿಭಿನ್ನ ಮತ್ತು ಆರೋಗ್ಯಕರ ಬೆಳವಣಿಗೆಯ ಪಥವನ್ನು ಅನುಸರಿಸುತ್ತಿದ್ದಾರೆ ಅನ್ನೋದು ಅಧ್ಯಯನದಿಂದ ಕಂಡುಕೊಂಡ ಅಂಶ ಎಂದು ಸಂಶೋಧಕರು ಹೇಳಿದ್ದಾರೆ.

ABOUT THE AUTHOR

...view details