ಟ್ರೆಂಡ್‌ಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ, ಕೆಲವೆಲ್ಲ ಸ್ವಲ್ಪೇ ಸ್ವಲ್ಪ ಸಮಯದವರೆಗೆ ಇರುತ್ತವೆ. ಉದಾಹರಣೆಗೆ ವರ್ಕ್ ಫ್ರಮ್ ಹೋಮ್ ಲುಕ್. ಕ್ಯಾಶುಯಲ್ ಧರಿಸುವುದನ್ನು ಮರೆತು ಬಿಡಿ ಮತ್ತು ಆನ್‌ಲೈನ್ ಸಭೆಗಳು ಮತ್ತು ಕರೆಗಳಿಗೆ ಆರಾಮದಾಯಕ ಮತ್ತು ಸೂಕ್ತವಾದ ಕೆಲವು ಹೊಸ ಶೈಲಿಗಳನ್ನು ಪ್ರಯತ್ನಿಸಿ ನೋಡಿ.
ಸ್ಟೈಲ್‌ನಲ್ಲಿರುವುದು ಯಾವಾಗಲೂ ಉತ್ತಮವಾಗಿರುತ್ತದೆ. ಅದು ಕಚೇರಿಯಲ್ಲಿರಲಿ ಅಥವಾ ಮನೆಯಲ್ಲಿಯೇ ಇರಲಿ. ಫ್ಯಾಶನ್ ಇ-ಕಾಮರ್ಸ್ ಕಂಪನಿಯೊಂದು ಮನೆಯಿಂದ ಕೆಲಸ ಮಾಡಲು ಕೆಲವು ಹೊಸ ಶೈಲಿಯ ಸಲಹೆಯನ್ನು ನೀಡುತ್ತಿದೆ.
ಕಪ್ಪು ಮತ್ತು ಬಿಳಿ ಬಣ್ಣದ ಟಾಪ್ ಧರಿಸಿ:
ಕಪ್ಪು ಮತ್ತು ಬಿಳಿ ಬಣ್ಣದ ಸಂಯೋಜನೆ ಎಂದಿಗೂ ಹೊಸ ಶೈಲಿಯಿಂದ ಹೊರಬರುವುದಿಲ್ಲ. ಕಪ್ಪು ಟ್ರೌಸರ್ ಅಥವಾ ಸ್ಕರ್ಟ್‌ನೊಂದಿಗೆ ಸೇರಿಕೊಂಡಿರುವ ಕಪ್ಪು ಮತ್ತು ಬಿಳಿ ಶರ್ಟ್ ಧರಿಸಿದರೆ ನೀವು ಕಚೇರಿಯ ಅಥವಾ ಮನೆಯಲ್ಲಿಯೇ ಇರಲಿ ಕುರ್ಚಿಯಲ್ಲಿ ಕುಳಿತಾಗ ಪರಿಪೂರ್ಣ ಆರಾಮದಾಯಕ ವಾತಾವರಣ ಸೃಷ್ಟಿಸುವಂತೆ ಮಾಡುತ್ತೆ.
ಆಲಿವ್ ಗ್ರೀನ್:
ನಿಮ್ಮ ವೃತ್ತಿಪರ ಮತ್ತು ಟ್ರೆಂಡಿ ಭಾಗವನ್ನು ಪ್ರದರ್ಶಿಸಲು ಆಲಿವ್ - ಹಸಿರು ಬಣ್ಣದ ಉಡುಗೆ ಸೂಕ್ತ. ಜೂಮ್ ಮೀಟಿಂಗ್‌ನಲ್ಲಿ ಅಥವಾ ನಿಮ್ಮ ಕ್ಲೈಂಟ್‌ನೊಂದಿಗೆ ವರ್ಚುಯಲ್ ಚಾಟ್ ಮಾಡುವಾಗ, ಸಾರ್ವಕಾಲಿಕ ನೆಚ್ಚಿನ ಆಲಿವ್ ಬಣ್ಣ ಆಕರ್ಷಕವಾಗಿ ಕಾಣುತ್ತದೆ.