ಕರ್ನಾಟಕ

karnataka

ETV Bharat / lifestyle

ಸದೃಢ ಭುಜಗಳಿಗಾಗಿ ನಿಯಮಿತ ವ್ಯಾಯಾಮ ಅಗತ್ಯ - ಭುಜಗಳನ್ನು ಬಲವಾಗಿಡಲು ನಿಯಮಿತ ವ್ಯಾಯಾಮ

ಭುಜಗಳ ಸ್ನಾಯುಗಳಲ್ಲಿನ ದೌರ್ಬಲ್ಯ ಅಥವಾ ಸಮಸ್ಯೆಗಳು ದೇಹದಾದ್ಯಂತ ನೋವು ಮತ್ತು ಅಸ್ವಸ್ಥತೆ ಉಂಟುಮಾಡಬಹುದು. ಆದ್ದರಿಂದ, ಭುಜಗಳನ್ನು ಬಲವಾಗಿಡಲು ನಿಯಮಿತ ವ್ಯಾಯಾಮ ಮಾಡಬೇಕಾದುದು ಬಹಳ ಮುಖ್ಯ. ಇದಕ್ಕಾಗಿ ನೀವು ಕೆಲವು ವ್ಯಾಯಾಮಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ.

Exercises to make shoulders strong
ಸದೃಢ ಭುಜಗಳಿಗಾಗಿ ನಿಯಮಿತ ವ್ಯಾಯಾಮ ಅಗತ್ಯ

By

Published : Feb 18, 2022, 3:58 PM IST

ಸದೃಢ ಮತ್ತು ಉತ್ತಮ ಆಕಾರದ ಭುಜಗಳು ಆಕರ್ಷಕವಾಗಿ ಕಾಣುವುದಲ್ಲದೆ, ದೇಹವನ್ನು ಅನೇಕ ರೀತಿಯ ನೋವು ಮತ್ತು ಸಮಸ್ಯೆಗಳಿಂದ ದೂರವಿಡುತ್ತವೆ. ಮಹಿಳೆ ಅಥವಾ ಪುರುಷರಾಗಲಿ ಅವರ ಭುಜಗಳು ಬಲವಾಗಿರಬೇಕು. ಇಲ್ಲದಿದ್ದರೇ ಸ್ನಾಯು ದೌರ್ಬಲ್ಯದಿಂದ ಬಹಳ ಬೇಗನೆ ಸಡಿಲವಾಗಿ ಅಥವಾ ನೇತಾಡುತ್ತಿದ್ದರೆ, ಅವರ ದೈಹಿಕ ನೋಟವು ವಿಚಿತ್ರವಾಗಿ ಕಾಣುತ್ತದೆ.

ದೇಹದ ಎಲ್ಲ ಸ್ನಾಯುಗಳನ್ನು ಆರೋಗ್ಯವಾಗಿಡಲು ಉತ್ತಮ ಮತ್ತು ಪೌಷ್ಟಿಕ ಆಹಾರದ ಜೊತೆಗೆ ನಿಯಮಿತ ವ್ಯಾಯಾಮವೂ ಅಗತ್ಯವಾಗಿದೆ.

ಇಂದೋರ್‌ನ ಫಿಟ್‌ನೆಸ್ ತರಬೇತುದಾರ ಮತ್ತು ದೇಹದಾರ್ಢ್ಯ ಪಟು ಜೊರಾವರ್ ಸಿಂಗ್ ಹೇಳುವ ಪ್ರಕಾರ, ಸಾಮಾನ್ಯವಾಗಿ ಕ್ರೀಡಾಪಟುಗಳು, ಮಾಡೆಲಿಂಗ್ ಮತ್ತು ಬಾಡಿ ಬಿಲ್ಡಿಂಗ್‌ ಮಾಡುವವರು ಅಥವಾ ನಿಯಮಿತವಾಗಿ ಜಿಮ್‌ಗೆ ಹೋಗುವವರು ತಮ್ಮ ದೈಹಿಕ ನೋಟವನ್ನು ಮತ್ತು ಭುಜಗಳ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ.

ಆದರೆ, ಭುಜಗಳ ಬಲವು ಪ್ರತಿಯೊಬ್ಬ ಮಹಿಳೆ ಮತ್ತು ಪುರುಷರಿಗೆ ಅವಶ್ಯಕವಾಗಿದೆ. ಏಕೆಂದರೆ ಇವುಗಳಲ್ಲಿ ಸಮಸ್ಯೆಯುಂಟಾದರೇ ಅದರ ಪರಿಣಾಮ ಇಡೀ ದೇಹದ ಮೇಲೆ ಆಗುತ್ತದೆ. ವ್ಯಾಯಾಮದ ಜೊತೆಗೆ ನಮ್ಮ ದೇಹದ ಭಂಗಿಯೂ ಸರಿಯಾಗಿರುವುದು ಬಹಳ ಮುಖ್ಯ ಎಂಬುದು ಅವರ ಅಭಿಪ್ರಾಯವಾಗಿದೆ.

ಭುಜಗಳಿಗೆ ವ್ಯಾಯಾಮ:

ಲೋ ಬ್ಯಾಕ್ ಹ್ಯಾಂಡ್ ಕ್ಲಾಸ್ಪ್: ಇದನ್ನು ಮಾಡಲು ಮೊದಲು ನಿಮ್ಮ ಕೈಗಳನ್ನು ನಿಮ್ಮ ಬೆನ್ನಿನ ಹಿಂದೆ ಇರಿಸಿ. ಈಗ ಅಂಗೈ ಮತ್ತು ಬೆರಳುಗಳನ್ನು ಒಟ್ಟಿಗೆ ಸೇರಿಸಿ. ಕೈಗಳನ್ನು ಬೆನ್ನಿನ ಕೆಳಭಾಗಕ್ಕೆ ಜೋಡಿಸಿ ಮತ್ತು ಎರಡೂ ಕೈಗಳ ಬೆರಳುಗಳು ಹೆಣೆಯುವುದನ್ನು ಮರೆಯಬೇಡಿ. ಈಗ ಈ ಸ್ಥಾನದಲ್ಲಿ ಭುಜವನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸಿ. ಕನಿಷ್ಠ 10 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಲು ಪ್ರಯತ್ನಿಸಿ.

ಭುಜಗಳನ್ನು ತಿರುಗಿಸಿ: ಈ ವ್ಯಾಯಾಮವನ್ನು ನಿಂತುಕೊಂಡು ಮತ್ತು ಕುಳಿತುಕೊಂಡೂ ಮಾಡಬಹುದಾಗಿದೆ. ಇದನ್ನು ಮಾಡಲು, ಬೆನ್ನುಮೂಳೆಯನ್ನು ನೇರವಾಗಿ ಇಟ್ಟುಕೊಂಡು ನಿಂತುಕೊಳ್ಳಿ ಅಥವಾ ಕುಳಿತುಕೊಳ್ಳಿ. ಈಗ ನಿಮ್ಮ ಭುಜಗಳನ್ನು ಮೇಲಿನಿಂದ ಹಿಂದಕ್ಕೆ ಚಲಿಸುವಾಗ, ಕೆಳಗಿನಿಂದ ವೃತ್ತಾಕಾರದ ಚಲನೆಯಲ್ಲಿ ತಿರುಗಿಸಿ.

ಈ ಪ್ರಕ್ರಿಯೆಯನ್ನು 10 ಬಾರಿ ಮಾಡಿ. ಈಗ ನಿಮ್ಮ ಭುಜಗಳನ್ನು ಹಿಂದಿನಿಂದ ಮುಂದಕ್ಕೆ ಚಲಿಸುವಾಗ ವ್ಯಾಯಾಮವನ್ನು ಪುನರಾವರ್ತಿಸಿ. ಈ ಪ್ರಕ್ರಿಯೆಯನ್ನು ಸಹ 10 ಬಾರಿ ಪುನರಾವರ್ತಿಸಿ.

ಬ್ಯಾಂಡ್ ಪುಲ್ ವ್ಯಾಯಾಮ: ಮೊದಲನೆಯದಾಗಿ, ನೇರವಾದ ಮತ್ತು ಆರಾಮದಾಯಕವಾದ ಭಂಗಿಯಲ್ಲಿ ನಿಂತುಕೊಂಡು ಕೈಗಳನ್ನು ನಿಖರವಾಗಿ ಭುಜಗಳ ಮುಂದಿನ ದಿಕ್ಕಿನಲ್ಲಿ ಇರಿಸಿ. ಈಗ ನಿಮ್ಮ ಕೈಯಲ್ಲಿ ದೊಡ್ಡ ಮತ್ತು ಬಲವಾದ ಬ್ಯಾಂಡ್ ತೆಗೆದುಕೊಳ್ಳಿ.

ಎರಡೂ ಕೈಗಳಲ್ಲಿ ಬ್ಯಾಂಡ್​ನನ್ನು ಹಿಡಿದಿಟ್ಟುಕೊಳ್ಳುವಾಗ, ಅದನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯಲು ಪ್ರಯತ್ನಿಸಿ. ಸುಮಾರು 10 ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿ ಉಳಿಯಲು ಪ್ರಯತ್ನಿಸಿ. ವ್ಯಾಯಾಮ ಮಾಡುವಾಗ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಿ ಏಕೆಂದರೆ ಹಾಗೆ ಮಾಡದಿದ್ದರೆ ರಬ್ಬರ್ ಬ್ಯಾಂಡ್‌ಗಳಿಂದ ಕೈ ಅಥವಾ ಮುಖಕ್ಕೆ ಗಾಯವಾಗಬಹುದು.

ಭಾರವಾದ ವಸ್ತುಗಳನ್ನು ಎತ್ತಿ:ಈ ವ್ಯಾಯಾಮದಲ್ಲಿ ಮೊದಲನೆಯದಾಗಿ ಎದ್ದುನಿಂತು ಆಳವಾದ ಉಸಿರು ತೆಗೆದುಕೊಳ್ಳಿ. ಈಗ ಡಂಬ್ಬೆಲ್ಸ್ ಅಥವಾ 5 ಕೆಜಿ ತೂಕದ ವಸ್ತುವನ್ನು ಎರಡೂ ಕೈಗಳಿಂದ ಮೇಲಕ್ಕೆತ್ತಿ.

ನಿಮ್ಮ ಮೊಣಕೈಗಳನ್ನು ಬಗ್ಗಿಸುವಾಗ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುವಾಗ, ನಿಮ್ಮ ಭುಜದ ಕಡೆಗೆ ಕೈಗಳನ್ನು ಸರಿಸಿ. ಈ ಸಮಯದಲ್ಲಿ ಮೊಣಕೈ ಮೇಲಿರುವ ನಿಮ್ಮ ಕೈಯ ಭಾಗವು ನಿಮ್ಮ ಎದೆಯ ಹತ್ತಿರ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಈಗ ಉಸಿರನ್ನು ಬಿಡುತ್ತಾ ಕೈಗಳನ್ನು ಮತ್ತೆ ಕೆಳಕ್ಕೆ ತನ್ನಿ. ಈ ವ್ಯಾಯಾಮವನ್ನು ಒಂದು ಸಮಯದಲ್ಲಿ 15 ಸೆಟ್​​ಗಳಲ್ಲಿ ಮಾಡಿ.

ಇದನ್ನೂ ಓದಿ:ಚಳಿಗಾಲದಲ್ಲಿ ಹೃದಯದ ಸಮಸ್ಯೆ ಉಲ್ಬಣ: ಸಂಶೋಧಕರ ಎಚ್ಚರಿಕೆ

ನೀವು ಯಾವುದೇ ರೀತಿಯ ವ್ಯಾಯಾಮವನ್ನು ಮಾಡಿದ್ರೂ, ಅದು ನಿಸ್ಸಂದೇಹವಾಗಿ ನಿಮ್ಮ ದೇಹವನ್ನು ಬಲಪಡಿಸುತ್ತದೆ ಮತ್ತು ನೋವು ಸಂಭವಿಸುವುದನ್ನು ಹಾಗೂ ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ಜೋರಾವರ್ ಸಿಂಗ್ ಹೇಳುತ್ತಾರೆ.

ಆದರೆ, ನೋವಿನ ಚಿಕಿತ್ಸೆಗಾಗಿ ವ್ಯಾಯಾಮವನ್ನು ಅಭ್ಯಾಸ ಮಾಡುವುದು ಸಂಪೂರ್ಣ ಚಿಕಿತ್ಸೆ ಅಲ್ಲ. ಭುಜಗಳನ್ನು ನೀವು ಬಿಗಿತ, ನೋವು ಅಥವಾ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ABOUT THE AUTHOR

...view details