ಸಾಮಾನ್ಯವಾಗಿ ಮಹಿಳೆಯರು ಸ್ತನಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಾರೆ. ಇದಕ್ಕೆ ಕಾರಣ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಆದರೆ, ಇತ್ತೀಚಿಗೆ ಮಗುವಿಗೆ ಜನ್ಮ ನೀಡಿರುವ ಮತ್ತು ಹಾಲುಣಿಸುವ ಮಹಿಳೆಯರಲ್ಲಿ ಸ್ತನಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚು ಕಂಡು ಬರುತ್ತವೆ. ಅದರಲ್ಲಿ ಮುಖ್ಯವಾಗಿ ಬಿರುಕು ಸ್ತನ, ಗಟ್ಟಿ ಸ್ತನ, ನೋವು ಹಾಗೂ ಆ ಜಾಗದಲ್ಲಿ ಅಲರ್ಜಿ ಉಂಟಾಗುವ ಸಮಸ್ಯೆ ಎದುರಿಸುತ್ತಾರೆ.
ಆದರೆ, ವೈದ್ಯಲೋಕದಲ್ಲಿ ಇದೆಲ್ಲದಕ್ಕೂ ಸೂಕ್ತ ಚಿಕಿತ್ಸೆಗಳಿವೆ. ಉತ್ತರಾಖಂಡ್ನ ಡೆಹ್ರಾಡೂನ್ ಹಿರಿಯ ಮಕ್ಕಳ ತಜ್ಞೆ ಡಾ.ಲತಿಕಾ ಜೋಶಿ ವಿವರಿಸಿದಂತೆ, ಹಾಲುಣಿಸುವ ತಾಯಂದಿರಿಗೆ ಈ ಸ್ಥಿತಿಯು ಖಂಡಿತವಾಗಿಯೂ ಹೆಚ್ಚು ನೋವುಂಟು ಮಾಡುತ್ತದೆ. ಆದರೆ, ಈ ಸ್ಥಿತಿಗೆ ಬೇರೆ ಕೆಲವು ಕಾರಣಗಳೂ ಇರಬಹುದು ಎನ್ನುತ್ತಾರೆ.
ಸ್ತನ ಜಾಗದಲ್ಲಿ ಚರ್ಮ ಸಮಸ್ಯೆಗೆ ಕಾರಣಗಳು
- ಸ್ತನಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು
- ಮಗುವಿಗೆ ತಪ್ಪಾಗಿ ಮತ್ತು ತಪ್ಪಾದ ಭಂಗಿಯಲ್ಲಿ ಸ್ತನ್ಯಪಾನ ಮಾಡುವುದು ಅಥವಾ ಸ್ತನ್ಯಪಾನ ಮಾಡುವಾಗ ಮಗು ತಾಯಿಯ ಮೊಲೆತೊಟ್ಟುಗಳನ್ನು ಕಚ್ಚುವುದು
- ರಾಸಾಯನಿಕಯುಕ್ತ ಸೋಪ್ಗಳ ಅತಿಯಾದ ಬಳಕೆ
- ಈಗಾಗಲೇ ಚರ್ಮ ಸಂಬಂಧಿ ರೋಗ ಹೊಂದಿದ್ದರೆ
- ಹೆಚ್ಚಿನ ಒತ್ತಡ
- ಜೀರ್ಣಕಾರಿ ಸಮಸ್ಯೆಗಳು ಮತ್ತು ದೇಹದಲ್ಲಿ ಪೋಷಕಾಂಶಗಳ ಕೊರತೆ
- ಗರ್ಭನಿರೋಧಕಗಳ ದೀರ್ಘಕಾಲೀನ ಬಳಕೆ
ಒಣ ಮತ್ತು ಒಡೆದ ಸ್ತನತೊಟ್ಟು ಸಮಸ್ಯೆಗೆ ಮನೆ ಮದ್ದು
ಸಾಮಾನ್ಯವಾಗಿ ಹಾಲುಣಿಸುವ ತಾಯಂದಿರಲ್ಲಿ ಈ ಸಮಸ್ಯೆ ಕಂಡುಬರುವುದರಿಂದ, ವೈದ್ಯರು ಹಾಲುಣಿಸುವ ಸಮಯದಲ್ಲಿ ಮಗುವಿಗೆ ಹಾನಿಯಾಗದಂತೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಾಮಾನ್ಯ ಮನೆಮದ್ದುಗಳನ್ನು ಆಯ್ಕೆ ಮಾಡಲು ಶಿಫಾರಸು ಮಾಡುತ್ತಾರೆ ಎಂದು ಡಾ. ಲತಿಕಾ ಜೋಶಿ ಹೇಳುತ್ತಾರೆ. ಸಾಧಾರಣವಾಗಿ ಮನೆ ಮದ್ದುಗಳಿಗೆ ಆದ್ಯತೆ ನೀಡಲಾಗುತ್ತದೆ, ಏಕೆಂದರೆ ಅವುಗಳು ಸಾಮಾನ್ಯವಾಗಿ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.
ತುಪ್ಪ
ಚರ್ಮ ಸಂಬಂಧಿ ಸಮಸ್ಯೆಗಳಿಗೆ ಶುದ್ಧ ತುಪ್ಪ ಬಳಸಲು ಆಯುರ್ವೇದವು ಶಿಫಾರಸು ಮಾಡುತ್ತದೆ, ಏಕೆಂದರೆ ಇದು ತ್ವಚೆಯ ತೇವಾಂಶ ಉಳಿಸಿಕೊಳ್ಳುವಲ್ಲಿ ತಕ್ಷಣವೇ ಕೆಲಸ ಮಾಡುತ್ತದೆ. ಹೆಚ್ಚುವರಿಯಾಗಿ ಇದು ಚರ್ಮ ಶುಚಿಗೊಳಿಸುವ ಗುಣಗಳನ್ನು ಹೊಂದಿದ್ದು, ಅದು ಮೃದು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಮರ್ಥವಾಗಿದೆ.