ಹೆಣ್ಣನ್ನು ಆಕೆಯ ಸೌಂದರ್ಯಕ್ಕಾಗಿ ಎಲ್ಲರೂ ಹೊಗಳುತ್ತಾರೆ. ಮಹಿಳೆ ಕಾಣಲು ಚೆಂದ ಇರಬಹುದು. ಆದರೂ ದೇಶದಲ್ಲಿ ತಾಯಂದಿರಾಗುವ ಅರ್ಧಕ್ಕೂ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ (ಅನೀಮಿಯಾ) ಬಳಲುತ್ತಿರುವುದು ಕಳವಳಕಾರಿಯಾಗಿದೆ. ವರ್ಲ್ಡ್ ನ್ಯೂಟ್ರಿಶಿಯಸ್ ಫುಡ್ ಸಂಸ್ಥೆಯ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅಂದರೆ ತಾಯಿಯಾಗುವಷ್ಟು ಆರೋಗ್ಯ ಹೊಂದಿರುವ ಪ್ರತಿ ನಾಲ್ಕು ಹೆಣ್ಣು ಮಕ್ಕಳಲ್ಲಿ ಓರ್ವ ಹೆಣ್ಣು ಮಗಳು ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ.
ಗರ್ಭಿಣಿಯರಲ್ಲಿ ರಕ್ತಹೀನತೆ ನಿವಾರಣೆಗೆ ಬೇಕು ಕಬ್ಬಿಣಾಂಶದ ಆಹಾರ ಪೌಷ್ಟಿಕ ಆಹಾರ ದುಬಾರಿಯಾಗಿರುವುದು, ಗರ್ಭಿಣಿಯಾಗಿರುವಾಗ ಆರೋಗ್ಯಕರ ಆಹಾರ ಸಿಗದಿರುವುದು ಮತ್ತು ಮಕ್ಕಳಿಗೆ ಸಮತೋಲಿತ ಆಹಾರದ ಕೊರತೆ ಇವು ರಕ್ತಹೀನತೆ ಉಂಟಾಗಲು ಪ್ರಮುಖ ಕಾರಣಗಳಾಗಿವೆ. ಇನ್ನು ಸಾಮಾನ್ಯ ಸಂಪೂರ್ಣ ಆರೋಗ್ಯವಂತ ಗರ್ಭಿಣಿಯರಿಗೆ ಹೋಲಿಸಿದಲ್ಲಿ ಅನೀಮಿಕ್ ಆಗಿರುವ ಗರ್ಭಿಣಿಯರಲ್ಲಿ ಶಿಶು ಮರಣ ಸಾಧ್ಯತೆಯ ಪ್ರಮಾಣ ದುಪ್ಟಟ್ಟಾಗಿರುತ್ತದೆ.
ಗರ್ಭಿಣಿಯರಲ್ಲಿ ರಕ್ತಹೀನತೆ ನಿವಾರಣೆಗೆ ಬೇಕು ಕಬ್ಬಿಣಾಂಶದ ಆಹಾರ ಇದನ್ನೂ ಓದಿ: ತಾಯಿ ಎದೆಹಾಲಿನ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ: ರಾಜ್ಯದ ಪುರುಷರು - ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ಏರಿಕೆ
ಮುಖ್ಯವಾಗಿ ಆಹಾರದಲ್ಲಿ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿಟಮಿನ್ ಎ, ಬಿ12, ಬಿ2, ಬಿ6, ಸಿ, ಡಿ, ಇ ಮತ್ತು ಫೋಲೇಟ್ ವಿಟಮಿನ್ಗಳು, ತಾಮ್ರ, ಸತುವಿನ ಅಂಶ ಮುಂತಾದುವು ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇರುವಾಗ ರಕ್ತಹೀನತೆ ಉಂಟಾಗುತ್ತದೆ. ಅಲ್ಲದೇ ತೀವ್ರವಾದ ರಕ್ತಸ್ರಾವ ಹಾಗೂ ಇನ್ನಿತರ ಕೆಲ ಕಾಯಿಲೆಗಳ ಕಾರಣದಿಂದಲೂ ಅನೀಮಿಯಾ ಬರಬಹುದು. ವಿಪರೀತ ಸುಸ್ತು, ಒಣಗಿದ ತುಟಿಗಳು, ನಿಸ್ತೇಜ ಕಣ್ಣುಗಳು, ತೀವ್ರ ಉಸಿರಾಟ ಮತ್ತು ಎದೆಬಡಿತ ಈ ರೋಗದ ಲಕ್ಷಣಗಳಾಗಿವೆ.
ಗರ್ಭಿಣಿಯರಲ್ಲಿ ರಕ್ತಹೀನತೆ ನಿವಾರಣೆಗೆ ಬೇಕು ಕಬ್ಬಿಣಾಂಶದ ಆಹಾರ ಹಸಿರು ತರಕಾರಿಗಳಾದ ಪಾಲಕ್ ಸೊಪ್ಪು, ನುಗ್ಗೇಕಾಯಿ ಸೊಪ್ಪು, ಪುಂಡಿ ಸೊಪ್ಪು ಇವನ್ನು ನಿತ್ಯ ಆಹಾರದಲ್ಲಿ ಸೇವಿಸಬೇಕು. ನೆನೆಸಿದ ಬಾದಾಮಿ, ಒಣ ದ್ರಾಕ್ಷಿ, ಖರ್ಜೂರ, ಬೀಟ್ರೂಟ್, ದಾಳಿಂಬೆಗಳ ಸೇವನೆಯಿಂದ ರಕ್ತಹೀನತೆ ನಿವಾರಿಸಬಹುದು. ಬೀಟ್ರೂಟ್ ಜ್ಯೂಸ್, ನಿತ್ಯ ಹಾಲು ಮತ್ತು ಮೊಟ್ಟೆ ಸೇವನೆ, ಎಳ್ಳು ಕಾಳು, ಬೆಲ್ಲದೊಂದಿಗೆ ಶೇಂಗಾ ಸೇವನೆ ಉತ್ತಮ. ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ಸಹ ರಕ್ತಹೀನತೆ ನಿವಾರಣೆಗೆ ಸಹಕಾರಿಯಾಗಿವೆ. ಇನ್ನು ಇವೆಲ್ಲದರ ಜೊತೆಗೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಆಹಾರದಲ್ಲಿನ ಕಬ್ಬಿಣಾಂಶವನ್ನು ರಕ್ತ ಹೀರಿಕೊಳ್ಳಬೇಕಾದರೆ ವಿಟಮಿನ್ ಸಿ ಅತ್ಯಂತ ಅಗತ್ಯವಾಗಿದೆ.