ಅಲರ್ಜಿ.. ಅಬಾಲವೃದ್ಧರಾದಿಯಾಗಿ ಎಲ್ಲರೂ ಇದರಿಂದ ಬಳಲುವವರೇ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಫುಡ್ ಅಲರ್ಜಿ ಹೆಚ್ಚಾಗಿದ್ದು, ಭಾರತದಲ್ಲಿ ಅದು ಬಹಳ ಅಪರೂಪ. ಆದರೆ, ಇದು ಅತ್ಯಂತ ವೇಗವಾಗಿ ಬದಲಾಗುತ್ತಿದ್ದು ನಾವು ಕೂಡಲೇ ಸಕ್ರಿಯರಾಗಬೇಕಿದೆ.
ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಅಲರ್ಜಿಕಾರಕ (ಅಲರ್ಜಿನ್) ಎಂದರೆ ಹಾಲು, ಮೊಟ್ಟೆ ಮತ್ತು ಕಡಲೆಕಾಯಿ. IAP ಸಮೀಕ್ಷೆಯ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 11.4 ಪ್ರತಿಶತ ಮಕ್ಕಳು ಕೆಲವು ರೀತಿಯ ಅಲರ್ಜಿಗಳಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಇದು ಹೆಚ್ಚಾಗಿರುತ್ತದೆ.
ಅಲರ್ಜಿಯ ಲಕ್ಷಣಗಳು
- ಮೂಗು ಸ್ರವಿಸುವಿಕೆ
- ಸತತ ಸೀನುವಿಕೆ
- ಕೆಮ್ಮು
- ದದ್ದು ಕಾಣಿಸಿಕೊಳ್ಳುವುದು
- ಕೆಂಪಗಾದ ಕಣ್ಣು
- ಊದಿಕೊಂಡ ನಾಲಿಗೆ
- ಅತಿಸಾರ
- ಮತ್ತು ಉಸಿರಾಟದ ತೊಂದರೆ
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಸಮಸ್ಯೆಗಳಿಂದ ಮಗು ಗಂಭೀರ ಅಸ್ವಸ್ಥತೆ ಅನುಭವಿಸುತ್ತದೆ. ಇದು ಕೆಲವೊಮ್ಮೆ ಪೋಷಕರನ್ನು ಹತಾಶರನ್ನಾಗಿ ಮಾಡುತ್ತದೆ. ಕಾಲಾನಂತರದಲ್ಲಿ ಅಲರ್ಜಿ ನಿಧಾನವಾಗಿ ಹೆಚ್ಚುತ್ತದೆ. ಅದನ್ನು ನಿಯಂತ್ರಿಸುವಲ್ಲಿ ಪೋಷಕರು ತಾಳ್ಮೆ ಮತ್ತು ಬದ್ಧತೆ ಹೊಂದಿರಬೇಕು. ಆದಾಗ್ಯೂ ಸಮಸ್ಯೆ ತಡೆಗಟ್ಟುವಿಕೆ ಮತ್ತು ಸಂಭವನೀಯ ಉಪಶಮನಕ್ಕಾಗಿ ಕೆಲವು ಮಾರ್ಗಗಳು ಹೀಗಿವೆ..
1) ಒತ್ತಡ ಬೇಡ:
ಈ ಸಮಯದಲ್ಲಿ ಒತ್ತಡ ಮುಕ್ತ ಮತ್ತು ಶಾಂತವಾಗಿರುವುದು ಬಹಳ ಮುಖ್ಯ. ಭಯ ಸೃಷ್ಟಿಸುವುದು ದುಃಖವನ್ನು ಮಾತ್ರ ಹೆಚ್ಚಿಸುತ್ತದೆ. ರೋಗಲಕ್ಷಣಗಳ ಬಗ್ಗೆ ನಮಗೆ ತಿಳಿದ ನಂತರ, ಮನೆಯಲ್ಲಿ ಪ್ರಥಮ ಚಿಕಿತ್ಸಾ ಅಲರ್ಜಿಕ್ ಕಿಟ್ ಇಟ್ಟುಕೊಳ್ಳುವುದು ಉತ್ತಮ.
2) ಸ್ವಚ್ಛತೆ ಒಳ್ಳೆಯದೇ ಆದರೆ ಗೀಳು ಒಳ್ಳೆಯದಲ್ಲ: