ವೈರಸ್ಗಳ ವಿರುದ್ಧ ಹೋರಾಡುವಲ್ಲಿ ಪ್ರತಿಕಾಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಮತ್ತು ನಮ್ಮ ಜೀವಕೋಶಗಳಿಗೆ ತಗಲುವ ಕೊರೊನಾ ವೈರಸ್ ಅನ್ನು ತಡೆಯಲು ಮುಖ್ಯವಾಗಿದೆ. ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹಾಗೂ ಪ್ರತಿಕಾಯಗಳನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತೆ.
ಕೋವಿಡ್ ರೂಪಾಂತರಿಗಳು ಸಹ ಉಲ್ಬಣಗೊಳ್ಳುತ್ತಿರುವ ಕಾರಣ ಕೆಲವು ದೇಶಗಳು ರೂಪಾಂತರಿಯ ಅಪಾಯ ಮತ್ತು ರೋಗದ ತೀವ್ರತೆ ತಪ್ಪಿಸಲು ಬೂಸ್ಟರ್ ಡೋಸ್ಗಳನ್ನು ನೀಡಲು ಆರಂಭಿಸಿವೆ. ಉದಾಹರಣೆಗೆ, ಫೈಝರ್ ವ್ಯಾಕ್ಸಿನ್ನ ಮೂರನೇ ಡೋಸ್ ಪಡೆದವರಲ್ಲಿ ರೋಗದ ತೀವ್ರತೆ ಶೇ.75ರಿಂದ ಶೇ.45ಕ್ಕೆ ಇಳಿಕೆ ಕಂಡಿದೆ. ಪ್ರತಿಕಾಯಗಳು ನಮ್ಮ ರೋಗನಿರೋಧಕ ಶಕ್ತಿ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಒಂದು ಭಾಗವಾಗಿದೆಯಷ್ಟೇ.. ಹೀಗಾಗಿ, ಟಿ-ಕೋಶಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಾಗಿದೆ.
ಏನಿದು ಟಿ ಸೆಲ್? :ಬಿಳಿ ರಕ್ತಕಣಗಳ ಒಂದು ವಿಧವಾಗಿರುವ ಟಿ ಜೀವಕೋಶಗಳು ಮೂಳೆ ಮಜ್ಜೆಯಲ್ಲಿನ ಕಾಂಡಕೋಶಗಳಿಂದ ಬೆಳವಣಿಗೆಯಾಗುತ್ತದೆ. ದೇಹವು ಸೋಂಕಿಗೆ ಒಳಗಾದಾಗ ನಮ್ಮ ಪ್ರತಿರಕ್ಷಣಾ ಕೋಶಗಳು ಲಿಂಫೋಸೈಟ್ಸ್ ಎಂಬ ಬಿಳಿ ರಕ್ತ ಕಣಗಳನ್ನು ಉತ್ಪಾದಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಇದರಲ್ಲಿ ಟಿ ಹಾಗೂ ಬಿ ಸೆಲ್ ಎಂಬ ಎರಡು ವಿಧಗಳಿವೆ.
ವೈರಸ್ ವಿರುದ್ಧ ಹೋರಾಡಲು ಇವು ಕಾರ್ಯನಿರ್ವಹಿಸುತ್ತವೆ. ಕೆಲವು ಟಿ ಹಾಗೂ ಬಿ ಜೀವಕೋಶಗಳು ದೀರ್ಘಾವಧಿಯ ಮೆಮೊರಿ ಕೋಶಗಳಾಗುತ್ತವೆ. ಅಂದರೆ ಒಂದೇ ಬಗೆಯ ಸೋಂಕನ್ನು ಮತ್ತೆ ಮತ್ತೆ ನಮ್ಮ ದೇಹ ಎದುರಿಸಿದಾಗ ಏನು ಮಾಡಬೇಕೆಂಬುದು ಅವುಗಳಿಗೆ ತಿಳಿದಿರುತ್ತದೆ.
ಪ್ರತಿಯೊಂದು ವೈರಸ್ ತನ್ನ ಒಳಗೆ ಮತ್ತು ಹೊರಗೆ ಸಾಕಷ್ಟು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಕೊರೊನಾ ವೈರಸ್ನ ಹೊಸ ರೂಪಾಂತರಿಯಾಗಿರುವ ಒಮಿಕ್ರಾನ್ ಅನೇಕ ಸಂಶೋಧಕರನ್ನು ಚಿಂತೆಗೀಡುಮಾಡಿದೆ. ಏಕೆಂದರೆ, ಅದರ ಬಾಹ್ಯ ರಚನೆಯ ಪ್ರಮುಖ ಭಾಗವು ಹೆಚ್ಚು ರೂಪಾಂತರಗೊಂಡಿದೆ.
ಅದನ್ನು ತಟಸ್ಥಗೊಳಿಸುವ ಪ್ರತಿಕಾಯಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದರೆ, ಟಿ ಜೀವಕೋಶಗಳು ವೈರಸ್ನ ಇತರ ಭಾಗಗಳ ಮೇಲೆ ಕೇಂದ್ರೀಕರಿಸುವುದರಿಂದ ಅಂತಹ ರೂಪಾಂತರಗಳು ಟಿ ಜೀವಕೋಶಗಳ ಕಾರ್ಯವನ್ನು ತಡೆಯಲಾಗುವುದಿಲ್ಲ.