ಕರ್ನಾಟಕ

karnataka

By

Published : Jan 21, 2022, 11:41 AM IST

ETV Bharat / lifestyle

ಚಿಕ್ಕ ವಯಸ್ಸಿನಲ್ಲೇ ಆರೋಗ್ಯ ವಿಮೆ ಏಕೆ ಮಾಡಿಸಬೇಕು?: ಇಲ್ಲಿದೆ ತಜ್ಞರ ಉತ್ತರ..

ಜೀವನ ಅನಿಶ್ಚಿತ. ಮುಂದೆ ಏನಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಪಾಲಿಸಿ ತೆಗೆದುಕೊಳ್ಳುವುದು ನಿಮಗೆ ಲಾಭದಾಯಕ ಎನ್ನುತ್ತಾರೆ ತಜ್ಞರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್:ವೈದ್ಯಕೀಯ ತುರ್ತು ಪರಿಸ್ಥಿತಿಗಳು ತಕ್ಷಣಕ್ಕೆ ದೊಡ್ಡ ಮೊತ್ತದ ಹಣವನ್ನು ಬಯಸಬಹುದು. ಹೆಚ್ಚುತ್ತಿರುವ ವೈದ್ಯಕೀಯ ಖರ್ಚುಗಳ ಕಾರಣದಿಂದ, ಹೆಲ್ತ್ ಇನ್ಶೂರೆನ್ಸ್ (ಆರೋಗ್ಯ ವಿಮೆ) ಹೊಂದಿರುವುದು ಹೆಚ್ಚು ಮುಖ್ಯವಾಗಿದೆ.

ಆರೋಗ್ಯ ವಿಮೆ ಪಾಲಿಸಿ ವ್ಯಕ್ತಿಗಳು ಗಂಭೀರ ಕಾಯಿಲೆಗಳಿಗೆ ಒಳಗಾದಾಗ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ. ಉತ್ತಮ ಆರೋಗ್ಯ ವಿಮೆ ವೈದ್ಯರ ಸಮಾಲೋಚನೆ ಶುಲ್ಕಗಳು, ವೈದ್ಯಕೀಯ ಪರೀಕ್ಷಾ ವೆಚ್ಚಗಳು, ಆ್ಯಂಬುಲೆನ್ಸ್ ಶುಲ್ಕಗಳು, ಆಸ್ಪತ್ರೆ ದಾಖಲಾತಿ ವೆಚ್ಚಗಳು ಮತ್ತು ಆಸ್ಪತ್ರೆ ದಾಖಲಾತಿ ಮುಂಚಿನ ಮತ್ತು ನಂತರದ ಚೇತರಿಕೆಯ ವೆಚ್ಚಗಳನ್ನು ಕೂಡಾ ಸ್ವಲ್ಪ ಮಟ್ಟಿಗೆ ಕವರ್ ಮಾಡುತ್ತದೆ.

ಕೋವಿಡ್​ನಿಂದಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮುಖ್ಯವಾಗಿ ಈ ಸೋಂಕು ಹರಡುವಿಕೆಯನ್ನು ತಪ್ಪಿಸಲು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬಹುಪಾಲು ಜನರು ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಮುಖ್ಯವೆಂದು ಪರಿಗಣಿಸುತ್ತಾರೆ. ತಜ್ಞರು ಸಾಧ್ಯವಾದಷ್ಟು ಬೇಗ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿಯಾಗಿದೆ ಎಂಬ ಸಲಹೆಗಳನ್ನು ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆರೋಗ್ಯ ವಿಮೆ ವಯಸ್ಸಾದ ವ್ಯಕ್ತಿಗಳಿಗೆ ಮಾತ್ರ ಎಂದು ಅನೇಕ ಯುವಕರು ಭಾವಿಸುತ್ತಾರೆ. ಆದರೆ, ಕೋವಿಡ್ ನಂತರ ಈ ಕಲ್ಪನೆ ಬದಲಾಗಿದೆ. ಜೀವನ ಅನಿಶ್ಚಿತವಾಗಿದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾದರೆ ಚಿಕಿತ್ಸೆಗೆ ಒಳಗಾಗಲು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಆಗ ಈ ವಿಮೆ ಮಾಡಿಸಿದ್ದರೆ ಕೆಲಸ ಸುಲಭವಾಗಲಿದೆ.

ಆದಾಗ್ಯೂ, ಇಂದಿನ ಯುವಕರು ತಮ್ಮ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಉತ್ತಮವಾಗಿದ್ದಾರೆ, ಚಿಕ್ಕ ವಯಸ್ಸಿನಲ್ಲೇ ಆರೋಗ್ಯ ವಿಮೆ ಖರೀದಿಸುವುದರಿಂದ ವೈದ್ಯಕೀಯ ತುರ್ತುಸ್ಥಿತಿ ಸಮಯದಲ್ಲಿಯೂ ಆರ್ಥಿಕ ಹೊರೆ ತಪ್ಪಿಸಲು ಸಹಾಯ ಮಾಡಬಹುದು ಎನ್ನುತ್ತಾರೆ ತಜ್ಞರು.

ಯಾವುದೇ ಆರೋಗ್ಯ ತುರ್ತುಸ್ಥಿತಿ ನಿಮ್ಮ ಜೀವನವನ್ನು ತಲೆಕೆಳಗಾಗಿ ಮಾಡಬಹುದು. ಆದ್ದರಿಂದ ಮಾನಸಿಕ ಒತ್ತಡದಿಂದ ಮುಕ್ತಿ ಹೊಂದುವ ಮೂಲಕ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ವಯಸ್ಸಿನ ಹೊರತಾಗಿಯೂ ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯ ವಿಮಾ ಯೋಜನೆಗಳನ್ನು ತೆಗೆದುಕೊಳ್ಳುವುದು ಈಗಿನ ಅಗತ್ಯವಾಗಿದೆ.

ಆರೋಗ್ಯ ವಿಮೆ ಪ್ರಯೋಜನಗಳು:

  • ಕಡಿಮೆ ಪ್ರೀಮಿಯಂ:

ಯಾವುದೇ ಆರೋಗ್ಯ ವಿಮೆಯನ್ನು ಚಿಕ್ಕ ವಯಸ್ಸಿನಲ್ಲಿ ಖರೀದಿಸಿದರೆ ಪ್ರೀಮಿಯಂ ಶುಲ್ಕಗಳು ಕಡಿಮೆ. ನೀವು 30 ವರ್ಷಗಳನ್ನು ದಾಟಿದರೆ ಪ್ರೀಮಿಯಂಗಳು ಹೆಚ್ಚಾಗುತ್ತವೆ. ನಿಮ್ಮ 20ರ ಹರೆಯದಲ್ಲಿ ಮತ್ತು ನೀವು ಆರೋಗ್ಯವಾಗಿದ್ದೀರಿ ಎಂದು ನೀವು ಭಾವಿಸಿದರೆ ಆರೋಗ್ಯ ವಿಮೆಯನ್ನು ಖರೀದಿಸಲು ಇದು ಸರಿಯಾದ ಸಮಯ. ಯಾವುದೇ ನಿರ್ಣಾಯಕ ಸಮಸ್ಯೆಗಳಿಲ್ಲದಿದ್ದಾಗ ವಿಮೆ ಕಡಿಮೆ ಪ್ರೀಮಿಯಂನಲ್ಲಿ ದೊರೆಯುತ್ತದೆ.

ನಿಮ್ಮ ವಯಸ್ಸು ಜಾಸ್ತಿ ಇದ್ದಷ್ಟೂ ನಿಮ್ಮ ಚಿಕಿತ್ಸೆಯ ವೆಚ್ಚಗಳು ಜಾಸ್ತಿಯಾಗುತ್ತವೆ. ಹೀಗಾಗಿ, ನೀವು ಮುಂಚಿನಿಂದಲೇ ಸರಿಯಾದ ಇನ್ಶೂರ್ಡ್ ಮೊತ್ತ ಆಯ್ಕೆ ಮಾಡಬೇಕು.

ನೀವು ಯುವಕರಾಗಿರುವಾಗ, ನಿಮ್ಮ ಪಾಲಿಸಿಯ ಮೇಲಿನ ಪ್ರೀಮಿಯಂ ಕಡಿಮೆಯಾಗಿರುವುದಷ್ಟೇ ಅಲ್ಲದೆ, ನೀವು ವಿಮಾ ಮೊತ್ತ ಕ್ಲೇಮ್ ಮಾಡುವ ಸಾಧ್ಯತೆಗಳೂ ಕಡಿಮೆ ಇರುತ್ತವೆ. ಪಾಲಿಸಿಯ ನವೀಕರಣದ ವೇಳೆ ನಿಮಗೆ ನೋ-ಕ್ಲೇಮ್ ಬೋನಸ್ ಕೂಡ ಸಿಗುತ್ತದೆ. ಆ ಮೂಲಕ ನಿಮ್ಮ ಇನ್ಶೂರ್ಡ್ ಮೊತ್ತ ಹೆಚ್ಚಾಗುತ್ತದೆ.

  • ಕಾಯುವ ಅವಧಿ:

ಯಾವುದೇ ಆರೋಗ್ಯ ವಿಮಾ ಕಂಪನಿಯು ತಮ್ಮ ಯೋಜನೆಗಳಿಗಾಗಿ ಸ್ವಲ್ಪ ಕಾಯುವ ಸಮಯವನ್ನು ಹೊಂದಿರುತ್ತದೆ. ನಿಮಗೆ ತುರ್ತಾಗಿ ವಿಮೆ ಅಗತ್ಯವಿದ್ದರೆ, ಇದು ಕಾಯುವ ಸಮಯವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

  • ತುರ್ತು ಸಂದರ್ಭಗಳಲ್ಲಿ ಉಪಯುಕ್ತ:

ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಜತೆಗೆ, ಯುವ ಜನತೆ ಆತಂಕ, ಹೃದ್ರೋಗ ಸೇರದಂತೆ ಅನೇಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಭವಿಷ್ಯದ ವೈದ್ಯಕೀಯ ಚಿಕಿತ್ಸೆಗಳು ಮತ್ತು ತುರ್ತು ಸಂದರ್ಭಗಳಲ್ಲಿ ಹಣ ಬೇಕಾದರೆ, ಈ ವಿಮೆಗಳು ನೆರವಿಗೆ ಬರಲಿವೆ. ಇದೇ ಕಾರಣಕ್ಕಾಗಿ ಈಗಲೇ ಹೂಡಿಕೆ ಮಾಡುವುದು ಒಳ್ಳೆಯದು.

  • ಉತ್ತಮ ಹಣಕಾಸು ಯೋಜನೆ:

20 ಅಥವಾ 30ರ ಮೊದಲು ವಿಮೆಯನ್ನು ಖರೀದಿಸುವುದು ಉತ್ತಮ ಆರ್ಥಿಕ ಯೋಜನೆಗೆ ಕಾರಣವಾಗಬಹುದು. ನೀವು ಗಳಿಸಿದ ಹಣವನ್ನು ಸರಿಯಾಗಿ ನಿರ್ವಹಿಸುವುದರಿಂದ ಜೀವನವನ್ನು ಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ. ಎಚ್ಚರಿಕೆ ಇಲ್ಲದೇ ಸಂಭವಿಸಬಹುದಾದ ಅಪಾಯಗಳನ್ನು ಅರ್ಥಮಾಡಿಕೊಳ್ಳಿ. ನೀವು ಸಾಕಷ್ಟು ಆರೋಗ್ಯ ರಕ್ಷಣೆಯನ್ನು ಹೊಂದಿದ್ದರೆ, ಯಾವುದೇ ಚಿಂತೆಯಿಲ್ಲದೆ ಬದುಕಬಹುದು.

ಸಮಗ್ರ ಆರೋಗ್ಯ ವಿಮಾ ಯೋಜನೆ ಇದ್ದರೆ ಚಿಕಿತ್ಸೆಗಾಗಿ ಯಾರ ಬಳಿಯೂ ಹಣ ಕೇಳುವ ಮತ್ತು ಪಡೆಯುವ ಅಗತ್ಯವಿಲ್ಲ. ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳ ದೃಷ್ಟಿಯಿಂದ ಹೆಚ್ಚಿನ ಮಟ್ಟದ ಆರೈಕೆಯೊಂದಿಗೆ ಯೋಜನೆಗಳನ್ನು ಆಯ್ಕೆ ಮಾಡಕೊಳ್ಳಬೇಕು.

ಇದನ್ನೂ ಓದಿ:ಶೇ.30ರಷ್ಟು ಮಂದಿ ಲಸಿಕೆ ಪಡೆದ 6 ತಿಂಗಳ ಬಳಿಕ ವ್ಯಾಕ್ಸಿನ್‌ ಪ್ರತಿರಕ್ಷೆ ಕಳೆದುಕೊಳ್ಳುತ್ತಾರೆ: ಅಧ್ಯಯನ

ABOUT THE AUTHOR

...view details