ಕರ್ನಾಟಕ

karnataka

ETV Bharat / lifestyle

ರ‍್ಯಾಪರ್ ಅಥವಾ ರುಚಿ... ಚಾಕೋಲೆಟ್​​​ ಖರೀದಿಸುವಾಗ ನೀವು ಅಟ್ರ್ಯಾಕ್ಟ್​ ಆಗೋದು ಯಾವುದಕ್ಕೆ!

ಚಾಕೋಲೆಟ್​​ ರುಚಿ ಹೇಗಿದ್ದರೂ, ಅದರ ರ‍್ಯಾಪರ್ ಮಾತ್ರವೇ ಖರೀದಿಸುವವರಿಗೆ ಪಸ್ಟ್​ ಇಂಪ್ರೆಷನ್​ ಆಗುತ್ತಂತೆ. ಹೀಗಂತ ವಿದೇಶೀ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಅಧ್ಯಯನದ ವರದಿಯೊಂದು ತಿಳಿಸಿದೆ. ಚಾಕೋಲೆಟ್​​ ಪ್ಯಾಕೇಜಿಂಗ್​ ಅಥವಾ ಚಾಕೋಲೆಟ್​​​ ರ‍್ಯಾಪರ್​ಗೆ ಗ್ರಾಹಕರು ಭಾವನಾತ್ಮಕವಾಗಿ ಅಡಿಕ್ಟ್​ ಆಗೋದೇ ಖರೀದಿಗೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿರೋ ಮಾಹಿತಿ.

By

Published : Sep 10, 2019, 11:09 AM IST

ಚಾಕಲೇಟ್​ ಖರೀದಿಸುವಾಗ ನೀವು ಅಟ್ರ್ಯಾಕ್ಟ್​ ಆಗೋದು ಯಾವುದಕ್ಕೆ

ವಾಷಿಂಗ್ಟನ್​​​(ಯುಎಸ್​ಎ):ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬೇಡಿ ಎಂಬ ನಾಣ್ಣುಡಿ ಕೇಳಿದ್ದೇವೆ. ಆದರೆ, ಜನರು ಚಾಕೋಲೆಟ್​​ಗಳನ್ನ ಖರೀದಿಸುವಾಗ ಅದರ ಪ್ಯಾಕಿಂಗ್​ನಿಂದ ಆಕರ್ಷಿತರಾಗಿ ಹೆಚ್ಚು ಖರೀದಿಸುತ್ತಾರಂತೆ. ಹೀಗಂತಾ ಅಧ್ಯಯನವೊಂದು ಹೇಳಿದೆ.

ಚಾಕೋಲೆಟ್​ಗಳ ಖರೀದಿಗಳನ್ನು ನಿರ್ಧರಿಸುವಲ್ಲಿ ರುಚಿ ಪ್ರಮುಖ ಅಂಶವಾಗಿದ್ದರೂ, ಆ ಚಾಕೋಲೆಟ್​​ ಪ್ಯಾಕೇಜಿಂಗ್​ ಅಥವಾ ಚಾಕೋಲೆಟ್​​​​ ರ‍್ಯಾಪರ್​ಗೆ ಗ್ರಾಹಕರು ಭಾವನಾತ್ಮಕವಾಗಿ ಅಡಿಕ್ಟ್​ ಆಗೋದೇ ಖರೀದಿಗೆ ಪ್ರೇರಣೆ ನೀಡುತ್ತದೆ ಎಂದು ಅಧ್ಯಯನವು ತೀರ್ಮಾನಿಸಿದೆ.

ಹೆಲಿಯಾನ್​ ಎಂಬ ವಿದೇಶೀ ಪತ್ರಿಕೆಯಲ್ಲಿ ಈ ಅಧ್ಯಯನದ ವರದಿ ಪ್ರಕಟಗೊಂಡಿದೆ. ಉತ್ಪನ್ನದ ಪರಿಮಳ, ಸುವಾಸನೆ ಮತ್ತು ವಿನ್ಯಾಸದಂತಹ ಆಂತರಿಕ ಅಂಶಗಳನ್ನು ಗ್ರಾಹಕರು ಗ್ರಹಿಸುವ ರೀತಿ ಹಾಗೂ ಪ್ಯಾಕೇಜಿಂಗ್, ಮಾಹಿತಿ, ಬ್ರಾಂಡ್ ಹೆಸರು ಮತ್ತು ಬೆಲೆಯಂತಹ ಬಾಹ್ಯ ಸೂಚನೆಗಳನ್ನು ಹೇಗೆ ಗ್ರಹಿಸುತ್ತಾರೆ ಎಂಬುದರಲ್ಲಿ ವ್ಯತ್ಯಾಸಗಳಿವೆ. ಇದು ಗ್ರಾಹಕರ ಅರಿವು ಮತ್ತು ಮಾನಸ್ಥಿತಿಗೆ ಸಂಬಂಧಿಸಿದೆ ಎಂದು ಆಸ್ಟ್ರೇಲಿಯಾದ ಸ್ಕೂಲ್ ಆಫ್ ಅಗ್ರಿಕಲ್ಚರ್ ಅಂಡ್ ಫುಡ್​ನ ಸಹ-ಪ್ರಮುಖ ತನಿಖಾಧಿಕಾರಿ ಫ್ರಾಂಕ್ ಆರ್. ಡನ್ಶಿಯಾ ಹೇಳುತ್ತಾರೆ.

ಈ ಅಧ್ಯಯನಕ್ಕಾಗಿ 25ರಿಂದ 55 ವರ್ಷ ವಯಸ್ಸಿನ ಸುಮಾರು 75 ಜನರನ್ನು ಪರೀಕ್ಷೆ ನಡೆಸಲಾಯಿತು. ಇದರಲ್ಲಿ 59 ಶೇ. ಸ್ತ್ರೀಯರಿದ್ದರು. ಮೂರು ವಿವಿಧ ಆಯಾಮಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕೇವಲ ರುಚಿ, ಪ್ರಾಕೇಜಿಂಗ್​ ಆಧಾರದ ಮೇಲೆ ಹಾಗೂ ಚಾಕೋಲೆಟ್​​​​ ಮತ್ತು ಪ್ಯಾಕೇಜಿಂಗ್​ ಎರಡೂ ಸೇರಿಸಿ ಪರೀಕ್ಷಿಸಲಾಯ್ತು. ಆದರೆ,​ ರ‍್ಯಾಪರ್​ ನೋಡಿಯೇ ಗ್ರಾಹಕರು ಹೆಚ್ಚು ಆಕರ್ಷಿತರಾಗಿ ಚಾಕಲೇಟ್​ ತಿಂದಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ಪ್ಯಾಕ್​ ಮಾಡಿದ ಆಹಾರಕ್ಕೆ ಅಡಿಕ್ಟ್​ ಆಗಿದ್ದೀರಾ? ಭಾರತದ ಪ್ಯಾಕ್​ಫುಡ್​ ಉತ್ಪನ್ನ ತಿನ್ಬೇಡಿ ಅನ್ತಿದೆ ಜಾಗತಿಕ ಸಮೀಕ್ಷೆ!

ಅಧ್ಯಯನದಲ್ಲಿ ಭಾಗವಹಿಸಿದವರು ಪ್ಯಾಕೇಜಿಂಗ್ ಅನ್ನು ವಿವರಿಸಲು ಬಲವಾದ ಭಾವನಾತ್ಮಕ ಕಾರಣಗಳನ್ನು ತಿಳಿಸಿದ್ದಾರೆ. ಚಾಕೋಲೆಟ್​​ ರುಚಿ ಹೇಗಿದ್ದರೂ, ಅದರ ರ‍್ಯಾಪರ್ ಮಾತ್ರವೇ ಖರೀದಿಸುವವರಿಗೆ ಪಸ್ಟ್​ ಇಂಪ್ರೆಷನ್​ ಆಗುತ್ತಂತೆ.

ABOUT THE AUTHOR

...view details