ಕರ್ನಾಟಕ

karnataka

ETV Bharat / lifestyle

ಆಹಾ ಆರೋಗ್ಯಕ್ಕೆ ಅಮೃತ ಈ ಬೆಟ್ಟದ ನೆಲ್ಲಿಕಾಯಿ.. ತಿಂದ್ರೆ ಪ್ರಯೋಜನೆಗಳು ಹಲವು

ಬೆಟ್ಟದ ನಲ್ಲಿಕಾಯಿ (Indian Gooseberry) ಆಯುರ್ವೇದದ ಭಾಷೆಯಲ್ಲಿ ಆಮ್ಲಾ ಅಂತ ಕರೆಯುವ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಆಗುವ ಪ್ರಯೋಜನೆಗಳು ಅಷ್ಟಿಷ್ಟಲ್ಲ. ಕೂದಲು ಉದುರುವಿಕೆ, ಆಸಿಡಿಟಿ, ಜೀರ್ಣಾಂಗಕ್ರಿಯೆ, ತೂಕ ಇಳಿಕೆ, ಥೈರಾಯ್ಡ್ ಮತ್ತು ಮಧುಮೇಹಕ್ಕೆ ನಿಯಂತ್ರಣ ಹಾಗೂ ರೋಗನಿರೋಧಕ ಶಕ್ತಿ ಸೇರಿ ಹಲವಾರು ಪ್ರಯೋಜನೆಗಳನ್ನು ಬೆಟ್ಟದ ನಲ್ಲಿಕಾಯಿಯಿಂದ ಪಡೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Amla: A Treasure Of Nutritional Properties
ಬೆಟ್ಟದ ನಲ್ಲಿಕಾಯಿಯಲ್ಲಿರುವ ಈ ಪ್ರಯೋಜನೆಗಳು ತಿಳಿದರೆ ಇದನ್ನು ನೀವು ತಿನ್ನಲೇ ಬೇಕು ಅನಿಸುತ್ತದೆ...

By

Published : Nov 22, 2021, 8:00 PM IST

ಹೈದರಾಬಾದ್‌: ದೇಶದಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿಯನ್ನು (Indian Gooseberry) (ಆಮ್ಲಾ) ಸಂಜೀವಿನಿಗೆ (a life-saving medicine) ಹೋಲಿಸಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ಸೌಂದರ್ಯ ಮತ್ತು ಆರೋಗ್ಯ ವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನೆಗಳಿವೆ.

ಆಯುರ್ವೇದದ ಪ್ರಕಾರ, ನೆಲ್ಲಿಕಾಯಿ ನಿಯಮಿತ ಸೇವನೆಯಿಂದ ಕೂದಲು ಉದುರುವಿಕೆ, ಆಸಿಡಿಟಿ, ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಬಹುದು. ಮಾತ್ರವಲ್ಲದೆ, ತೂಕ ಇಳಿಕೆಗೂ ಸಹಕಾರಿಯಾಗಿದ್ದು, ಥೈರಾಯ್ಡ್ ಮತ್ತು ಮಧುಮೇಹಕ್ಕೆ ನಿಯಂತ್ರಿಸುತ್ತದೆ. ದೃಷ್ಟಿ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆಮ್ಲಾ ಎಂತಲೂ ಕರೆಯುವ ಈ ನೆಲ್ಲಿಕಾಯಿ ತಿಂದ್ರೆ ತಲೆಯಿಂದ ಪಾದದವರೆಗೆ ಲಾಭವಿದೆ ಎನ್ನುತ್ತಾರೆ ಉತ್ತರಾಖಂಡದ ಆಯುರ್ವೇದ ವೈದ್ಯೆ ಡಾ.ವಂದನಾ ಕಂಠೂರ. ಇದು ಪ್ರಯೋಜನಕಾರಿ ಮತ್ತು ವರ್ಷವಿಡೀ ಸೇವಿಸಬಹುದಾದರೂ, ಚಳಿಗಾಲದಲ್ಲಿ ಇದನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಸೇವಿಸುವುದು ಪುರುಷರ ಮತ್ತು ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಎಂದು ಅವರು ವಿವರಿಸಿದ್ದಾರೆ..

ಬೆಟ್ಟದ ನೆಲ್ಲಿಕಾಯಿ ಮತ್ತು ಆಯುರ್ವೇದಕ್ಕಿರುವ ಸಂಬಂಧ..

ಗುಸ್ ಬೆರಿ (Indian Gooseberry) ಅಂತಲೂ ಕರೆಯುವ ಬೆಟ್ಟದ ನೆಲ್ಲಿಕಾಯಿಯಿಂದ ಜ್ಯೂಸ್, ಪೌಡರ್, ಮುರಬ್ಬ (ಉಪ್ಪಿನಕಾಯಿಯ ಒಂದು ರೂಪ) ಅಥವಾ ಚಟ್ನಿ ಯಾವುದೇ ರೂಪದಲ್ಲಿದ್ದರೂ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿ ಎನ್ನುತ್ತಾರೆ ಡಾ.ವಂದನಾ ಕಂಠೂರ. ಇದು ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅಲ್ಲದೆ, ಇದು ವಿಟಮಿನ್ ಸಿ ಯ ಮುಖ್ಯ ಮೂಲಗಳಲ್ಲಿ ಒಂದಾಗಿದೆ. ಉದಾಹರಣೆಗೆ, 100 ಗ್ರಾಂ ನೆಲ್ಲಿಕಾಯಿಯು ಕಿತ್ತಳೆಗಿಂತ 10 ರಿಂದ 30 ಪಟ್ಟು ಹೆಚ್ಚು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಅದಕ್ಕಾಗಿಯೇ ನೆಲ್ಲಿಕಾಯಿಯ ನಿಯಮಿತ ಸೇವನೆಯು ವಿಶೇಷವಾಗಿ ಚಳಿಗಾಲದಲ್ಲಿ ತುಂಬಾ ಉಪಯುಕ್ತವಾಗಿದೆ.

ಆಯುರ್ವೇದದಲ್ಲಿ ಆಮ್ಲಾಕಿ ಎಂದು ಕರೆಯಲ್ಪಡುವ ಇದನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆಯಲ್ಲಿಯೂ ಇದರ ಗುಣಲಕ್ಷಣಗಳನ್ನು ಉಲ್ಲೇಖಿಸಲಾಗಿದೆ. ಆಯುರ್ವೇದದಲ್ಲಿ, ಆಮ್ಲಾವನ್ನು ಅಧೋಭಾಗಹರ್ ಸಂಶಮನ್ ಔಷಧಿ ಎಂದೂ ಕರೆಯುತ್ತಾರೆ. ಇದು ದೇಹದಿಂದ ಮಲ ರೂಪದಲ್ಲಿ ಕಲ್ಮಶಗಳನ್ನು ಅಥವಾ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಕೂದಲು ಉದುರುವಿಕೆ ತಡೆಯಲು ನೆಲ್ಲಿಕಾಯಿ ರಾಮಬಾಣ..!

ಜ್ವರ, ಕೆಮ್ಮು ಮತ್ತು ಕುಷ್ಠರೋಗ ಸೇರಿದಂತೆ ಅನೇಕ ಇತರ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಇದಲ್ಲದೆ, ಆಮ್ಲಾ ಸೇವನೆಯು ಜೀರ್ಣಕಾರಿ ಸಮಸ್ಯೆಗಳು ಮತ್ತು ಕಾಮಾಲೆಗಳನ್ನು ನಿಭಾಯಿಸಲು ಉಪಯುಕ್ತವೆಂದು ಪರಿಗಣಿಸಲಾಗಿದೆ. ಅಲ್ಲದೆ, ಇದು ಸೌಂದರ್ಯ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಅನೇಕ ರೋಗಗಳನ್ನು ತಡೆಯಬಹುದು ಎನ್ನುತ್ತಾರೆ ಡಾ. ವಂದನಾ. ಆದರೂ ಆಮ್ಲಾವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಮಿತಿಮೀರಿದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಪ್ರತಿದಿನ ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳು

  • ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನೇಕ ಕಾಲೋಚಿತ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ಹಸಿವನ್ನು ಹೆಚ್ಚಿಸುತ್ತದೆ.
  • ಆಮ್ಲಾವನ್ನು ನಿಯಮಿತವಾಗಿ ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಲು ಇದು ಸಹಕಾರಿ.
  • ಆಮ್ಲಾ ರಸವನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಅಲ್ಲದೆ, ಹಸಿ ಆಮ್ಲಾವನ್ನು ತಿನ್ನುವುದು ಅಥವಾ ಆಮ್ಲಾ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ವಸಡುಗಳು ಬಲವಾಗಿರುತ್ತವೆ ಮತ್ತು ಬಾಯಿಯ ದುರ್ವಾಸನೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.
  • ಆಮ್ಲಾ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ಇದರ ಸೇವನೆಯು ಮೊಡವೆಗಳಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಜೊತೆಗೆ ಮೈಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
  • ಸೇವನೆ ಮಾತ್ರವಲ್ಲದೆ, ಬೆಟ್ಟದ ನೆಲ್ಲಿಕಾಯಿ ಪೇಸ್ಟ್‌ ಅನ್ನು ತಲೆಗೆ ಹಚ್ಚಿದರೆ ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಒಣ ಕೂದಲಿಗೆ ಆಮ್ಲಾ ಪೇಸ್ಟ್ ಅನ್ನು ಹಚ್ಚುವುದರಿಂದ ದಪ್ಪ ಹಾಗೂ ಹೊಳೆಯುವಂತೆ ಮಾಡುತ್ತದೆ. ಇದಲ್ಲದೆ, ತಲೆಹೊಟ್ಟು, ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಸಹ ಇದರಿಂದ ತಡೆಯಬಹುದಾಗಿದೆ.

ABOUT THE AUTHOR

...view details