ನವದೆಹಲಿ : ಆರೋಗ್ಯಕರ ಜೀವನ ಶೈಲಿಗಳಾದ ಮದ್ಯಪಾನ, ದೂಮಪಾನಗಳಿಂದ ದೂರ ಇರುವುದು, ವ್ಯಾಯಾಮ ಅಭ್ಯಾಸಗಳನ್ನು ಮಾಡುವುದು ಅನುವಂಶಿಕ ಸಮಸ್ಯೆಗಳು ಇದ್ದರೂ, ಕ್ಯಾನ್ಸರ್ ಅಪಾಯ ತಪ್ಪಿಸುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.
ನಾನ್ಜಿಂಗ್ ಮೆಡಿಕಲ್ ಯೂನಿರ್ವಸಿಟಿಯ ಪ್ರಾಧ್ಯಾಪಕ ಗುವಾಂಗ್ಫು ಜಿನ್ ಮತ್ತು ಸಹೋದ್ಯೋಗಿಗಳು ನಡೆಸಿದ ಅಧ್ಯಯನದಲ್ಲಿ ಈ ವಿಷಯ ತಿಳಿದು ಬಂದಿದೆ. ಕ್ಯಾನ್ಸರ್ ಕುರಿತ ಈ ಅಧ್ಯಯನ ವರದಿ ಜರ್ನಲ್ ಆಫ್ ದಿ ಅಮೆರಿಕನ್ ಅಸೋಶಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ನಲ್ಲಿ ಪ್ರಕಟಗೊಂಡಿದೆ.
ವ್ಯಕ್ತಿಯ ಕ್ಯಾನ್ಸರ್ ಅಪಾಯದ ವೈಯುಕ್ತಿಕ ಅಂದಾಜುಗಳು (Personalized estimates of an individual's cancer risk -PRS) ಎಂಬ ಹೆಸರಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೇಹಕ್ಕೆ ಎದುರಾಗುವ ಕ್ಯಾನ್ಸರ್ ಅಪಾಯಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿದೆ.
ಕ್ಯಾನ್ಸರ್ನ ಅನುವಂಶಿಕ ಅಪಾಯವನ್ನು ಒಟ್ಟಾರೆಯಾಗಿ ಅಳೆಯಲು ನಾವು ಕ್ಯಾನ್ಸರ್ ಪಾಲಿಜೆನಿಕ್ ರಿಸ್ಕ್ ಸ್ಕೋರ್ (Cancer polygenic risk score CPRS) ರಚಿಸಿದ್ದೇವೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಜಿನ್ ಹೇಳಿದ್ದಾರೆ.