ಕರ್ನಾಟಕ

karnataka

ETV Bharat / lifestyle

ಅಗ್ಗದ ಬೆಲೆಯ ವೆಂಟಿಲೇಟರ್ ಶೋಧಿಸಿದ ಬೆಂಗಳೂರಿನ ವೈಮಾನಿಕ ಪ್ರಯೋಗಾಲಯ! - ಸಿಎಸ್​ಐಆರ್​ ವೆಂಟಿಲೇಟರ್

ಸ್ವಾಸ್ಥ್ಯ ವಾಯು ಬಿಪಾಪ್ ವೆಂಟಿಲೇಟರ್, ಮೈಕ್ರೋ ಕಂಟ್ರೋಲರ್ ಆಧಾರಿತ ನಿಗದಿತ ಕ್ಲೋಸ್ಡ್ ಲೂಪ್ ಅಡಾಪ್ಟಿವ್ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಇದರೊಳಗೆ ಜೈವಿಕ ಹೊಂದಾಣಿಕೆ ಇರುವ 3ಡಿ ಪ್ರಿಂಟೆಡ್ ಮಾನಿಫೋಲ್ಡ್ ಮತ್ತು ಕಪ್ಲರ್ ಜೊತೆಗೆ ಹೆಪಾ ಫಿಲ್ಟರ್(ಪರಿಣಾಮಕಾರಿ ಕೆಲಸ ಮಾಡುವ ವಾಯು ಫಿಲ್ಟರ್) ಇದೆ. ಈ ವಿನೂತನ ಅಂಶಗಳುಳ್ಳ ವೆಂಟಿಲೇಟರ್ ಸೋಂಕು ಹರಡುವ ಭಯ ದೂರ ಮಾಡುತ್ತದೆ.

Invasive Ventilator
ವೆಂಟಿಲೇಟರ್

By

Published : May 11, 2020, 10:42 PM IST

ಬೆಂಗಳೂರು: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ ಸಿಎಸ್ಐಆರ್​ನ ಅಂಗ ಸಂಸ್ಥೆಯಾದ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ಎಎಲ್) 36 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು 'ಸ್ವಾಸ್ಥ್ಯ ವಾಯು' ಬಿಪಾಪ್ ವೆಂಟಿಲೇಟರ್ ಅಭಿವೃದ್ಧಿಪಡಿಸಿದೆ.

ಇದು ಮೈಕ್ರೋ ಕಂಟ್ರೋಲರ್ ಆಧಾರಿತ ವೆಂಟಿಲೇಟರ್​ ನಿಗದಿತ ಕ್ಲೋಸ್ಡ್ ಲೂಪ್ ಅಡಾಪ್ಟಿವ್ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಇದರೊಳಗೆ ಜೈವಿಕ ಹೊಂದಾಣಿಕೆ ಇರುವ 3ಡಿ ಪ್ರಿಂಟೆಡ್ ಮಾನಿಫೋಲ್ಡ್ ಮತ್ತು ಕಪ್ಲರ್ ಜೊತೆಗೆ ಹೆಪಾ ಫಿಲ್ಟರ್(ಪರಿಣಾಮಕಾರಿ ಕೆಲಸ ಮಾಡುವ ವಾಯು ಫಿಲ್ಟರ್) ಇದೆ. ಈ ವಿನೂತನ ಅಂಶಗಳುಳ್ಳ ವೆಂಟಿಲೇಟರ್ ಸೋಂಕು ಹರಡುವ ಭಯ ದೂರ ಮಾಡುತ್ತದೆ. ಸಿಪಿಎಪಿ, ಟೈಮ್ಡ್, ಆಟೋ ಬಿಪಾಪ್ ಮಾದರಿ ಮತ್ತು ಆಕ್ಸಿಜನ್ ಕಾನ್ಸನ್ ಟ್ರೇಟರ್​ಗಳ ಜೊತೆ ಸಂಪರ್ಕ ಘಟಕವನ್ನು ಆಂತರಿಕವಾಗಿ ಹೊಂದಿದೆ.

ಈ ವ್ಯವಸ್ಥೆಯನ್ನು ಎನ್ಎಬಿಎಲ್​ನ ಪ್ರಮಾಣೀಕೃತ ಸಂಸ್ಥೆಗಳು ಸುರಕ್ಷತೆ ಮತ್ತು ಸಾಧನೆ ಗುರುತಿಸಿ ಪ್ರಮಾಣೀಕರಿಸಿವೆ. ಈ ವ್ಯವಸ್ಥೆ ಕಠಿಣ ಜೈವಿಕ ವೈದ್ಯಕೀಯ ಪ್ರಯೋಗಗಳು ಮತ್ತು ಬಿಟಾ ಕ್ಲಿನಿಕಲ್ ಟ್ರಯಲ್​ಗಳನ್ನು ಎನ್ಎಎಲ್ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದೆ.

ಎನ್ಎಎಲ್ ನಿರ್ದೇಶಕ ಜಿತೇಂದ್ರ ಜೆ.ಜಾಧವ್ ಮಾತನಾಡಿ, ಜಾಗತಿಕ ಅನುಭವಗಳನ್ನು ಆಧರಿಸಿ ಭಾರತ ಹಾಗೂ ವಿದೇಶದ ಪಲ್ಮನೊಲಾಜಿಸ್ಟ್ (ಶ್ವಾಸಕೋಶ ತಜ್ಞರು) ಸಹೋದ್ಯೋಗಿಗಳು ನೀಡಿದ ಖಚಿತ ಮಾಹಿತಿ ಆಧರಿಸಿ ಎನ್ಎಎಲ್, ಬಿಪಾಪ್ ವೇಸಿವ್ ವೆಂಟಿಲೇಟರ್ ಅಭಿವೃದ್ಧಿಪಡಿಸಿದೆ. ಅದನ್ನು ಹೊರಗಿನಿಂದ ಆಕ್ಸಿಜನ್ ಕಾನ್ಸನ್ ಟ್ರೇಟರ್​ಗೆ ಸಂಪರ್ಕ ಕಲ್ಪಿಸಿ, ಮಧ್ಯಮ ಹಂತದಲ್ಲಿ ಅಥವಾ ಸೌಮ್ಯ ಹಂತದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಸೋಂಕಿತರಿಗೆ ವೆಂಟಿಲೇಷನ್ ಮತ್ತು ಇಂಟ್ಯುಬೇಷನ್ ಅಗತ್ಯವಿರುತ್ತದೆ ಎಂದರು.

ಯಾವುದೇ ವಿಶೇಷ ನರ್ಸಿಂಗ್ ವ್ಯವಸ್ಥೆಯಿಲ್ಲದೆ ಸರಳ ರೀತಿಯಲ್ಲಿ ಬಳಸಬಹುದಾಗಿದೆ. ಕಡಿಮೆ ವೆಚ್ಚ ಮತ್ತು ಸ್ವದೇಶಿ ಬಿಡಿ ಭಾಗಗಳನ್ನು ಸೇರಿಸಿ ಅದನ್ನು ರೂಪಿಸಲಾಗಿದೆ. ಸಿಎಸ್ಐಆರ್-ಎನ್ಎಎಲ್ ಇದನ್ನು ಇನ್ನಷ್ಟು ಮುಂಚೂಣಿಗೆ ಕೊಂಡೊಯ್ಯಲು ಪ್ರಯತ್ನಗಳನ್ನು ನಡೆಸುತ್ತಿದ್ದು, ನಿಯಂತ್ರಣ ಸಂಸ್ಥೆಗಳ ಅನುಮೋದನೆಗಾಗಿ ಕಾಯುತ್ತಿದೆ. ಈಗಾಗಲೇ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್​ಗಳ ಉತ್ಪಾದನೆಗೆ ಸಾರ್ವಜನಿಕ ಖಾಸಗಿ ಉದ್ಯಮಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಸಮಾಲೋಚನೆ ಆರಂಭಿಸಿದೆ.

ABOUT THE AUTHOR

...view details