ಕೋವಿಡ್-19 ಮತ್ತು ಬೊಜ್ಜು: 2021ರ ಅಟ್ಲಾಸ್ ವರದಿ ಹೇಳುವುದೇನು?
ಜಗತ್ತಿನಾದ್ಯಂತ ಮಹಾಮಾರಿ ಕೊರೊನಾಗೆ ಬಲಿಯಾದವರಲ್ಲಿ ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದವರ ಪ್ರಮಾಣ ಶೇ.90ರಷ್ಟಿದೆ.
ಕೋವಿಡ್-19 ಮತ್ತು ಬೊಜ್ಜು
By
Published : Mar 5, 2021, 4:41 PM IST
ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ಥಿಸಂಧಿವಾತ, ಹೃದಯಕ್ಕೆ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ಪಿತ್ತಜನಕಾಂಗದ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್ಗಳನ್ನು ತಂದೊಡ್ಡುವ ಬೊಜ್ಜು, ಇದೀಗ ಕೊರೊನಾ ಸೋಂಕಿತರ ಸಾವಿಗೂ ಬಹುಮುಖ್ಯ ಕಾರಣವಾಗಿದೆ ಎಂಬ ಸತ್ಯ ಬಹಿರಂಗವಾಗಿದೆ.
ಬೊಜ್ಜು, ಅಧಿಕ ತೂಕ ಹೊಂದಿರುವ ವಯಸ್ಕರು ಹೆಚ್ಚಿರುವ ದೇಶಗಳಲ್ಲೇ ಕೋವಿಡ್ ಮರಣ ಪ್ರಮಾಣ ಹೆಚ್ಚಿದೆ ಎಂದು 2021ರ ಅಟ್ಲಾಸ್ ವರದಿ ತಿಳಿಸಿದೆ. 2021ರ ಫೆಬ್ರವರಿ ಅಂತ್ಯದ ವೇಳೆಗೆ ಪ್ರಪಂಚದಲ್ಲಿ 2.5 ಮಿಲಿಯನ್ ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈ ಪೈಕಿ 2.2 ಸಾವುಗಳು ಅಧಿಕ ತೂಕದ ಜನರಿರುವುದಾಗಿ ವರ್ಗೀಕರಿಸಿದ ದೇಶಗಳಲ್ಲಿ ಸಂಭವಿಸಿದೆ.
ಅಟ್ಲಾಸ್ ವರದಿ ಹೇಳುವ ಪ್ರಕಾರ, ಯಾವ ದೇಶದಲ್ಲಿ ಶೇ.50ಕ್ಕಿಂತ ಹೆಚ್ಚಿನ ವಯಸ್ಕರು ಅಧಿಕ ತೂಕ ಹೊಂದಿದ್ದಾರೋ ಅಲ್ಲಿ ಒಂದು ಲಕ್ಷ ಜನಸಂಖ್ಯೆಗೆ 66.8 ಕೋವಿಡ್ ಸಾವು ವರದಿಯಾಗಿದೆ. ಯಾವ ದೇಶದಲ್ಲಿ ಅಧಿಕ ತೂಕ ಹೊಂದಿರುವ ವಯಸ್ಕರು ಸಂಖ್ಯೆ ಶೇ.50ಕ್ಕಿಂತ ಕಡಿಮೆ ಇದೆಯೋ ಅಲ್ಲಿ ಲಕ್ಷ ಜನಸಂಖ್ಯೆಗೆ 4.5 ಸಾವು ವರದಿಯಾಗಿದೆ.
ಅಧಿಕ ತೂಕ ಹೊಂದಿರುವ ವಯಸ್ಕರು
ಒಂದು ಲಕ್ಷ ಜನಸಂಖ್ಯೆಗೆ ಕೋವಿಡ್ ಸಾವು
ರಾಷ್ಟ್ರಗಳ ಸಂಖ್ಯೆ
<30%
6.6
38
30% -<40%
0.5
19
40%-<50%
3.2
13
50%- <60%
67.9
55
60%
65.6
39
ಒಟ್ಟಾರೆ ಜಗತ್ತಿನಾದ್ಯಂತ ಮಹಾಮಾರಿಗೆ ಬಲಿಯಾದವರಲ್ಲಿ ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದವರ ಪ್ರಮಾಣ ಶೇ.90ರಷ್ಟಿದೆ. ಬೊಜ್ಜು ಅಧಿಕ ತೂಕವನ್ನು ಸೂಚಿಸುತ್ತದೆ. ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬ್ರೆಜಿಲ್ನಲ್ಲಿ ಮತ್ತೆ ಕೊರೊನಾ ಅಬ್ಬರ: ಒಂದೇ ದಿನ 71 ಸಾವಿರ ಕೇಸ್ ಪತ್ತೆ!
ಕೊಬ್ಬಿನ ಅಂಶ ಇರುವ ಆಹಾರ ಹಾಗೂ ಜಂಕ್ ಫುಡ್ ಸೇವನೆ ಕಡಿಮೆ ಮಾಡುವುದರಿಂದ, ಯೋಗ, ಏರೋಬಿಕ್ಸ್ ಅಥವಾ ಇನ್ನಾವುದೇ ವ್ಯಾಯಾಮವನ್ನು ಮಾಡುವುದರಿಂದ, ಹಸಿರು ತರಕಾರಿಗಳನ್ನು ಅಧಿಕವಾಗಿ ತಿನ್ನುವುದರಿಂದ ಬೊಜ್ಜಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.