ಕರ್ನಾಟಕ

karnataka

ETV Bharat / lifestyle

ಎಷ್ಟು ತಿಂದರೂ ಕಡಿಮೆಯಾಗದ ಹಸಿವು! 10 ವರ್ಷದ ಬಾಲಕನಿಗೆ ಅಪರೂಪದ ಕಾಯಿಲೆ

ಸಿಂಗಾಪುರದ 10 ವರ್ಷದ ಬಾಲಕನೋರ್ವ ಎಷ್ಟು ತಿಂದರೂ ಮತ್ತೆ ಮತ್ತೆ ಹಸಿವಾಗುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಪ್ರಿಡೇಟರ್ ವಿಲ್ಲಿ ಸಿಂಡ್ರೋಮ್ ಎಂಬ ಈ ಕಾಯಿಲೆಗೆ ಚಿಕಿತ್ಸೆಯೇ ಇಲ್ಲ ಎನ್ನಲಾಗಿದೆ.

10 year old boy feels constantly hungry because of rare genetic condition
ಎಷ್ಟು ತಿಂದರೂ ಕಡಿಮೆಯಾಗದ ಹಸಿವು! 10 ವರ್ಷದ ಬಾಲಕನಿಗೆ ಅಪರೂಪದ ಕಾಯಿಲೆ

By

Published : Mar 8, 2022, 6:14 PM IST

ಹೈದರಾಬಾದ್‌: ಒಮ್ಮೆ ಹೊಟ್ಟೆ ತುಂಬ ಊಟ ಮಾಡಿದರೆ ಕನಿಷ್ಠ ನಾಲ್ಕೈದು ಗಂಟೆಗಳಾದ್ರೂ ಹಸಿವಾಗದು. ಆದರೆ ಇಲ್ಲೊಬ್ಬ ಬಾಲಕನಿಗೆ ಎಷ್ಟೇ ತಿಂದರೂ ಕೇವಲ ಅರ್ಧ ಗಂಟೆಯೊಳಗೆ ತಡೆದುಕೊಳ್ಳಲಾಗದಷ್ಟು ಹಸಿವಾಗುತ್ತಿದೆ!.

ಸಿಂಗಾಪುರದ 10 ವರ್ಷದ ಬಾಲಕನೆೋರ್ವ ಇಂಥಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಎಷ್ಟು ತಿಂದರೂ ಹಸಿವಾಗುವುದು ಈ ರೋಗದ ಪ್ರಮುಖ ಲಕ್ಷಣ. ಇದರಿಂದಾಗಿ ಭವಿಷ್ಯದಲ್ಲಿ ಬಾಲಕನ ಪರಿಸ್ಥಿತಿ ಕುರಿತು ಪೋಷಕರು ಆತಂಕಗೊಂಡಿದ್ದಾರೆ.

ಅಪರೂಪದ ಕಾಯಿಲೆಗೆ ಮದ್ದಿಲ್ಲವೇಕೆ?ಇದನ್ನು ಪ್ರೇಡರ್ ವಿಲ್ಲಿ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದೊಂದು ಆನುವಂಶಿಕ ಸಮಸ್ಯೆ. ಕ್ರೋಮೋಸೋಮ್‌ 15ರಲ್ಲಿ ಕೆಲವು ಜೀನ್‌ಗಳು ಸಮರ್ಪಕವಾದ ರೀತಿಯಲ್ಲಿ ಕೆಲಸ ಮಾಡದಿದ್ದಲ್ಲಿ ಪ್ರಿಡೇಟರ್ ವಿಲ್ಲಿ ಸಿಂಡ್ರೋಮ್ ಉಂಟಾಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ.

ತಿನ್ನುತ್ತಲೇ ಇದ್ರೆ ಏನಾಗುತ್ತೆ?ಕೆಲವು ದಿನಗಳ ಕಾಲ ಡಯಟ್ ಬಗ್ಗೆ ತಲೆಕೆಡಿಸಿಕೊಳ್ಳದೆ ಇಷ್ಟಪಟ್ಟು ತಿಂದರೆ ಏನಾಗುತ್ತದೆ ಎಂಬುದು ನಮಗೆ ಚೆನ್ನಾಗಿ ಗೊತ್ತು. ಮೊದಲು ಹೊಟ್ಟೆ ತೂಕ ಹೆಚ್ಚಾಗುತ್ತದೆ. ನಂತರ ಅನೇಕ ಸಮಸ್ಯೆಗಳು ಬರುತ್ತವೆ.

ಪ್ರೇಡರ್ ವಿಲ್ಲಿ ರೋಗಿಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಭಾದಿಸುತ್ತವೆ. ನಿಯಂತ್ರಣವಿಲ್ಲದೆ ಅಸಹಜ ಪ್ರಮಾಣದ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ತೊಂದರೆಗೊಳಗಾಗಬಹುದು. ಗ್ಯಾಸ್ಟ್ರಿಕ್ ಟಿಶ್ಯೂ ನೆಕ್ರೋಸಿಸ್, ಹೊಟ್ಟೆ ಉಬ್ಬುವಿಕೆ ಹಾಗೂ ಗ್ಯಾಸ್ಟ್ರೋಪರೆಸಿಸ್‌ನಂತಹ ಸಮಸ್ಯೆಗಳೂ ಕಾಡಲಿವೆ.

ಈ ಅಸಹಜ ಹಸಿವು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ತಿನ್ನುತ್ತಲೇ ಇರಬೇಕೆಂಬ ಬಯಕೆಯನ್ನು ನಿಯಂತ್ರಿಸುವುದು ಇವರಿಗೆ ದೊಡ್ಡ ಸವಾಲಾಗಿರುತ್ತದೆ. ಸರಿಯಾದ ಮೇಲ್ವಿಚಾರಣೆಯಿಲ್ಲದೆ, ಈ ರೋಗಪೀಡಿತರ ದೇಹಕ್ಕೆ ಹಾನಿಯ ಜೊತೆಗೆ ಹಾಳಾದ ಆಹಾರವನ್ನು ಸೇವಿಸುವ ಸಾಧ್ಯತೆಯಿದೆ.

ಇಂಥ ಅಪರೂಪದ ಕಾಯಿಲೆಯಿಂದ ಬಳಲುವ ಮಕ್ಕಳು ಆಹಾರವನ್ನು ಬಚ್ಚಿಟ್ಟುಕೊಳ್ಳುವ, ಕಳ್ಳತನ ಮಾಡುವ, ತಿನಿಸುಗಳಾಗಿ ಹಣ ಕಳ್ಳತನ ಮಾಡುವಂತಹ ಕೆಟ್ಟ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ರೇರ್‌ ಡಿಸೀಸ್‌ ಸಂಸ್ಥೆ ಹೇಳಿದೆ.

ಡೇವಿಡ್‌ ಪರಿಸ್ಥಿತಿ ಏನು?ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಡೇವಿಡ್ ಉತ್ತಮ ಆರೋಗ್ಯಕ್ಕಾಗಿ ಅವರ ಕುಟುಂಬವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಈತನ ತೂಕವನ್ನು ನಿಯಂತ್ರಣದಲ್ಲಿಡಲು ನಿರ್ದಿಷ್ಟವಾಗಿ ಒತ್ತು ನೀಡಲಾಯಿತು. ಇದಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಡೇವಿಡ್‌ ನೆಚ್ಚಿನ ಆಹಾರವನ್ನು ತಿನ್ನುವುದನ್ನು ತಡೆಯಲು ಪೋಷಕರು ಅಡುಗೆಮನೆಗೆ ಬೀಗ ಹಾಕುತ್ತಾರೆ. ಏನು ತಿನ್ನಬೇಕು ಮತ್ತು ಯಾವಾಗ ಡೇವಿಡ್ ಅದಕ್ಕೆ ಬದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂಬ ಸ್ಪಷ್ಟ ವೇಳಾಪಟ್ಟಿಯನ್ನು ಮಾಡಿದ್ದಾರೆ.

ಡೇವಿಡ್ ತೂಕದ ನಿಯಂತ್ರಣದಲ್ಲಿರುವವರೆಗೆ ಭಯಪಡುವ ಅಗತ್ಯವಿಲ್ಲ. ಈತನ ಆಯಸ್ಸು, ಇತರೆ ಅಂಶಗಳು ಸಾಮಾನ್ಯ ಜನರಂತೆಯೇ ಇರುತ್ತವೆ. ಆದರೆ ಏನನ್ನಾದರೂ ತಿನ್ನುತ್ತಲೇ ಇರಬೇಕೆಂಬ ಬಯಕೆಯನ್ನು ನಿಯಂತ್ರಿಸುವುದು ಈತನಿಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ:ಒಟ್ಟಾರೆ ಆರೋಗ್ಯಕ್ಕೆ ಜೇನುತುಪ್ಪದ ಉಪಯೋಗವೇನು? ಇಲ್ಲಿದೆ ಮಾಹಿತಿ..

For All Latest Updates

ABOUT THE AUTHOR

...view details