ನವದೆಹಲಿ:ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ವಾಟ್ಸ್ಆ್ಯಪ್ ಇದೀಗ ಮತ್ತೊಂದು ಸೌಲಭ್ಯ ನೀಡಿದ್ದು, ಈ ಮೂಲಕ ಡೆಸ್ಕ್ಟಾಪ್ ಆ್ಯಪ್ ಮೂಲಕವೂ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ.
ವಿಂಡೋಸ್ ಅಥವಾ ಐಒಎಸ್ ಸಿಸ್ಟಮ್ಗಳಲ್ಲಿ ಬಳಕೆ ಮಾಡುವ ವಾಟ್ಸ್ಆ್ಯಪ್ಗಳಲ್ಲಿ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯ ನೀಡಲಾಗಿದೆ. ಇದರಲ್ಲಿ ಗ್ರೂಪ್ ಕಾಲ್ ಮಾಡುವ ಅವಕಾಶ ನೀಡಲಾಗಿಲ್ಲವಾದರೂ, ಒಬ್ಬರಿಗೆ ಮಾತ್ರ ವಿಡಿಯೋ, ವಾಯ್ಸ್ ಕಾಲ್ ಮಾಡಬಹುದಾಗಿದೆ. ಈ ರೀತಿ ಕರೆ ಮಾಡಲು ನಿಮ್ಮ ಬಳಿ ವೆಬ್ ಕ್ಯಾಮ್ ಸೌಲಭ್ಯ ಇರಬೇಕಿದೆ.