ಕರ್ನಾಟಕ

karnataka

ETV Bharat / lifestyle

7000mAH ಬ್ಯಾಟರಿಯೊಂದಿಗೆ POVA 2 ಬಿಡುಗಡೆ ಮಾಡಿದ ಟೆಕ್ನೊ - POVA 2 ಬಿಡುಗಡೆ ಮಾಡಿದ ಟೆಕ್ನೊ

ಸ್ಮಾರ್ಟ್‌ಫೋನ್ 8MP ಡಾಟ್-ಇನ್ AI ಸೆಲ್ಫಿ ಕ್ಯಾಮೆರಾವನ್ನು F2.0 ಅಪರ್ಚರ್‌ನೊಂದಿಗೆ ಹೊಂದಿದೆ. ಇದು ಡ್ಯುಯಲ್ ಫ್ಲ್ಯಾಷ್‌ಲೈಟ್‌ಗಳನ್ನ ಹೊಂದಿದೆ. ಇದು 2K ವಿಡಿಯೋ ರೆಕಾರ್ಡಿಂಗ್‌ಗೆ ಸೂಕ್ತವಾಗಿದೆ. ಫ್ರಂಟ್ ಕ್ಯಾಮೆರಾ 2X ಝೂಮ್‌ನೊಂದಿಗೆ ಸ್ಟಿಲ್ ಫೋಟೋಗ್ರಫಿಗೂ ಬಹು ಸ್ವರೂಪಗಳನ್ನು ಬೆಂಬಲಿಸುತ್ತದೆ..

tech
tech

By

Published : Aug 3, 2021, 8:29 PM IST

ನವದೆಹಲಿ :ಜಾಗತಿಕ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರಾಂಡ್ ಟೆಕ್ನೊ ತನ್ನ ಪ್ರೀಮಿಯಂ POVA ಸರಣಿಯಿಂದ 7000mAh ಬ್ಯಾಟರಿಯೊಂದಿಗೆ POVA 2 ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ನಂಬಲಾಗದ ಶಕ್ತಿ ಮತ್ತು ವೇಗ ಒದಗಿಸುವ ಗುರಿ ಹೊಂದಿದೆ.

POVA 2 ಅಮೆಜಾನ್‌ನಲ್ಲಿ ಆಗಸ್ಟ್ 5ರಿಂದ ಎರಡು ರೂಪಾಂತರಗಳಲ್ಲಿ (Dazzle Black, Polar Silver and Energy Blue ಬಣ್ಣಗಳಲ್ಲಿ) ಮಾರಾಟಕ್ಕೆ ಲಭ್ಯವಿರುತ್ತದೆ. 4GB+64GBಗೆ ರೂ. 10,499 ಮತ್ತು 6GB+128GBಗೆ ರೂ. 12,499 ವಿಶೇಷ ಬಿಡುಗಡೆ ಬೆಲೆಯಲ್ಲಿ ಲಭ್ಯವಿರಲಿದೆ. ಈ ಅವಧಿಯ ನಂತರ POVA 2 ಬೆಲೆ 10,999 (4GB) ಮತ್ತು Rs 12,999 (6GB) ಇರಲಿದೆ.

POVA 2ನಲ್ಲಿ 48MP AI ಕ್ವಾಡ್ ಕ್ಯಾಮೆರಾ ಇದ್ದು, F1.79 ಅಪರ್ಚರ್ ಮತ್ತು 2MP ಮ್ಯಾಕ್ರೋ ಲೆನ್ಸ್ ಇದೆ. ಬ್ಯಾಕ್ ಕ್ಯಾಮೆರಾವು ಕ್ವಾಡ್ ಫ್ಲ್ಯಾಶ್‌ನೊಂದಿಗೆ ಪೂರಕವಾಗಿದೆ. ಕತ್ತಲೆಯಲ್ಲಿ ಫೋಕಸ್ ಮಾಡಿದ ಪ್ರಕಾಶಿತ ಚಿತ್ರಗಳನ್ನು ಕ್ಲಿಕ್ ಮಾಡಲು ಅನುವು ಮಾಡಿ ಕೊಡುತ್ತದೆ. ಇದರ ಮ್ಯಾಕ್ರೋ, ಡೆಪ್ತ್ ಮತ್ತು AI ಲೆನ್ಸ್ ಬಳಕೆದಾರರ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಅನುಭವವನ್ನು ಹೆಚ್ಚಿಸುತ್ತದೆ.

ಸ್ಮಾರ್ಟ್‌ಫೋನ್ 8MP ಡಾಟ್-ಇನ್ AI ಸೆಲ್ಫಿ ಕ್ಯಾಮೆರಾವನ್ನು F2.0 ಅಪರ್ಚರ್‌ನೊಂದಿಗೆ ಹೊಂದಿದೆ. ಇದು ಡ್ಯುಯಲ್ ಫ್ಲ್ಯಾಷ್‌ಲೈಟ್‌ಗಳನ್ನ ಹೊಂದಿದೆ. ಇದು 2K ವಿಡಿಯೋ ರೆಕಾರ್ಡಿಂಗ್‌ಗೆ ಸೂಕ್ತವಾಗಿದೆ. ಫ್ರಂಟ್ ಕ್ಯಾಮೆರಾ 2X ಝೂಮ್‌ನೊಂದಿಗೆ ಸ್ಟಿಲ್ ಫೋಟೋಗ್ರಫಿಗೂ ಬಹು ಸ್ವರೂಪಗಳನ್ನು ಬೆಂಬಲಿಸುತ್ತದೆ.

POVA 2 6.9 ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. ಸೈಡ್ ಫಿಂಗರ್ ಪ್ರಿಂಟ್ ಅನ್‌ಲಾಕ್ ಫೀಚರ್ 0.24 ಸೆಕೆಂಡ್ ಫಾಸ್ಟ್ ಅನ್​ಲಾಕ್ ನೀಡುತ್ತದೆ. ಫೇಸ್ ಅನ್​ಲಾಕ್ ಬಳಕೆದಾರರ ಡೇಟಾ ಮತ್ತು ಗೌಪ್ಯತೆಯನ್ನು ರಕ್ಷಿಸುತ್ತದೆ ಎಂದು ಕಂಪನಿ ಹೇಳಿದೆ.

ABOUT THE AUTHOR

...view details