ಮುಂಬೈ:ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಲ್ಲೊಂದಾದ ಟಾಟಾ ಕ್ಲಿಕ್ ಆಪಲ್ ಗ್ರಾಹಕರಿಗೆ ಸರ್ಪ್ರೈಸ್ ನೀಡಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಸ ಐಫೋನ್ 13 ಅವನ್ನು ಗ್ರಾಹಕರಿಗೆ ತಲುಪಿಸುತ್ತಿರುವ ಮೊದಲ ಸಂಸ್ಥೆಯಾಗಿದೆ.
ನಿನ್ನೆ ಬೆಳಗ್ಗೆ 8.01ಕ್ಕೆ ಟಾಟಾ ಕ್ಲಿಕ್ ಬಹುನಿರೀಕ್ಷಿತ ಫೋನ್ ಅನ್ನು ಅದೃಷ್ಟವಂತ ಗ್ರಾಹಕರಿಗೆ ವಿಶೇಷವಾಗಿ ಕಪ್ಪು ಪೆಟ್ಟಿಗೆಗಳಲ್ಲಿ ಹಸ್ತಾಂತರಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಟಾಟಾ ಕ್ಲಿಕ್‌ನ ಮುಖ್ಯ ಪೂರೈಕೆ ಅಧಿಕಾರಿ ಸಂದೀಪ್ ಕುಲಕರ್ಣಿ, ನಿರಂತರವಾಗಿ ಮೊದಲು ಗ್ರಾಹಕರ ಅನುಭವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ. ಹೊಸ ಫೋನ್‌ಗಳೊಂದಿಗೆ ನಮ್ಮ ಗ್ರಾಹಕರ ಮುಖದಲ್ಲಿ ನಗು ಮೂಡಿಸುವ ಇನ್ನೊಂದು ಪ್ರಯತ್ನವಾಗಿದೆ ಎಂದು ಹೇಳಿದರು.