ಕರ್ನಾಟಕ

karnataka

ETV Bharat / lifestyle

ಗುಣಮಟ್ಟದ ಪ್ರಮಾಣೀಕರಣ ಪಡೆದ ರಿಯಲ್ಮಿ ಸ್ಮಾರ್ಟ್​ಫೋನ್​ಗಳು.. - ರಿಯಲ್ಮಿ ಸ್ಮಾರ್ಟ್​ಫೋನ್

ಎಲ್ಲಾ ರಿಯಲ್ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಗುಣಮಟ್ಟದ ನಿಯಂತ್ರಣ ಮತ್ತು ಪರೀಕ್ಷೆಗಳನ್ನು ಮಾಡಲು ಪ್ರಮಾಣೀಕರಣವನ್ನು ಬಳಸುವುದಾಗಿ ಕಂಪನಿ ಹೇಳಿದೆ. ಟಿಯುವಿ ರೈನ್‌ಲ್ಯಾಂಡ್ ಸ್ಮಾರ್ಟ್‌ಫೋನ್ ಹೈ-ರಿಲಯೆಬಿಲಿಟಿ ಸರ್ಟಿಫಿಕೇಟ್ ಪ್ರಕ್ರಿಯೆಯು 23 ಪ್ರಮುಖ ಪರೀಕ್ಷೆಗಳನ್ನು ಒಳಗೊಂಡಿತ್ತು..

Realme
Realme

By

Published : Apr 7, 2021, 7:16 PM IST

ನವದೆಹಲಿ :ಟಿಯುವಿ ರೈನ್‌ಲ್ಯಾಂಡ್ ಹೈ-ರಿಲಯೆಬಿಲಿಟಿ ಸರ್ಟಿಫಿಕೇಟ್ ಪಡೆದ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ರಿಯಲ್ಮಿ ಹೊರಹೊಮ್ಮಿದೆ. ರಿಯಲ್ಮಿ ಸಿ21 ಮತ್ತು ರಿಯಲ್ಮಿಸಿ 25 ಈ ಸರ್ಟಿಫಿಕೇಟ್ ಪಡೆದ ಮೊದಲ ಸ್ಮಾರ್ಟ್​ಫೋನ್​ಗಳಾಗಿವೆ.

"ನಾವು ಕ್ವಾಲಿಟಿ ಟಿಯುವಿ ರೈನ್ಲ್ಯಾಂಡ್​ನೊಂದಿಗೆ ಪಾಲುದಾರಿಕೆ ಹೊಂದಿದೆ. ಸ್ಮಾರ್ಟ್‌ಫೋನ್​ಗಳಿಗಾಗಿ ಹೊಸ, ನವೀಕರಿಸಿದ ಗುಣಮಟ್ಟದ ಮಾನದಂಡಗಳನ್ನು ಹೊಂದಿಸಲು ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತಿದ್ದೇವೆ" ಎಂದು ರಿಯಲ್ಮಿ ಉಪಾಧ್ಯಕ್ಷ ಮಾಧವ್ ಶೇಠ್ ಹೇಳಿದ್ದಾರೆ.

ಎಲ್ಲಾ ರಿಯಲ್ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಗುಣಮಟ್ಟದ ನಿಯಂತ್ರಣ ಮತ್ತು ಪರೀಕ್ಷೆಗಳನ್ನು ಮಾಡಲು ಪ್ರಮಾಣೀಕರಣವನ್ನು ಬಳಸುವುದಾಗಿ ಕಂಪನಿ ಹೇಳಿದೆ. ಟಿಯುವಿ ರೈನ್‌ಲ್ಯಾಂಡ್ ಸ್ಮಾರ್ಟ್‌ಫೋನ್ ಹೈ-ರಿಲಯೆಬಿಲಿಟಿ ಸರ್ಟಿಫಿಕೇಟ್ ಪ್ರಕ್ರಿಯೆಯು 23 ಪ್ರಮುಖ ಪರೀಕ್ಷೆಗಳನ್ನು ಒಳಗೊಂಡಿತ್ತು.

ABOUT THE AUTHOR

...view details