ಕರ್ನಾಟಕ

karnataka

ETV Bharat / lifestyle

Download ಮಾಡುವಾಗಲೇ ವಿಡಿಯೋ ವೀಕ್ಷಣೆಗೆ ನೆಟ್​​ಫ್ಲಿಕ್ಸ್​ ಅವಕಾಶ - ಆ್ಯಂಡ್ರಾಯ್ಡ್​ 7.64 ವರ್ಷನ್

ಒಂದು ಬಾರಿ ಒಂದೇ ವಿಡಿಯೋ ಡೌನ್​ಲೋಡ್ ಮಾಡಿಕೊಂಡು ಬಳಿಕ ವೀಕ್ಷಿಸಲು ಅನುವು ಮಾಡಿಕೊಡುತ್ತಿದ್ದ ನೆಟ್​ಫ್ಲಿಕ್ಸ್ ಇದೀಗ ತನ್ನ ಸೇವೆಯಲ್ಲಿ ಬದಲಾವಣೆ ತಂದಿದೆ. ಸಿನಿಮಾ ಅಥವಾ ಎಪಿಸೋಡ್ ಅರ್ಧ ಡೌನ್​ಲೋಡ್ ಆದ ಬಳಿಕವೂ ಆ ಚಿತ್ರ ವೀಕ್ಷಣೆಗೆ ಅವಕಾಶ ನೀಡಿದೆ.

netflix
ನೆಟ್​​ಫ್ಲಿಕ್ಸ್​

By

Published : Jun 29, 2021, 7:28 PM IST

ಸ್ಯಾನ್​ ಫ್ರಾನ್ಸಿಸ್ಕೋ( ಅಮೆರಿಕ): ಆ್ಯಂಡ್ರಾಯ್ಡ್ ಬಳಕೆದಾರರಿಗೆ ನೆಟ್​ಫ್ಲಿಕ್ಸ್ ಹೊಸ ಫೀಚರ್ ಹೊರತಂದಿದೆ. ನೆಟ್​​ಫ್ಲಿಕ್ಸ್​ನಲ್ಲಿ ಸಿನಿಮಾ ಸಂಪೂರ್ಣ ಡೌನ್​ಲೋಡ್​ ಮಾಡಿಕೊಳ್ಳುವ ಮೊದಲೇ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆದರೆ, ಈ ಸೇವೆ ಹೊಂದಲು ಆ್ಯಂಡ್ರಾಯ್ಡ್​ 7.64 ವರ್ಷನ್​​ಗಿಂತಲೂ ಮೇಲಿನ ಮೊಬೈಲ್​ ಫೋನ್ ನಿಮ್ಮ ಬಳಿ ಇರಬೇಕು ಎಂದು ಸಂಸ್ಥೆ ತಿಳಿಸಿದೆ.

ಇದಕ್ಕೂ ಮೊದಲು ನೆಟ್​ಫ್ಲಿಕ್ಸ್​ನಲ್ಲಿ ಒಂದು ಸಿನಿಮಾ ಸಂಪೂರ್ಣ ಡೌನ್​​​ಲೋನ್ ಆಗುವವರೆಗೂ ಚಿತ್ರ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಲಕ್ಷಾಂತರ ಬಳಕೆದಾರರು ಅಸಮಾಧಾನ ಹೊರಹಾಕಿದ್ದರು. ಇದೀಗ ಹೊಸದಾಗಿ ಅರ್ಧ ಸಿನಿಮಾ ಡೌನ್​ಲೋಡ್ ಆದ ಬಳಿಕ ಆ ಚಿತ್ರ ವೀಕ್ಷಿಸಲು ಅನುವು ಮಾಡಿಕೊಡಲಾಗಿದ್ದು, ಸಿನಿಮಾ ವೀಕ್ಷಿಸುತ್ತಲೇ ಹಿಂಬದಿಯಲ್ಲಿ ಡೌನ್​ಲೋಡ್ ಮಾಡಿಕೊಳ್ಳುವ ಸೌಲಭ್ಯ ನೀಡಲಾಗಿದೆ.

ಈ ಸೇವೆಯನ್ನ ಮೊದಲು ಆ್ಯಂಡ್ರಾಯ್ಡ್​ ಮೊಬೈಲ್ಸ್ ಮತ್ತು ಟ್ಯಾಬ್ಲೈಡ್​ಗಳಲ್ಲಿ ಹೊರತಂದಿದ್ದು, ಭವಿಷ್ಯದಲ್ಲಿ ಆ್ಯಪಲ್ ಐಒಎಸ್​ ಸಿಸ್ಟಂನಲ್ಲೂ ತರಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಓದಿ:ಪಾಕಿಸ್ತಾನದಲ್ಲಿ ಟಿಕ್​ಟಾಕ್ ತಾತ್ಕಾಲಿಕ ಬ್ಯಾನ್ : ಸಿಂಧ್ ಹೈಕೋರ್ಟ್ ಆದೇಶ

ABOUT THE AUTHOR

...view details