ನವದೆಹಲಿ: ಗ್ಲೋಬಲ್ ಸ್ಟ್ರೀಮಿಂಗ್ ಮ್ಯೂಜಿಕ್ ಆ್ಯಪ್ ಸ್ಪಾಟಿಫೈ ಇದೀಗ 12 ಭಾರತೀಯ ಭಾಷೆಗಳನ್ನು ಒಳಗೊಂಡಿದ್ದು, ಒಟ್ಟಾರೆ ಮೊಬೈಲ್ನಲ್ಲಿ 62 ಭಾಷೆಗಳಲ್ಲಿ ಸಿಗಲಿದೆ. ಈ ಹೊಸ ಭಾಷೆಗಳು ಹೆಚ್ಚು ಭಾರತೀಯ ಬಳಕೆದಾರರಿಗೆ ಸ್ಪಾಟಿಫೈಗೆ ಪ್ರವೇಶವನ್ನು ಪಡೆಯಲು ಸಹಾಯಕವಾಗಿವೆ.
ಹಿಂದಿ, ಗುಜರಾತಿ, ಭೋಜ್‌ಪುರಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಮತ್ತು ಬಂಗಾಳಿ ಭಾಷೆಗಳು ಸ್ಪಾಟಿಫೈಗೆ ಸೇರಿವೆ.
"ಭಾರತದಲ್ಲಿನ ನಮ್ಮ ಬಳಕೆದಾರರಿಗೆ ಉತ್ತಮವಾದ ಆಡಿಯೋ ವಿಷಯವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಉತ್ತಮ ವಿಷಯವನ್ನು ನೀಡುವ ಸಲುವಾಗಿ ನಮ್ಮ ಬಳಕೆದಾರರು ಮಾತನಾಡುವ ಭಾಷೆಗಳನ್ನು ನಾವು ಸೇರಿಸುತ್ತಿದ್ದೇವೆ. ಅವರು ಎಲ್ಲಿ ಬೇಕಾದ್ರೂ ಇರಲಿ, ಪರವಾಗಿಲ್ಲ" ಎಂದು ಕಂಪನಿ ಹೇಳಿದೆ.