ಕರ್ನಾಟಕ

karnataka

ETV Bharat / lifestyle

5ಜಿ ಮೊಬೈಲ್​ ಬಿಡುಗಡೆ ಮಾಡಿದ ಸ್ವದೇಶಿ ಕಂಪನಿ ಲಾವಾ: ನ.18ರಿಂದ ಮಾರುಕಟ್ಟೆಯಲ್ಲಿ ಲಭ್ಯ

ಲಾವಾ ಕಂಪನಿ 'ಅಗ್ನಿ' ಹೆಸರಿನಲ್ಲಿ ಇದೇ ಮೊದಲ ಬಾರಿಗೆ 5ಜಿ ಮೊಬೈಲ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಉತ್ತರಪ್ರದೇಶದ ನೊಯ್ಡಾದಲ್ಲಿರುವ ಮೊಬೈಲ್​ ತಯಾರಿಕಾ ಶಾಖೆಯಲ್ಲಿ ಉತ್ಪನ್ನವನ್ನು ತಯಾರಿಸಲಾಗುತ್ತಿದೆ.

lava 5g smartphone
5ಜಿ ಮೊಬೈಲ್​ ಬಿಡುಗಡೆ ಮಾಡಿದ ಲಾವಾ

By

Published : Nov 9, 2021, 7:40 PM IST

'ಲಾವಾ' ಮೊಬೈಲ್​ ಸಂಸ್ಥೆ ಗ್ರಾಹಕರನ್ನು ಸೆಳೆಯಲು 5ಜಿ ತರಂಗಾಂತರವುಳ್ಳ ಮೊಬೈಲ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೂಲಕ ಲಾವಾ 5ಜಿ ಮೊಬೈಲ್​ ತಯಾರಿಸಿದ ಮೊದಲ ದೇಶೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

'ಅಗ್ನಿ' ಹೆಸರಿನಲ್ಲಿ ಇದೇ ಮೊದಲ ಬಾರಿಗೆ 5ಜಿ ಮೊಬೈಲ್​ ಅನ್ನು ಮಾರುಕಟ್ಟೆಗೆ ಹೊರತಂದಿದೆ. ಉತ್ತರಪ್ರದೇಶದ ನೊಯ್ಡಾದಲ್ಲಿರುವ ಮೊಬೈಲ್​ ತಯಾರಿಕಾ ಶಾಖೆಯಲ್ಲಿ ಉತ್ಪನ್ನವನ್ನು ತಯಾರಿಸಲಾಗುತ್ತಿದೆ.

ಮೀಡಿಯಾಟೆಕ್​ ಡೈಮೆನ್ಸಿಟಿ 810 ಚಿಪ್​ಸೆಟ್​ ಹೊಂದಿರುವ 5ಜಿ ಮೊಬೈಲ್​ ಇದಾಗಿದೆ. ಜಾಗತಿಕ ಮಟ್ಟದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡ ಎರಡನೇ ಕಂಪನಿ ಲಾವಾ ಎಂದು ಕಂಪನಿಯ ಅಧ್ಯಕ್ಷ ಮತ್ತು ಬ್ಯುಸಿನೆಸ್​ ಹೆಡ್​ ಸುನೀಲ್​ ರೈನಾ ತಿಳಿಸಿದ್ದಾರೆ.

5ಜಿ ಅಗ್ನಿ ಮೊಬೈಲ್​ ಬೆಲೆ ಮಾರುಕಟ್ಟೆಯಲ್ಲಿ 19,999 ಇದ್ದು, ದೇಶದಲ್ಲಿ ಚಾಲನೆಯಲ್ಲಿರುವ ಚೀನಾ ಬ್ಯ್ರಾಂಡ್​ಗಳಿಗೆ ಹೋಲಿಸಿದರೆ ಇದು ಕಡಿಮೆ ಮತ್ತು ಮಾರುಕಟ್ಟೆಯಾಧಾರಿತ ದರವಾಗಿದೆ ಎಂದು ತಿಳಿಸಿದ್ದಾರೆ.

ಮೊಬೈಲ್​ನ ಗುಣವೈಶಿಷ್ಟ್ಯಗಳು:

*6.78 ಇಂಚಿನ ಗೊರಿಲ್ಲಾ ಗ್ಲಾಸ್​ವುಳ್ಳ ಪರದೆ

*8 ಜಿಬಿ ರ್ಯಾಮ್​, 128 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ

*5000 ಎಂಎಚ್​ ಬ್ಯಾಟರಿ, 30 ವ್ಯಾಟ್​ ಸೂಪರ್​ಫಾಸ್ಟ್​ ಚಾರ್ಜರ್​

*64+5+2+2 ಮೆಗಾಫಿಕ್ಸಲ್​ ಹಿಂಬದಿ ಕ್ಯಾಮೆರಾ

*16 ಎಂಪಿ ಮುಂಬದಿ ಕ್ಯಾಮೆರಾ

ಇದೇ ನವೆಂಬರ್​ 18 ರಿಂದ ಅಮೇಜಾನ್​ ಮತ್ತು ಫ್ಲಿಪ್​ಕಾರ್ಟ್​ನಲ್ಲಿ ಮಾರಾಟಕ್ಕೆ ಲಭ್ಯವಿದೆ.

ABOUT THE AUTHOR

...view details