ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಸಾಕಷ್ಟು ಸ್ಟ್ರಾಂಗ್ ಆಗಿದೆ. ಫೇಸ್‌ಬುಕ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಜೊತೆಗೆ ನಿಮ್ಮ ಸರ್ಫಿಂಗ್ ಡೇಟಾ ಮತ್ತು ಎಲ್ಲಾ ಚಟುವಟಿಕೆಗಳನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ.
ಆಫ್-ಫೇಸ್‌ಬುಕ್ ಆ್ಯಕ್ಟಿವಿಟಿ-ಟ್ರ್ಯಾಕಿಂಗ್ ಫೀಚರ್ಸ್ ಕುರಿತು ಮಾಹಿತಿ.. ನೀವು ಯಾವುದೇ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಸ್ವಲ್ಪ ಸಮಯ ಕಳೆದರೆ, ಫೇಸ್‌ಬುಕ್ ಅದರ ದಾಖಲೆ ಇಡುತ್ತದೆ. ನಿಮ್ಮ ಸರ್ಫಿಂಗ್ ವಿವರಗಳು ಅಥವಾ ಇತರ ಯಾವುದೇ ಚಟುವಟಿಕೆಯನ್ನು ಫೇಸ್‌ಬುಕ್ ತಿಳಿಯಬಾರದು ಎಂದು ನೀವು ಬಯಸಿದರೆ, ನೀವು ಫೇಸ್‌ಬುಕ್ ಗೌಪ್ಯತೆ ಸೆಟ್ಟಿಂಗ್‌ನ ಬದಲಾಯಿಸಬೇಕು.
ಫೇಸ್‌ಬುಕ್ ಗೌಪ್ಯತೆ ಕಾಳಜಿಯನ್ನು ಹೆಚ್ಚಿಸುವ ಮತ್ತೊಂದು ಫೇಸ್‌ಬುಕ್ ಫೀಚರ್ಸ್ ಎಂದರೆ 'ಆಫ್-ಫೇಸ್‌ಬುಕ್ ಆ್ಯಕ್ಟಿವಿಟಿ-ಟ್ರ್ಯಾಕಿಂಗ್ ಫೀಚರ್ಸ್'. ಇದು ಬಳಕೆದಾರರ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಬಳಕೆಯನ್ನು ಅವರ ಡಿವೈಸ್‌ಗಳಲ್ಲಿ ಟ್ರ್ಯಾಕ್ ಮಾಡುತ್ತದೆ.
ನೀವು ಫೇಸ್‌ಬುಕ್‌ನಿಂದ ನಿಮ್ಮ ವೆಬ್‌ಸೈಟ್ ಆ್ಯಕ್ಟಿವಿಟಿಯನ್ನು ಖಾಸಗಿಯಾಗಿಡಲು ಬಯಸಿದರೆ, ಸೆಟ್ಟಿಂಗ್ಗೆ ಹೋಗಿ ಆಫ್-ಫೇಸ್‌ಬುಕ್ ಆ್ಯಕ್ಟಿವಿಟಿ ಕ್ಲಿಕ್ ಮಾಡಿ, ಇದನ್ನು ಆಫ್ ಮಾಡಬಹುದು.