ಬೀಜಿಂಗ್:ಹುವಾವೇ ಮೇಟ್ 40ನೇ ಸರಣಿಯ ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡಿರುವ ಹುವಾವೇ ಕಂಪನಿ, ಇದು ಹುವಾವೇ ಕಿರಿನ್ ಉನ್ನತ - ಮಟ್ಟದ ಚಿಪ್ಗಳ ಕೊನೆಯ ಸರಣಿಯಾಗಬಹುದು ಎಂದು ತಿಳಿಸಿದೆ.
ಭದ್ರತೆ ದೃಷ್ಟಿಯಿಂದ ಅಮೆರಿಕ ವ್ಯಾಪಾರ ನಿರ್ಬಂಧವನ್ನು ಹೇರಿದ್ದು, ಹೀಗಾಗಿ ಕಿರಿನ್ ಉನ್ನತ - ಮಟ್ಟದ ಚಿಪ್ಗಳನ್ನೊಳಗೊಂಡ ಕೊನೆಯ ಸರಣಿ ಇದಾಗಬಹುದು ಎಂದು ಹುವಾವೇ ಗ್ರಾಹಕ ವ್ಯವಹಾರ ಘಟಕದ ಸಿಇಒ ರಿಚರ್ಡ್ ಯು ಹೇಳಿದ್ದಾರೆ.
ಹುವಾವೇ ಮೇಟ್ 40 ಪ್ರೊ ಈ ಕೆಳಗಿನನ ವೈಶಿಷ್ಟ್ಯಗಳನ್ನು ಹೊಂದಿವೆ:
- ಎಡ್ಜ್-ಟು-ಎಡ್ಜ್ 88 ಡಿಗ್ರಿ ಹಾರಿಜಾನ್ ಡಿಸ್ಪ್ಲೇ
- 90 ಹರ್ಟ್ಸ್ ಸ್ಕ್ರೀನ್ ರಿಫ್ರೆಶ್ ರೇಟ್
- 240 ಹರ್ಟ್ಸ್ ಸ್ಯಾಂಪ್ಲಿಂಗ್ ರೇಟ್
- ಟ್ರೆಡಿಷನಲ್ ವಾಲ್ಯೂಮ್ ಕೀ
- ಇದು ನೀರು ಮತ್ತು ಧೂಳು ನಿರೋಧಕ