ಸ್ಯಾನ್ ಫ್ರಾನ್ಸಿಸ್ಕೋ:ಕ್ಯುಪರ್ಟಿನೋ ಮೂಲದ ಆ್ಯಪಲ್ ಕಂಪನಿಯು ಶೀಘ್ರದಲ್ಲೇ ಫೋಲ್ಡಬಲ್ ಐಫೋನ್ (ಮಡಿಚಬಹುದಾದ)ನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಅಷ್ಟೇ ಅಲ್ಲದೆ, ಸ್ಟೈಲಸ್ ಬೆಂಬಲದೊಂದಿಗೆ ಬರಬಹುದೆಂದು ವರದಿಯೊಂದು ಹೇಳಿದೆ.
ಆ್ಯಪಲ್ ಕಂಪನಿ ಮತ್ತೊಂದು ಚಿಂತನೆ:ಫೋಲ್ಡೇಬಲ್ ಐಫೋನ್ ಬಿಡುಗಡೆಗೆ ಯೋಜನೆ!
ಆ್ಯಪಲ್ ಕಂಪನಿಯು ಶೀಘ್ರದಲ್ಲೇ ಫೋಲ್ಡೇಬಲ್ ಐಫೋನ್ನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಸಂಶೋಧನಾ ಸಂಸ್ಥೆ ಈಕ್ವಲ್ ಓಷನ್ ವರದಿ ಮಾಡಿದೆ.
ಸಂಶೋಧನಾ ಸಂಸ್ಥೆ ಈಕ್ವಲ್ ಓಷನ್ ಪ್ರಕಾರ, ಮುಂಬರುವ ಫೋಲ್ಡಬಲ್ ಐಫೋನ್ನಲ್ಲಿ ಪೆನ್ಸಿಲ್ ಇರಲಿದೆ. 7.3 ಮತ್ತು 7.6-ಇಂಚುಗಳಷ್ಟು ಗಾತ್ರದ ಮಡಚಬಹುದಾದ ಒಎಲ್ಇಡಿ ಸ್ಕ್ರೀನ್ನ್ನು ಹೊಂದಿರುವ ಕ್ಲಾಮ್‌ಶೆಲ್ ವಿನ್ಯಾಸದೊಂದಿಗೆ ಬರಲಿದೆ ಎಂದು ಇದು ಊಹಿಸುತ್ತದೆ.
ಕ್ಯುಪರ್ಟಿನೋ-ಟೆಕ್ ದೈತ್ಯ ಅಧಿಕೃತವಾಗಿ ಇದು ಮಡಿಸಬಹುದಾದ ಸ್ಮಾರ್ಟ್‌ಫೋನ್ ಅನ್ನು ಇದೇ ವರ್ಷ ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ. ಟೆಕ್ ದೈತ್ಯದ ಎರಡು ಮೂಲಮಾದರಿಗಳಾದ ಕ್ಲಾಮ್‌ಶೆಲ್ ಮತ್ತು ಪುಸ್ತಕದಂತಹ ಆಕಾರವನ್ನು ಅಭಿವೃದ್ಧಿಪಡಿಸಿದೆ. ಗ್ಯಾಲಕ್ಸಿ Z ಫ್ಲಿಪ್ ತರಹದ ವಿನ್ಯಾಸದೊಂದಿಗೆ ಮುಂಬರುವ ಫೋಲ್ಡಬಲ್ ಐಫೋನ್ ಬರಲಿದೆ.