ಕರ್ನಾಟಕ

karnataka

ETV Bharat / lifestyle

ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್​ಫೋನ್ ಎಂಟ್ರಿ!

ಸ್ಪಾರ್ಕ್​ 7 ಎರಡು ಮಾದರಿಯ ಸ್ಟೋರೆಜ್ ಹೊಂದಿದ್ದು, 2 ಜಿಬಿ+32 ಜಿಬಿ ಸ್ಟೋರೆಜ್ ಫೋನ್​ಗೆ 6,999 ರೂ. ಮತ್ತು 2 ಜಿಬಿ +64 ಜಿಬಿಗೆ 7,999 ರೂ. ಬೆಲೆ ನಿಗದಿಪಡಿಸಲಾಗಿದೆ. ಇದು ಹಸಿರು, ಮ್ಯಾಗ್ನೆಟ್ ಕಪ್ಪು ಮತ್ತು ಮಾರ್ಫಿಯಸ್ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.

By

Published : Apr 11, 2021, 12:58 AM IST

Features and specifications of TECNO SPARK 7
ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್​ ಫೋನ್

ನವದೆಹಲಿ :ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರಾಂಡ್ ಟೆಕ್ನೋ ಸ್ಪಾರ್ಕ್ 7 ಎಂಬ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಇದು ದೊಡ್ಡ ಡಿಸ್​ಪ್ಲೈ, ಸುಧಾರಿತ ಬ್ಯಾಟರಿ, ಎಐ ಆಧಾರಿತ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ.

ಅಮೆಜಾನ್‌ನಲ್ಲಿ ಟೆಕ್ನೋ ಸ್ಪಾರ್ಕ್ 7 ಮಾರಾಟ

ಟೆಕ್ನೋ ಸ್ಪಾರ್ಕ್ 7ರ ಫೀಚರ್​ಗಳು :

  • ಸ್ಪಾರ್ಕ್​ 7 ಎರಡು ಮಾದರಿಯ ಸ್ಟೋರೆಜ್ ಹೊಂದಿದ್ದು, 2 ಜಿಬಿ+32 ಜಿಬಿ ಸ್ಟೋರೆಜ್ ಫೋನ್​ಗೆ 6,999 ರೂ. ಮತ್ತು 2 ಜಿಬಿ +64 ಜಿಬಿಗೆ 7,999 ರೂ. ಬೆಲೆ ನಿಗದಿಪಡಿಸಲಾಗಿದೆ. ಇದು ಹಸಿರು, ಮ್ಯಾಗ್ನೆಟ್ ಕಪ್ಪು ಮತ್ತು ಮಾರ್ಫಿಯಸ್ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
  • ಏಪ್ರಿಲ್ 16ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮೊಬೈಲ್​ ಪ್ರಿಯರು ಖರೀದಿಸಬಹುದು
  • 720 x 1600 ರೆಸಲ್ಯೂಷನ್ ಹೊಂದಿರುವ 6.52- ಇಂಚಿನ ಎಚ್​​ಡಿ + ಡಾಟ್ ನಾಚ್ ಡಿಸ್ಪ್ಲೇ ಹೊಂದಿದೆ
  • ಶೇ 90.34ರಷ್ಟು ಬಾಡಿ ಸ್ಕ್ರೀನ್ ರೇಶ್ಯೂ ಮತ್ತು 20:9 ಆಸ್ಪೆಕ್ಟ್ ರೇಶ್ಯೂ, 480 ನಿಟ್ಸ್ ಬ್ರೈಟ್​ನೆಸ್​ ಸಿಸ್ಟಮ್​ ಹೊಂದಿದೆ
'ಇಂಡಿಯಾ-ಫಸ್ಟ್' ಕಾರ್ಯತಂತ್ರಕ್ಕೆ ಅನುಗುಣವಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಫೀಚರ್​ಗಳನ್ನು ಹೊಂದಿದೆ. ಟೆಕ್ನೋ 'ಮೇಡ್ ಫಾರ್ ಇಂಡಿಯಾ' ಸ್ಮಾರ್ಟ್‌ಫೋನ್‌ಗಳತ್ತ ನಾವು ಗಮನ ಹರಿಸುತ್ತಿದ್ದೇವೆ ಎಂದು ಟ್ರಾನ್ಷನ್ ಇಂಡಿಯಾದ ಸಿಇಒ ಅರಿಜೀತ್ ತಲಪಾತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details