ನವದೆಹಲಿ: ಲಾವಾ ಪಲ್ಸ್ 1 ಮೊಬೈಲ್ ಫೋನ್ ಬಳಕೆದಾರರಿಗೆ ಸೆನ್ಸರ್ ಮುಟ್ಟದೇ ತಮ್ಮ ದೇಹದ ಉಷ್ಣತೆಯನ್ನು ಅಳೆಯಲು ಅನುವು ಮಾಡಿಕೊಡುತ್ತದೆ.
ಬಳಕೆದಾರರು ತಮ್ಮ ಕೈ ಅಥವಾ ಹಣೆಯ ಹಿಂಭಾಗವನ್ನು ಸೆನ್ಸರ್ನಿಂದ ಕೆಲ ಸೆಂಟಿಮೀಟರ್ ದೂರದಲ್ಲಿ ಇಡಬೇಕು. ಅದು ತಕ್ಷಣ ದೇಹದ ಉಷ್ಣತೆಯನ್ನು ಡಿಸ್ಪ್ಲೇ ಮೇಲೆ ತೋರಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇವುಗಳನ್ನು ಮೊಬೈಲ್ನಲ್ಲಿಯೇ ಉಳಿಸಲು ಮತ್ತು ಸಂದೇಶಗಳ ಮೂಲಕ ಡೇಟಾವನ್ನು ಇತರರೊಂದಿಗೆ ಹಂಚಿಕೊಳ್ಳಲು ಕೂಡ ಬಳಕೆದಾರರಿಗೆ ಅವಕಾಶವಿದೆ.