ಲಾಕ್ಡೌನ್ ಅವಧಿಯಲ್ಲಿ ಗ್ಯಾಜೆಟ್ಸ್ ಪ್ರಿಯರಿಗಾಗಿ ಖುಷಿ ಸುದ್ದಿಯೊಂದು ಬಂದಿದೆ. ಆ್ಯಪಲ್ ಕಂಪನಿ ಕಡಿಮೆ ದರದ ಸೆಕೆಂಡ್ ಜನರೇಷನ್ ಐಫೋನ್ ಎಸ್ಇ (iPhone SE) ಬಿಡುಗಡೆ ಮಾಡಿದೆ. 4.7 ಇಂಚು ರೆಟಿನಾ HD ಡಿಸಪ್ಲೇ, ಹೈ ಸೆಕ್ಯೂರಿಟಿ ಟಚ್ ಐಡಿ ಹೊಂದಿರುವ ಇದು 42,500 ರೂಪಾಯಿಗಳ ಆರಂಭಿಕ ಬೆಲೆಗಳಲ್ಲಿ ಲಭ್ಯವಿದೆ.
64 ಜಿಬಿ, 128 ಜಿಬಿ ಮತ್ತು 256 ಜಿಬಿ ಮಾಡೆಲ್ಗಳಲ್ಲಿ ಕಪ್ಪು, ಬಿಳಿ ಹಾಗೂ ಕೆಂಪು (PRODUCT RED) ವರ್ಣಗಳಲ್ಲಿ ಸಿಗಲಿದೆ. ಆ್ಯಪಲ್ ಅಧಿಕೃತ ಡೀಲರ್ ಹಾಗೂ ಮಾರಾಟಗಾರರ ಬಳಿ ಮಾತ್ರ ಸಿಗುತ್ತಿರುವ ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಎಂದಿನಿಂದ ಸಿಗಲಿದೆ ಎಂಬುದು ಗೊತ್ತಾಗಿಲ್ಲ.
ಅಮೆರಿಕದಲ್ಲಿ ಆ್ಯಪಲ್ ವೆಬ್ಸೈಟ್ ಮೂಲಕ ಏ.17 ರಿಂದ ಪ್ರಿ ಆರ್ಡರ್ ಮಾಡಬಹುದಾಗಿದ್ದು, ಏ.24 ರಿಂದ ಅಮೆರಿಕದ ಆ್ಯಪಲ್ ಮಳಿಗೆಗಳು ಹಾಗೂ ವಿಶ್ವದ ಇತರ 40 ರಾಷ್ಟ್ರಗಳಲ್ಲಿ ಮಾರಾಟಕ್ಕೆ ಬಿಡುಗಡೆಯಾಗಲಿದೆ. ಸ್ಮಾರ್ಟ್ಫೋನ್ಗಳ ಅತಿ ಹೆಚ್ಚು ವೇಗದ ಚಿಪ್ ಆಗಿರುವ ಆ್ಯಪಲ್ ನಿರ್ಮಿತ A13 Bionic ಚಿಪ್ ಇದರಲ್ಲಿದೆ. ವೈರ್ಲೆಸ್ ಚಾರ್ಜಿಂಗ್ ಹಾಗೂ ಫಾಸ್ಟ್ ಚಾರ್ಜಿಂಗ್ ಎರಡೂ ಸೌಲಭ್ಯಗಳನ್ನು ಐಫೋನ್ ಎಸ್ಇ ಹೊಂದಿದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿ ಚಾರ್ಜ್ ಆಗುವುದು ವಿಶೇಷವಾಗಿದೆ.
ಐಫೋನ್ ಎಸ್ಇ ನಲ್ಲಿ ಡ್ಯೂಯೆಲ್ ಸಿಮ್ ಬಳಸಬಹುದಾಗಿದ್ದು, ಎರಡು ಸಿಮ್ ನಂಬರ ಇಟ್ಟುಕೊಳ್ಳುವ ಭಾರತೀಯ ಗ್ರಾಹಕರಿಗೆ ಅನುಕೂಲಕರವಾಗಿದೆ. ಐಫೋನ್ ಎಸ್ಇ ಮೊದಲ ಆವೃತ್ತಿಯ ಫೋನ್ಗಳು ಚಿಕ್ಕ ಸೈಜ್ ಹಾಗೂ ಕೈಗೆಟುಕುವ ದರದ ಕಾರಣದಿಂದ ಭಾರತದಲ್ಲಿ ಭಾರಿ ಜನಪ್ರಿಯವಾಗಿದ್ದವು.