ನವದೆಹಲಿ: ಭಾರತ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ಟೆಲ್ ಕರೆಗಳ ವಿಚಾರದಲ್ಲಿ ನೂತನ ನಿಯಮವನ್ನು ಜಾರಿಗೆ ತಂದಿದೆ.
ಕಳೆದ ತಿಂಗಳು ಜಿಯೋ ನೆಟ್ವರ್ಕ್ ಬಳಕೆದಾರರ ಸಂಖ್ಯೆಯಲ್ಲಿ ಏರ್ಟೆಲ್ ಅನ್ನು ಹಿಂದಿಕ್ಕಿದ್ದು ಈ ನಿಟ್ಟಿನಲ್ಲಿ ಏರ್ಟೆಲ್ ಬಳಕೆದಾರರನ್ನು ವ್ಯಾಲಿಡಿಟಿ ಮುಕ್ತಾಯ ಬಳಿಕ ತಕ್ಷಣವೇ ರೀಚಾರ್ಜ್ ಮಾಡುವಂತ ನಿಯಮವನ್ನು ಜಾರಿಗೊಳಿಸಿದೆ.
ವ್ಯಾಲಿಡಿಟಿ ಮುಕ್ತಾಯದ ಬಳಿಕ ಸುಮಾರು ಹದಿನೈದು ದಿನಗಳ ಕಾಲ ಏರ್ಟೆಲ್ ಬಳಕೆದಾರರು ಒಳಬರುವ ಕರೆಯನ್ನು ಸ್ವೀಕರಿಸುತ್ತಿದ್ದರು. ಆದರೆ ನೂತನ ನಿಯಮದಲ್ಲಿ ಆ ಕಾಲಾವಕಾಶವನ್ನು ಒಂದು ವಾರಕ್ಕೆ ಇಳಿಕೆ ಮಾಡಲಾಗಿದೆ.
ಜಿಯೋ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಟೆಲಿಕಾಂ ವಲಯದಲ್ಲಿ ಸಂಚಲನದ ಜೊತೆಗೆ ದೊಡ್ಡಮಟ್ಟದಲ್ಲಿ ಮಾರ್ಪಾಡು ಸಹ ಆಗಿದೆ. ಸದ್ಯದ ಏರ್ಟೆಲ್ ನಿಯಮದಿಂದ ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.