ಕರ್ನಾಟಕ

karnataka

ETV Bharat / lifestyle

ಭಾರತದಲ್ಲಿ ಪಬ್​ಜಿ ನಿಷೇಧ: ಅಪರಿಚಿತ​ ಬ್ಯಾಟಲ್​ಗ್ರೌಂಡ್​ ಬಗೆಗಿನ ಇಂಟರೆಸ್ಟಿಂಗ್​ ಸಂಗತಿಗಳು - ಅನ್ನೋನ್​ ಬ್ಯಾಟಲ್​ಗ್ರೌಡ್

2020ರ ಮೊದಲಾರ್ಧದಲ್ಲಿ 1.3 ಬಿಲಿಯನ್ ಆದಾಯ ಗಳಿಸಿದ್ದ ಬ್ಯಾಟಲ್ ರಾಯಲ್ ಶೀರ್ಷಿಕೆಯ ಪಬ್​ಜಿ ಮೊಬೈಲ್ ಗೇಮ್ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆದರೆ ಭಾರತಕ್ಕೂ ಮೊದಲು ಅನೇಕ ದೇಶಗಳು ಕೂಡ ಬ್ಯಾನ್​ ಮಾಡಿದ್ದವು.

PUBG MOBILE BAN IN INDIA
ಭಾರತದಲ್ಲಿ ಪಬ್​ಜಿ ನಿಷೇಧ

By

Published : Sep 3, 2020, 3:06 PM IST

ಹೈದರಾಬಾದ್: ಪಬ್​ಜಿ(Player Unknown’s Battlegrounds) ಎಂಬುದು ಯುದ್ಧದ ರಾಯಲ್ ಆಟವಾಗಿದ್ದು, ಇದನ್ನು ಪಿಸಿ ಮತ್ತು ಗೇಮಿಂಗ್ ಕನ್ಸೋಲ್‌ಗಾಗಿ 2017 ರಲ್ಲಿ ಪ್ರಾರಂಭಿಸಲಾಯಿತು.

ಪ್ರಾರಂಭವಾದ ನಂತರ ಪಬ್​ಜಿ ವಿಶ್ವದ ಅತ್ಯಂತ ಜನಪ್ರಿಯ ಆಟವಾಯಿತು. ಈ ಆಟವು 100 ಆಟಗಾರರಿಗೆ ಪರಸ್ಪರ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಕೊನೆಯಗಾಗಿ ಉಳಿದುಕೊಂಡ ವ್ಯಕ್ತಿ ಆಥವಾ ಒಂದು ತಂಡ ಗೆಲುವು ಸಾಧಿಸುತ್ತಾರೆ.

ಪಬ್​ಜಿ ಮೊಬೈಲ್‌ನ ಮೂಲ ದೇಶ:

ಕೊರಿಯಾದ ಗೇಮ್ ಡೆವಲಪರ್ ಬ್ಲೂಹೋಲ್​ನ ಅಂಗಸಂಸ್ಥೆಯಾದ ಪಬ್​ಜಿ ಕಾರ್ಪೊರೇಷನ್ ಈ ಆಟವನ್ನು ಪಿಸಿಗೆ ಅಭಿವೃದ್ಧಿಪಡಿಸಿದೆ. ಕೊರಿಯಾದ ಡೆವಲಪರ್, ಚೀನಾದ ಅತಿದೊಡ್ಡ ಗೇಮಿಂಗ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದ್ದು, ಇದು ಚೀನಾದಲ್ಲಿ ಗೇಮಿಂಗ್ ಮಾರುಕಟ್ಟೆಯನ್ನು ಪ್ರವೇಶಿಸಲು ಟೆನ್ಸೆಂಟ್ ಆಗಿದೆ. ಟೆನ್ಸೆಂಟ್ ಪಬ್​ಜಿಯ ಮೊಬೈಲ್ ಆವೃತ್ತಿಯನ್ನು ಸಹ ಪರಿಚಯಿಸಿತು.

ಈ ಆಟವು ಚೀನಾದಲ್ಲಿ ತ್ವರಿತ ಹಿಟ್ ಆಯಿತು. ಆದ್ರೆ ಮಾನಿಟೈಸ್​ ಮಾಡಲು ಚೀನಾ ಸರ್ಕಾರದ ಅನುಮೋದನೆ ಸಿಗಲಿಲ್ಲ.

ಆದಾಯ: ಬ್ಯಾಟಲ್ ರಾಯಲ್ ಶೀರ್ಷಿಕೆ ಪಬ್​ಜಿ ಮೊಬೈಲ್ ಗೇಮ್ 2020 ರ ಮೊದಲಾರ್ಧದಲ್ಲಿ 1.3 ಬಿಲಿಯನ್ (ಸರಿಸುಮಾರು 9,731 ಕೋಟಿ ರೂ.) ಗಳಿಕೆಯ ಆದಾಯವನ್ನು ಕಂಡಿದೆ. ಇದು ತನ್ನ ಜೀವಿತಾವಧಿಯ ಸಂಗ್ರಹವನ್ನು 3 ಬಿಲಿಯನ್ (ಸುಮಾರು 22,457 ಕೋಟಿ ರೂ.) ಗೆ ಹೆಚ್ಚಿಸಿಕೊಂಡಿದೆ.

ಪಬ್​ಜಿ ಮೊಬೈಲ್ 2020ರಲ್ಲಿ ಮಾತ್ರ ಜಾಗತಿಕವಾಗಿ 1.3 ಬಿಲಿಯನ್ ಆದಾಯ ಗಳಿಸಿದೆ. 2020ರ ಮಾರ್ಚ್​ನಲ್ಲಿ ಪಬ್​ಜಿ ಮೊಬೈಲ್ ಆದಾಯವು ದಾಖಲೆಯ ಗರಿಷ್ಠ 270 ಮಿಲಿಯನ್ ತಲುಪಿದೆ.

ವಿಶ್ವದಾದ್ಯಂತ ಒಟ್ಟು ಡೌನ್‌ಲೋಡ್‌ಗಳು:

ಪಬ್​ಜಿ ವಿಶ್ವದಾದ್ಯಂತ 734 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿದೆ. ಭಾರತದಲ್ಲೇ 175 ಮಿಲಿಯನ್ ಡೌನ್​ಲೋಡ್​ ಕಂಡಿರುವ ಪಬ್​ಜಿ, ಜಾಗತಿಕ ಡೌನ್​ಲೋಡ್​ಗಳ ಶೇಕಡಾ 24 ರಷ್ಟು ಪಾಲು ಹೊಂದಿದೆ. ಚೀನಾ ಶೇಕಡಾ 16.7 ಡೌನ್​ಲೋಡ್​ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಮೆರಿಕ ಶೇಕಡಾ 6.4 ಡೌನ್‌ಲೋಡ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಎಲ್ಲೆಲ್ಲಿ ಪಬ್‌ಜಿ ನಿಷೇಧ:

ಪಾಕಿಸ್ತಾನ: 2020 ರ ಜುಲೈನಲ್ಲಿ ಪಾಕಿಸ್ತಾನ ತಾತ್ಕಾಲಿಕವಾಗಿ ಪಬ್​ಜಿಯನ್ನು ನಿಷೇಧಿಸಿತು. ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಆಟಗಾರರ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ ಸಮಾಜದ ವಿವಿಧ ಭಾಗಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ಈ ಕ್ರಮ ಕೈಗೊಂಡಿತು.

ಇರಾಕ್:ಆಟಗಳು ಸಾರ್ವಜನಿಕರಿಗೆ ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಹೇಳಿಕೊಂಡ ನಂತರ 2019 ರಲ್ಲಿ ಇರಾಕ್​ನಲ್ಲಿ ಪಬ್​ಜಿ, ಬ್ಲೂ ವೇಲ್ ಮತ್ತು ಇದೇ ರೀತಿಯ ಆನ್‌ಲೈನ್ ವಿಡಿಯೋ ಗೇಮ್‌ಗಳನ್ನು ನಿಷೇಧಿಸಿತು.

2019 ಏಪ್ರಿಲ್ ತಿಂಗಳಲ್ಲಿ ನೇಪಾಳ, 2019 ರ ಜುಲೈನಲ್ಲಿ ಜೋರ್ಡಾನ್ ಮತ್ತು ಇಂಡೋನೇಷ್ಯಾದಲ್ಲಿ ನಿಷೇಧ ಹೇರಲಾಗಿದೆ.

ABOUT THE AUTHOR

...view details