ನವದೆಹಲಿ :ಮುಂದಿನ ಕೆಲ ವರ್ಷಗಳಲ್ಲಿ ಜಾಗತಿಕ ಗೇಮಿಂಗ್ ಉದ್ಯಮವು ಎತ್ತರಕ್ಕೆ ಬೆಳೆಯುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದ ಸೈಬರ್ ಅಪರಾಧಗಳು ಮತ್ತು ಸೈಬರ್ ಬೆದರಿಕೆಗಳನ್ನು ಪೋಷಕರು, ಆಟಗಾರರು ಮತ್ತು ಸರ್ಕಾರದ ಒಪ್ಪಿಕೊಳ್ಳಬೇಕಿದೆ ಎಂದು ಸೈಬರ್ ಸುರಕ್ಷತೆ ಮತ್ತು ನೀತಿ ತಜ್ಞರ ಎನ್‌ಜಿಒ ಆಗಿರುವ ಸೈಬರ್ ಪೀಸ್ ಫೌಂಡೇಶನ್ ವರದಿ ಮಾಡಿದೆ.
"ಆನ್‌ಲೈನ್ ಗೇಮಿಂಗ್-ಸಮಸ್ಯೆಗಳು, ಅಂತಿಮ ಬಳಕೆದಾರರು, ಪೋಷಕರು ಮತ್ತು ಸರ್ಕಾರಿ ನಿಯಮಗಳಿಗೆ ಶಿಫಾರಸುಗಳು" ಎಂಬ ಶೀರ್ಷಿಕೆಯಡಿ ಸೈಬರ್ ಪೀಸ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿಯಲ್ಲಿ ಆನ್‌ಲೈನ್ ಗೇಮ್ಗಳು ಮಕ್ಕಳನ್ನು ಹೇಗೆ 'ಲೈಂಗಿಕ ಚಟುವಟಿಕೆ'ಗಳೆಡೆ ಒಡ್ಡುತ್ತದೆ, ಅಲ್ಲಿಂದ 'ಮಾದಕ ವಸ್ತು' ಸೇವೆನೆಯೆಡೆ, ಬಳಿಕ ಆನ್‌ಲೈನ್ 'ಅಶ್ಲೀಲತೆ'ಯೆಡೆ ಸೆಳೆಯುತ್ತದೆ ಎಂಬುದನ್ನು ವಿವರಿಸಿದೆ.
ಅಷ್ಟೇ ಅಲ್ಲ, ಈ ಚಟಗಳಿಂದಾಗಿ ಮಕ್ಕಳು ಸೈಬರ್ ಬೆದರಿಕೆ, ಲೈಂಗಿಕ ಕಿರುಕುಳಗಳಿಗೆ ಗುರಿಯಾಗುತ್ತಾರೆ. ಕೊನೆಯದಾಗಿ ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯಂತಹ ತೀವ್ರ ಸಮಸ್ಯೆಗಳಿಗೆ ಆನ್‌ಲೈನ್ ಗೇಮಿಂಗ್ ಪ್ರಚೋದಿಸುತ್ತದೆ. ಆನ್‌ಲೈನ್ ಗೇಮ್ಗಳು ಮಾನಸಿಕ ಒತ್ತಡ ಉಂಟು ಮಾಡುವುದರ ಜೊತೆಗೆ ಆರೋಗ್ಯದ ಮೇಲೆ ನಾನಾ ಪರಿಣಾಮಗಳನ್ನು ಬೀರುತ್ತವೆ ಎಂಬುದು ಖಚಿತವಾಗಿದೆ.
ಹೆಚ್ಚಿನ ಓದಿಗೆ: ಶರ ವೇಗದಲ್ಲಿ ಸಾಗುತ್ತಿದೆ ಇ-ಗೇಮ್ ಗೀಳು: ನಿತ್ಯ ಚಟವಾಗುವತ್ತ ವಿಡಿಯೋ ಗೇಮ್!